Subscribe to Gizbot

ಗೂಗಲ್ ಪ್ಲೇಗೆ ಆಗಮಿಸಲಿರುವ ಆಂಡ್ರಾಯ್ಡ್ ವಾಚ್‌ಗಳು

Written By:

ಆಂಡ್ರಾಯ್ಡ್ ವೇರ್ ಸಾಮರ್ಥ್ಯದ ಸ್ಮಾರ್ಟ್‌ವಾಚ್‌ಗಳೊಂದಿಗೆ ಮೊದಲ ಬ್ಯಾಚ್ ಅಪ್ಲಿಕೇಶನ್‌ಗಳನ್ನು ಗೂಗಲ್ ಪ್ಲೇ ಸೇವೆಯು ತಂದಿದೆ. ಅಂದರೆ ಎಲ್‌ಜಿ ಜಿ ಮತ್ತು ಮೋಟೋ 360. ಗೂಗಲ್ ಪ್ಲೇ 5.0 (4.5 ರವರೆಗೆ) ಅನ್ನು ಕಂಪೆನಿಯ ಪ್ರಥಮ I/O ಡೆವಲಪರ್ ಕಾನ್ಫರೆನ್ಸ್‌ನಲ್ಲಿ ಘೋಷಿಸಿದ್ದು ಇದೀಗ ಈ ನವೀಕರಣವು ಪ್ರತಿಯೊಬ್ಬರಿಗೂ ಲಭ್ಯವಾಗುತ್ತಿದೆ.

ಬಳಕೆದಾರರು ಮೊದಲು ಆಂಡ್ರೋಯ್ಡ್ ವೇರ್ ಅಪ್ಲಿಕೇಶನ್ ಲಿಂಕ್ ಅನ್ನು ಸ್ಮಾರ್ಟ್‌ವಾಚ್‌ಗಳ ಮೂಲಕ ಸ್ಮಾರ್ಟ್‌ಫೋನ್‌ಗಳಿಗೆ ಡೌನ್‌ಲೋಡ್ ಮಾಡಬೇಕಾಗುತ್ತದೆ ತದನಂತರ ಗೂಗಲ್ ಪ್ಲೇ ಸೇವೆಗಳು 5.0 ಅಂದರೆ ವೇರ್‌ನೊಂದಿಗೆ ಕಾರ್ಯನಿರ್ವಹಿಸುವಂಥದ್ದು ನವೀಕರಿಸಬೇಕು. ನಿಮ್ಮ ವೇರಿಯೇಬಲ್ ಬೆಂಬಲಿಸುವಂತಹ ಪ್ಲಾಟ್‌ಫಾರ್ಮ್‌ಗಳು ಅಂದರೆ ಪೇಪಾಲ್, ಸೌಂಡ್‌ವೇವ್, ಪಿಂಟ್ರೆಸ್ಟ್, ಲಿಫ್ಟ್, ಆಲ್ತ್‌ಕುಕ್ಸ್ ಮತ್ತು ಫುಡ್ ಡೆಲಿವರಿ ಅಪ್ಲಿಕೇಶನ್ ಈಟ್ 24 ಅಪ್ಲಿಕೇಶನ್‌ಗಳನ್ನು ಕಾಣಬಹುದಾಗಿದೆ.

ಗೂಗಲ್‌ನ ಹೊಸ ಬಿಡುಗಡೆ ಆಂಡ್ರಾಯ್ಡ್ ವಾಚ್‌ಗಳು

ತನ್ನ ಸಾಫ್ಟ್‌ವೇರ್ ಡೆವಲಪರ್ ಕಿಟ್ (ಎಸ್‌ಡಿಕೆ) ತೆರೆದಿದ್ದು ಡೆವಲಪರ್‌ಗಳಿಗೆ ಲಭ್ಯವಾಗಿದೆ ಎಂದು ಘೋಷಿಸಿದ ವಾರದ ಕೆಲವು ವಾರಗಳ ನಂತರ ಈ ಮಾಹಿತಿಯನ್ನು ಗೂಗಲ್ ತಿಳಿಯಪಡಿಸಿದೆ.

ಆಂಡ್ರಾಯ್ಡ್ ವೇರ್ ಸ್ಮಾರ್ಟ್‌ವಾಚ್‌ಗಳು ಇನ್ನೂ ಮಾರುಕಟ್ಟೆಗೆ ಬಂದಿಲ್ಲ, ಮತ್ತು ಇದೀಗ ಅಪ್ಲಿಕೇಶನ್‌ ಅನ್ನು ಕುರಿತ ಹೆಚ್ಚಿನ ಮಾಹಿತಿಯನ್ನು ಆಂಡ್ರಾಯ್ಡ್ ಬಳಕೆದಾರರು ಪರಿಶೀಲಿಸಬೇಕಾಗುತ್ತದೆ.

ಗೂಗಲ್ ವಾಲೆಟ್, ಗೂಗಲ್ ಡ್ರೈವ್ ಮತ್ತು ಗೂಗಲ್ ಕಾಸ್ಟ್‌ಗೆ ಕಂಪೆನಿಯು ಹೊಸ ಎಪಿಐ ಅನ್ನು ಕೂಡ ಸೇರಿಸಿದ್ದು ಸಂತಸಕರವಾದ ವಿಚಾರವಾಗಿದೆ.

Read more about:
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot