ಆಕಾಶಕ್ಕೆ ಏಣಿ: ಮತ್ತೊಂದು ಅಗ್ಗದ ವಿದ್ಯಾರ್ಥಿ ಟ್ಯಾಬ್ಲೆಟ್

Posted By: Staff
ಆಕಾಶಕ್ಕೆ ಏಣಿ: ಮತ್ತೊಂದು ಅಗ್ಗದ ವಿದ್ಯಾರ್ಥಿ ಟ್ಯಾಬ್ಲೆಟ್
ಅಗ್ಗದ ಸಣ್ಣ ಟ್ಯಾಬ್ಲೆಟ್ ಆಕಾಶ್ ಮಾರುಕಟ್ಟೆಗೆ ಬರುವ ಮುನ್ನವೇ ಹೊಸ ಹವಾ ಸೃಷ್ಟಿಸಿದೆ. ಇದು ಜಗತ್ತಿನ ಅಗ್ಗದ ಟ್ಯಾಬ್ಲೆಟಾಗಿದೆ. ಇದು ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಹೊರಬಂದ ಟ್ಯಾಬ್ಲೆಟಾಗಿದೆ. ಈ ಟ್ಯಾಬ್ಲೆಟ್ ಅತ್ಯುತ್ತಮ ಗುಣಮಟ್ಟದಾಗಿದ್ದರೂ, ಅದರ ಟಚ್ ಸ್ಕ್ರೀನ್ ಗುಣಮಟ್ಟದ ಕುರಿತು ದೂರುಗಳಿದ್ದವು.

ಇದೀಗ ದೆಹಲಿ ಮೂಲದ ಎಜ್ಯುಕೇಷನ್ ಸೇವಾ ಸಲಕರಣೆ ಪೂರೈಕೆದಾರ ಕಂಪನಿ ಕ್ಲಾಸ್ ಟೀಚರ್ ಲರ್ನಿಂಗ್ ಸಿಸ್ಟಮ್ "ಕ್ಲಾಸ್ ಪ್ಯಾಡ್" ಎಂಬ ಟ್ಯಾಬ್ಲೆಟ್ ಅನಾವರಣ ಮಾಡಿದೆ. ಇದು ಆಕಾಶ್ ಟ್ಯಾಬ್ಲೆಟ್ ನಷ್ಟು ಅಗ್ಗವಾಗಿಲ್ಲ. ಆದರೆ ಇದರಲ್ಲಿ ಹತ್ತು ಹಲವು ಸ್ಪೋರ್ಟಿ ಫೀಚರುಗಳಿವೆ.

ಕ್ಲಾಸ್ ಪ್ಯಾಡ್ ಫೀಚರುಗಳು ಮತ್ತು ವಿಶೇಷತೆ

* ಆಕರ್ಷಕ ಟಚ್ ಸ್ಕ್ರೀನ್

* 1.3 ಗಿಗಾಹರ್ಟ್ಸ್ ಪ್ರೊಸೆಸರ್

* ಆಂತರಿಕ ಮೆಮೊರಿ ಸಂಗ್ರಹ ಸಾಮರ್ಥ್ಯ 4 ಜಿಬಿ

* 8 ಜಿಬಿವರೆಗೆ ಮೆಮೊರಿ ಸಂಗ್ರಹ ವಿಸ್ತರಿಸಲು ಅವಕಾಶ

* ಆಂಡ್ರಾಯ್ಡ್ 2.2 ಅಪರೇಟಿಂಗ್ ಸಿಸ್ಟಮ್

* ಮೂರು ಮಾಡೆಲ್: ಕ್ಲಾಸ್ ಪ್ಯಾಡ್ 7, ಕ್ಲಾಸ್ ಪ್ಯಾಡ್ 8 ಮತ್ತು ಕ್ಲಾಸ್ ಪ್ಯಾಡ್ 10

ಈ ಟ್ಯಾಬ್ಲೆಟ್ ನೋಡಲು ಸರಳವಾಗಿದ್ದು, ಸುಂದರವಾಗಿದೆ. ಇದು ವಿದ್ಯಾರ್ಥಿಗಳ ಕೈಗಳಿಗೆ ಹಿಡಿಯುವಷ್ಟು ಸಣ್ಣದಾಗಿದೆ, ಇದರ ನಿರ್ಮಾಣ ಗುಣಮಟ್ಟ ಕೂಡ ಅತ್ಯುತ್ತಮವಾಗಿದ್ದು, ಕಡಿಮೆ ಎತ್ತರದಿಂದ ಬಿದ್ದರೂ ಹಾನಿಯಾಗದು.

ಈ ಟ್ಯಾಬ್ಲೆಟ್ ಗಳಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ಅಥವಾ ಮನರಂಜನೆಗೆ ಸಂಬಂಧಿಸಿದ ಅಪ್ಲಿಕೇಷನ್ ಗಳನ್ನು ಹಾಕಿಕೊಳ್ಳಬಹುದಾಗಿದೆ. ಇದರ ಸ್ಕ್ರೀನ್ ಕೂಡ ದೊಡ್ಡದಾಗಿದೆ.

ಕ್ಲಾಸ್ ಪ್ಯಾಡ್ ಬೇಸ್ ಆವೃತ್ತಿ ದರ ಸುಮಾರು 7,500 ರುಪಾಯಿ ಇದೆ. ಟಾಪ್ ಮಾಡೆಲ್ ದರ ಸುಮಾರು 14 ಸಾವಿರ ರುಪಾಯಿ ಇದೆ. ಸರಕಾರ ಈ ಟ್ಯಾಬ್ಲೆಟ್ ಗಳನ್ನು ವಿದ್ಯಾರ್ಥಿಗಳಿಗೆ ಪೂರೈಸಲು ಏನಾದರೂ ಸಬ್ಸಿಡಿ ನೀಡಿದರೆ ಇದರ ದರವೂ ಕಡಿಮೆಯಾದೀತು.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot