ಮಕ್ಕಳಿಗಾಗಿ ಆಂಡ್ರಾಯ್ಡ್ ಟ್ಯಾಬ್ಲೆಟ್ ಕಂಪ್ಯೂಟರ್

Posted By:
ಮಕ್ಕಳಿಗಾಗಿ ಆಂಡ್ರಾಯ್ಡ್ ಟ್ಯಾಬ್ಲೆಟ್ ಕಂಪ್ಯೂಟರ್
ಟ್ಯಾಬ್ಲೆಟ್ ಕಂಪ್ಯೂಟರ್ ಉದ್ಯಮ ದಿನೇ ದಿನೇ ಜನಪ್ರಿಯಗೊಳ್ಳುತ್ತಿದೆ. ನುಂಗಲಾರದ ಟ್ಯಾಬ್ಲೆಟ್ ಇಂದು ವ್ಯಾಪಾರ ಮತ್ತು ಮನರಂಜನಾ ಸಾಧನಗಳಾಗಿ ಬೇಡಿಕೆ ಪಡೆದುಕೊಳ್ಳುತ್ತಿವೆ. ಟ್ಯಾಬ್ಲೆಟ್ ಕಂಪನಿಗಳು ಇದೀಗ ಹೊಸ ಮಾರುಕಟ್ಟೆ ಸಾಧ್ಯತೆಗಳತ್ತ ದೃಷ್ಟಿ ಹರಿಸುತ್ತಿವೆ.

ಕಂಪನಿಗಳ ಹೊಸ ಐಡಿಯಾ ಏನಪ್ಪ ಅಂದ್ರೆ ಟ್ಯಾಬ್ಲೆಟ್ ಕಂಪ್ಯೂಟರ್ ಮೂಲಕ ಮಕ್ಕಳಿಗೆ ಪಠ್ಯ ಕಲಿಸುವುದು. ಮಕ್ಕಳಿಗೆ ಎಲೆಕ್ಟ್ರಾನಿಕ್ ಗ್ಯಾಡ್ಜೆಟ್ ಮೂಲಕ ಕಲಿಸಲು ಕಂಪನಿಗಳು ಹೊರಟಿವೆ. ಈ ಸಾಧನಗಳಲ್ಲಿ ಮಕ್ಕಳಿಗೆ ಇಷ್ಟವಾಗುವ ಮನರಂಜನೆ ಕೂಡ ಇರಲಿದೆಯಂತೆ. ಅಂದರೆ ಮಕ್ಕಳ ಜ್ಞಾನಕೌಶಲ್ಯ ಹೆಚ್ಚಿಸುವ ಆಟಗಳು ಇರಲಿದೆ.

ಇದೀಗ ಜಾಗತಿಕ ಮಾರುಕಟ್ಟೆಯಲ್ಲಿ ನಾಬಿ ಕಂಪನಿಯು ಟಾಯ್ಸ್ ಆರ್ ಯು ಎಂಬ ಟ್ಯಾಬ್ಲೆಟ್ ಪರಿಚಯಿಸಿದೆ. ಇದು ಮಕ್ಕಳಿಗಾಗಿ ತಯಾರಿಸಿದ ಟ್ಯಾಬ್ಲೆಟ್. (ಮೊದಲ ಕನ್ನಡ ಗ್ಯಾಡ್ಜೆಟ್ ವೆಬ್ ಸೈಟ್ ಯಾವುದು?) ಈ ಟ್ಯಾಬ್ಲೆಟ್ ಕಂಪ್ಯೂಟರನ್ನು ಅಭಿವೃದ್ಧಿಪಡಿಸಲು FUHU ಕಂಪನಿ ಜೊತೆ ನಾಬಿ ಸಹಭಾಗಿತ್ವ ಮಾಡಿಕೊಂಡಿದೆ.

ನಾಬಿ ಕಂಪನಿಯ ಟ್ಯಾಬ್ಲೆಟ್ ಮಕ್ಕಳ ಪೋಷಕರಿಗೆ ಕೊಂಚ ತಬ್ಬಿಬ್ಬು ಉಂಟು ಮಾಡಬಹುದು. ಯಾಕೆಂದರೆ ಇದು ಆಂಡ್ರಾಯ್ಡ್ ಆಧರಿತ ಟ್ಯಾಬ್ಲೆಟ್. ಇದು 7 ಇಂಚಿನ ಡಿಸ್ ಪ್ಲೇ ಹೊಂದಿದ್ದು, 800 x 480 ರೆಸಲ್ಯೂಷನ್ ನೀಡುತ್ತದೆ. ಇದರಲ್ಲಿ ಪ್ಲೇ ಬ್ಯಾಕ್ ವಿಡಿಯೋ 1080 ಪಿ ಇದೆ.

ನಾಬಿ ಟ್ಯಾಬ್ಲೆಟ್ ಡ್ಯೂಯಲ್ ಕೋರ್ ಕೊರ್ಟೆಕ್ಸ್ ಎ9 ಪ್ರೊಸೆಸರ್ ಹೊಂದಿದೆ. ಇದರ ವೇಗ 533 ಗಿಗಾ ಹರ್ಟ್ಸ್. ಇದರ ಮುಂಭಾಗದಲ್ಲಿ ಕ್ಯಾಮರಾ ಇದ್ದು ಮಕ್ಕಳು ವಿಡಿಯೋ ಚಾಟ್ ಕೂಡ ಮಾಡಬಹುದಂತೆ(ಯಾರ ಜೊತೆ ಎಂದು ಕೇಳದಿರಿ!). ಈ ಟ್ಯಾಬ್ಲೆಟ್ ನಾಲ್ಕು ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ ಹೊಂದಿದೆ.

ಈ ಮಕ್ಕಳ ಟ್ಯಾಭ್ಲೆಟ್ ಕಂಪ್ಯೂಟರಿನಲ್ಲಿ ಮಕ್ಕಳಿಗಾಗಿ ವಿಶೇಷವಾಗಿ ರೂಪಿಸಿದ 500ಕ್ಕೂ ಹೆಚ್ಚು ಅಪ್ಲಿಕೇಷನ್ ಗಳು ಇವೆ. 22 ಸಾವಿರದಷ್ಟು ಗಣಿತ ಸಂಬಂಧಿಸಿದ ವಿಷಯಗಳಿವೆ. ಇಲ್ಲಿ ಪೋಷಕರಿಗೂ ಸಿಹಿ ಸುದ್ದಿಯಿದೆ. ಅಂದ್ರೆ ಈ ಟ್ಯಾಬ್ಲೆಟ್ ಕಂಪ್ಯೂಟರಿನೊಳಗೆ ಪೇರೆಂಟ್ ಮೋಡ್ ಪಾಸ್ ವರ್ಡ್ ಹಾಕಿ ಪೋಷಕರು ಬಳಸಬಹುದು. ಇದರ ದರ ಇನ್ನೂ ಖಚಿತವಾಗಿಲ್ಲ. ಮಕ್ಕಳ ಟ್ಯಾಬ್ಲೆಟ್ ಶೀಘ್ರದಲ್ಲಿ ಮಾರುಕಟ್ಟೆಗೆ ಬರಲಿದೆ ಎಂದು ಕಂಪನಿ ಕಡೆಯಿಂದ ಮಾಹಿತಿ ಬಂದಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot