ಇಂಟರ್ನೆಟ್ Stressಗೆ ಸೋಶಿಯಲ್ ಬ್ರೇಕ್ App

By Varun
|
ಇಂಟರ್ನೆಟ್ Stressಗೆ ಸೋಶಿಯಲ್ ಬ್ರೇಕ್ App

Face to face ಸಿಕ್ಕಿ ಮಾತಾಡೋದೇ ಕಷ್ಟವಾಗಿರೋ ಈ ಕಾಲದಲ್ಲಿ ಹೆಂಗೋ ಫ್ರೆಂಡ್ಸು, ಸಂಬಂಧಿಕರು, ಇಷ್ಟ ಪಡೋ ಜನ, ಪ್ರೀತಿಸಿದ ಹುಡುಗಿ, ಹಳೇ ಕಂಪನಿ ಗೆಳೆಯರು, ಮಾಜಿ ಪ್ರಿಯತಮೆ, ಚಾಟಿಂಗ್ ಮಾಡಿ ಸಂಪಾದನೆ ಮಾಡಿಕೊಂಡಿರೋ ಫಾರಿನ್ಸ್ನೇಹಿತರು, ಇಂಥವರನ್ನ ಸಾಮಾಜಿಕ ಜಾಲ ತಾಣಗಳಲ್ಲಿ ನಿಭಾಯಿಸೋದು ತುಂಬಾನೇ ಕಷ್ಟ.

ಮೊದಲೆಲ್ಲಾ ಕೆಲಸದ ಒತ್ತಡ, ಟೆನ್ಶನ್, ಸಿಕ್ಕಾಪಟ್ಟೆ ಪ್ರೆಶರ್ ಅಂತಿದ್ದ ಜನ ಯೋಗ ಕ್ಲಾಸ್ ಅಂತೆ, ರವಿಶಂಕರ್ ಗುರೂಜಿ ಕ್ಲಾಸ್ ಗೆ ಹೋಗೋದೋ, ಕೆಲ್ಸಾ ಮಾಡೋ ಜಾಗದಲ್ಲಿ ಗಾಜಿನ ಪಾತ್ರೆ ತಗೊಂಡ್ ಬಂದು ಮೀನು ಸಾಕೊಂಡ್ ಅದೆನ್ನೇ ನೋಡೋದು ಮಾಡಿ ಹೆಂಗೋ ಸ್ಟ್ರೆಸ್ ಕಮ್ಮಿ ಮಾಡ್ಕೊಳಕ್ಕೆ ಟ್ರೈ ಮಾಡ್ತಿದ್ರು.

ಸಾಮಾಜಿಕ ಜಾಲ ತಾಣಗಳು ಬಂದ ಮೇಲಂತೂ ಇನ್ನೂ ಜಾಸ್ತಿ ಜನ ನೆಟ್ವರ್ಕ್ ಗೆ ಸಿಗೋ ಥರಾ ಆಗಿ ಹೆಂಗೋ ಚಾಟಿಂಗ್ ಮಾಡ್ಕೊಂಡು, ಫೋಟೋ ಅಪ್ಲೋಡ್ ಮಾಡಿ, ನಮ್ ಥರಾನೇ ಯೋಚನೆ ಮಾಡೋ ಜನಾನ ಫ್ರೆಂಡ್ ಮಾಡ್ಕೊತಿದ್ರು. ಪ್ರಾರಂಭದಲ್ಲಿ ಆರ್ಕುಟ್, ಫೇಸ್ ಬುಕ್, ಟ್ವಿಟರ್, ಗೂಗಲ್ + ನಂತಹ ಸಾಮಾಜಿಕ ತಾಣಗಳು ಬಂದಾಗ ಲಾಗಿನ್ ಮಾಡಿ ಸ್ಟೇಟಸ್ ನೋಡೋದು, ಪ್ರೊಫೈಲ್ ಫೋಟೋ ಹಾಕೋದು, ಮನಸಲ್ಲಿ ಇರೋದನ್ನ ಹಂಚಿಕೊಳ್ಳೋದು, ಬೇರೆ ಅವರ ಮೆಸೇಜ್, ಫೋಟೋ ಲೈಕ್ ಮಾಡೋದ್ರಲ್ಲಿ ಖುಷಿ ಆಗ್ತಾ ಇತ್ತು.

ಈಗ ಜನಾನೂ ಜಾಸ್ತಿ ಆಗಿದಾರೆ, ಚರ್ಚೆ ಮಾಡೋ ವಿಷಯಗಳೂ ಜಾಸ್ತಿ ಆಗಿವೆ, ಎಲ್ಲರೂ ಕಾಮೆಂಟ್ ಮಾಡ್ತಾರೆ, ಫೋಟೋ ಅಪ್ಲೋಡ್ ಮಾಡ್ತಾರೆ. ಆದ್ರೆ ಕೆಲ್ಸಾ ಮಾಡೋ ಟೈಮ್ ಅಲ್ಲಿ ಎಲ್ಲರ್ಗೂ, ಎಲ್ಲದಕ್ಕೂ ಲೈಕ್ ಮಾಡೋದು, ಕಾಮೆಂಟ್ ಮಾಡೋದಕ್ಕೆ ಆಗಲ್ಲ. ಹಾಗಾಗಿ ಫೇಸ್ ಬುಕ್, ಟ್ವಿಟರ್ ಗೆ ಹೋಗಕ್ಕೆ ಬೇಜಾರ್ ಆಗುತ್ತೆ ಕೆಲವೊಂದು ಸಲ. ಹೀಗಿರೋವಾಗ ಒಬ್ರಿಗೆ ಕಾಮೆಂಟ್ ಮಾಡಿ ಇನ್ನೊಬ್ರಿಗೆ ಮಾಡಿಲ್ಲ ಅಂದ್ರೆ ಬೇಜಾರು. ಅದಕ್ಕೆ ಈಗ ಜಾಲ ತಾಣಗಳನ್ನು ಉಪಯೋಗಿಸೋ ಜನರಿಗೆ ಸೋಶಿಯಲ್ ಮೀಡಿಯಾ ಸ್ಟ್ರೆಸ್ ಬೇರೆ ಆಗ್ತಾ ಇದೆ ಅಂತಾ JWT ಅನ್ನೋ ಖ್ಯಾತ ಜಾಹೀರಾತು ಸಂಸ್ಥೆ ವರದಿ ಮಾಡಿದೆ.

ನೀವು ನೆಸ್ತ್ಲೇ ಕಂಪನಿಯ "have ಅ break, have a Kit Kat " ಅನ್ನೋ ಪಂಚ್ ಲೈನ್ ಕೇಳಿದೀರಿ ಅಲ್ವಾ. ಆ ರೀತಿ ನಿಮ್ಮ ಸೋಶಿಯಲ್ ಮೀಡಿಯಾ ಸ್ಟ್ರೆಸ್ ಗೂ ಬ್ರೇಕ್ ಹಾಕೋದಕ್ಕೆ ಅಂತಾನೆ App ಒಂದನ್ನು ಬಿಡುಗಡೆ ಮಾಡಿದೆ ಈ JWT ಕಂಪನಿ.

ಕಿಟ್ ಕ್ಯಾಟ್ ಕಂಪನಿಯ ಜೊತೆಗೂಡಿ ಅಭಿವೃದ್ಧಿ ಪಡಿಸಿರೋ ಈ App ಅನ್ನು ಡೌನ್ಲೋಡ್ ಮಾಡಿಕೊಂಡು ನಿಮ್ಮ ಫೇಸ್ ಬುಕ್, ಟ್ವಿಟರ್ ಹಾಗು ಲಿಂಕ್ಡ್ ಇನ್ ಖಾತೆಗಳನ್ನು ಸೆಟ್ ಮಾಡಿಟ್ಟುಕೊಂಡರೆ ಸಾಕು. ನಿಮ್ಮ ಪ್ರೊಫೈಲ್ ಗೆ ಬಂದ ಯಾವುದೇ ಟ್ಯಾಗ್ ಆದ ಫೋಟೋ, ಅಥವಾ ನಿಮ್ಮ ನೆಟ್ವರ್ಕ್ ನಲ್ಲಿರುವ ಜನ ಹಾಕಿದ ಫೋಟೋವನ್ನು ಈ App ಆಟೋಮ್ಯಾಟಿಕ್ ಆಗಿ ಲೈಕ್ ಮಾಡುತ್ತದೆ. ಹಾಗೆಯೇ ನಿಮ್ಮ ಟ್ವಿಟರ್ ಖಾತೆಗೆ ಬರುವ ಟ್ವೀಟ್ ಗಳಿಗೂ ಅದೇ ಸೂಕ್ತವಾದ ಉತ್ತರ ಕೊಡುತ್ತೆ!

"ಕ್ಯಾಮೆ ಇರೋ ಟೈಮಲ್ಲಿ, ಫೇಸ್ ಬುಕ್, ಟ್ವಿಟರ್ ಲಿಂಕ್ಡ್ ಇನ್ ಅಂತಾ, ಲೈಕು, ರಿಪ್ಲೈ ಮಾಡ್ಕೊಳ್ತಾ, ಸ್ಟ್ರೆಸ್ಸು, ಬೇಜಾರ್ ಬೇಕಿತ್ತಾ" ಅಂತಾ ಮನಸಲ್ಲೇಹಾಡೋ ಬದ್ಲು ಈಗಲೇಸೋಶಿಯಲ್ ಬ್ರೇಕ್ App ಡೌನ್ಲೋಡ್ ಮಾಡಿಕೊಂಡು ಎಲ್ಲ ಸ್ನೇಹಿತರನ್ನು ಖುಷಿಯಾಗಿ ಇಟ್ಕೊಳಿ :)

ವರುಣ್ ಆದಿತ್ಯ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X