ತೋಷಿಬಾ ಥ್ರೀವ್: ಹಳೆಯ ಸಮಸ್ಯೆಗಳಿಗೆ ಗುಡ್ ಬಾಯ್

ಆದರೂ ತೋಷಿಬಾ ಥ್ರೀವ್ ನಲ್ಲಿ ಒಂದು ಕೊರತೆಯಿತ್ತು. ಈ ಟ್ಯಾಬ್ಲೆಟ್ ಹಳೆಯ ಆಂಡ್ರಾಯ್ಡ್ ಆವೃತ್ತಿಯ ನೆರವಿನಿಂದ ಕಾರ್ಯನಿರ್ವಹಿಸುತ್ತಿತ್ತು. ಇದೀಗ ತೋಷಿಬಾ ಕಂಪನಿಯವರು ನೂತನ ಆಂಡ್ರಾಯ್ಡ್ ಆವೃತ್ತಿಗೆ ಇದನ್ನು ಅಪ್ ಗ್ರೇಡ್ ಮಾಡುವುದಾಗಿ ಪ್ರಕಟಿಸಿದ್ದಾರೆ. ಅಂದರೆ ಇನ್ನು ಮುಂದೆ ಈ ಟ್ಯಾಬ್ಲೆಟ್ ಆಂಡ್ರಾಯ್ಡ್ ಹನಿಕಾಂಬ್ ವರ್ಷನ್ ನಲ್ಲಿ ದೊರಕಲಿದೆ.
ತೋಷಿಬಾ ಥ್ರೀವ್ 7.1 ಇಂಚಿನ ಡಿಸ್ ಪ್ಲೇ ಹೊಂದಿದೆ. ಈ ಟ್ಯಾಬ್ಲೆಟ್ ಕಂಪ್ಯೂಟರನ್ನು ಕಂಪನಿಯು ಈ ವರ್ಷದ ಜುಲೈ ತಿಂಗಳಲ್ಲಿ ಅನಾವರಣ ಮಾಡಿತ್ತು.
ಹಳೆಯ ಆವೃತ್ತಿಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದವು. ಅಂದರೆ ಇದು ತನ್ನಷ್ಟಕ್ಕೆ ಸ್ಲೀಪಿಂಗ್ ಮೂಡಿಗೆ ಹೋಗುತ್ತಿತ್ತು. ಹಳೆಯ ಸಾಫ್ಟ್ ವೇರ್ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಯುಟ್ಯೂಬ್ ಮತ್ತು ಆಂಡ್ರಾಯ್ಡ್ ವಿಡ್ಜೆಟ್ ಮುಖ್ಯ ಸ್ಕ್ರೀನ್ ನಲ್ಲಿ ಕಾಣುತ್ತಿರಲಿಲ್ಲ. ಹೀಗೆ ಈ ಟ್ಯಾಬ್ಲೆಟಿನಲ್ಲಿ ಕೆಲವು ಸಮಸ್ಯೆಗಳು ಕಂಡು ಬಂದು, ಗ್ರಾಹಕರ ಮುಖ ಗಂಟಿಕ್ಕಿಕೊಳ್ಳುವಂತೆ ಮಾಡಿತ್ತು.
ಈ ಎಲ್ಲಾ ಸಮಸ್ಯೆಗಳನ್ನು ನೂತನ ಅಪ್ ಗ್ರೇಡ್ ಆವೃತ್ತಿಯಲ್ಲಿ ಪರಿಷ್ಕರಿಸಲಾಗಿದೆ. ಹಳೆಯ ಅಪರೇಟಿಂಗ್ ಸಿಸ್ಟಮ್ ಕೆಲವು ಅಪ್ಲಿಕೇಷನ್ ಗಳಿಗೆ ಬೆಂಬಲ ನೀಡುತ್ತಿರಲಿಲ್ಲ. ಸದ್ಯ ಹನಿಕಾಂಬ್ ಗೆ ಭಡ್ತಿ ಹೊಂದಿರುವುದರಿಂದ ಗ್ರಾಹಕರು ಹಳೆಯ ಸಮಸ್ಯೆಗಳಿಂದ ನಿರಾಳವಾಗಬಹುದು.


Click it and Unblock the Notifications








