10 ಸಾವಿರ ಅಡಿ ಎತ್ತರದಿಂದ ಐ- ಪ್ಯಾಡ್ ಬೀಳಿಸಿ ಪ್ರಯೋಗ ನಡೆಸಿದ ಆಪಲ್

Posted By: Staff
10 ಸಾವಿರ ಅಡಿ ಎತ್ತರದಿಂದ ಐ- ಪ್ಯಾಡ್ ಬೀಳಿಸಿ ಪ್ರಯೋಗ ನಡೆಸಿದ ಆಪಲ್

 

ಕಂಪ್ಯೂಟರ್ ಕ್ಷೇತ್ರದ ದಿಗ್ಗಜ ಆಪಲ್ ಈಗಾಗಲೇ ತನ್ನ ಅದ್ಭುತ ಸಾಧನಗಳಿಂದ ಚಿರಪರಿಚಿತ. ಹೊಸ ಪ್ರಯೋಗಗಳಿಗೆ ತನ್ನನ್ನು ಒಡ್ಡಿಕೊಳ್ಳುವ ಅದು ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಸಾಧನಗಳಿಗೆ ಎಲೆಕ್ಟ್ರೋನಿಕ್  ಕೇಸ್ ಹಾಗು ಕವರ್ ಗಳನ್ನು ತಯಾರಿಸುವ "ಜಿ - ಫಾರ್ಮ್" ಕಂಪನಿಯ ಜೊತೆ ಕೈ ಜೋಡಿಸಿ, ಐ- ಪ್ಯಾಡ್ ಅನ್ನು 10 ಸಾವಿರ ಅಡಿ ಎತ್ತರದಿಂದ ಬೀಳಿಸಿ ಪ್ರಯೋಗ ನಡೆಸಿರುವುದು ಅಚ್ಚರಿ ಮೂಡಿಸಿದೆ.

ಅಮೆರಿಕದ ನೆವಾಡ ಪ್ರಾಂತ್ಯದಲ್ಲಿ ಐ- ಪ್ಯಾಡ್ ಅನ್ನು ಗ್ಯಾಸ್ ಬಲೂನ್ ನ ಸಹಾಯದಿಂದ ಎತ್ತರಕ್ಕೆ ಏರಿಸಿ ಬಿಡಲಾಯಿತು. ನೋಡ ನೋಡುತಿದ್ದಂತೆಯೇ ಫ್ರೀ ಫಾಲ್ ಆದ  ಐ- ಪ್ಯಾಡ್, ಒಡೆದುಹೋಗುವ  ಬದಲು ಸುರಕ್ಷಿತವಾಗಿ ನೆಲಕ್ಕೆ ಬಿತ್ತು. ಆಪಲ್ ಕಂಪನಿಯ ತಂತ್ರಜ್ಞರು ಇದನ್ನ ವೀಡಿಯೊ ಮೂಲಕ ದಾಖಲಿಸಿ ಪ್ರಯೋಗಕ್ಕೆ ಒಳಪಡಿಸಿದ ಐ- ಪ್ಯಾಡ್ ಅನ್ನು ಪರೀಕ್ಷಿಸಿದಾಗ ಅವರಿಗೇ ಆಶ್ಚರ್ಯ!!

ಪ್ರಯೋಗದ ನಂತರವೂ ಸಂಪೂರ್ಣ ಕ್ಷಮತೆಯಿಂದ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದ ಅದು, " ಆಪಲ್" ನ ಗ್ರಾಹಕರು ತನ್ನ ಮೇಲಿಟ್ಟಿರುವ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

ಐ- ಪ್ಯಾಡ್ ಅಭಿಮಾನಿಗಳು ಇದರ ವೀಡಿಯೋ ಅನ್ನು ಯೂಟ್ಯೂಬ್ ನಲ್ಲಿ ನೋಡಿ ಖುಷಿಪಡಬಹುದು.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot