ಆಪಲ್ ನಿಂದ ಹೊಸ ಮ್ಯಾಕ್ ಆವೃತ್ತಿ: ಇದರ ವೇಗಕ್ಕೆ ಸರಿಸಾಟಿಯೇ ಇಲ್ಲ

By: Precilla Dias

ಆಪಲ್ ಮೊನ್ನೆ ನಡೆದ WWDC 2017 ಸಮಾವೇಶದಲ್ಲಿ ಹೊಸ ಹೊಸ ಐಮ್ಯಾಕ್ ಮಾಡಲ್ ಗಳನ್ನು ಬಿಡುಗಡೆ ಮಾಡಿರುವುದಲ್ಲದೇ, ಅನೇಕ ಮಾಡಲ್ ಗಳನ್ನು ಆಪ್ಡೇಟ್ ಮಾಡಿದೆ. ಇದಲ್ಲದೇ ಮ್ಯಾಕ್ ಬುಕ್ ಗಳನ್ನು ಬಿಡುಗಡೆ ಮಾಡಿದೆ.

ಆಪಲ್ ನಿಂದ ಹೊಸ ಮ್ಯಾಕ್ ಆವೃತ್ತಿ: ಇದರ ವೇಗಕ್ಕೆ ಸರಿಸಾಟಿಯೇ ಇಲ್ಲ

ಆಪಲ್ ಮ್ಯಾಕ್ ಬುಕ್ ಪ್ರೋ, ಮ್ಯಾಕ್ ಬುಕ್ ಏರ್ ಮತ್ತು ಐಪ್ಯಾಡ್ ಪ್ರೋ ಮಾಡಲ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇಲ್ಲದೇ ಅತೀ ವೇಗವಾಗಿ ಕಾರ್ಯನಿರ್ವಹಿಸುವ ಹೊಸ ಮ್ಯಾಕ್ ಪ್ರೋ ಸಹ ಲಾಂಚ್ ಮಾಡಿದೆ.

ಹೊಸ ಮ್ಯಾಕ್ ನಲ್ಲಿ ಅಳವಡಿಸಿರುವ ಹೊಸ ಡಿಸ್ ಪ್ಲೇ ಸದ್ಯ ಹೆಚ್ಚು ಸದ್ದು ಮಾಡುತ್ತಿದ್ದು, ಈ ಡಿಸ್ ಪ್ಲೇ ಬಿಲಿಯನ್ ಕಲರ್ ಗಳನ್ನು ಹೊಂದಿದ್ದು, ಇದರೊಂದಿಒಗೆ ಇಂಟೆಲ್ Kaby Lake ಪ್ರೋಸೆಸರ್ ಒಳಗೊಂದಿದ್ದು, ಇದು 4.2GHz ವೇಗವನ್ನು ಹೊಂದಿದ್ದು, ಇದರೊಂದಿಗೆ ಟರ್ಬೋ ಟೆಕ್ನಾಲಜಿಯನ್ನು ಇದು ಹೊಂದಿದೆ.

ಈ ಮ್ಯಾಕ್ ನಲ್ಲಿ ಹಿಂದಿನ ಮಾಡಲ್ ಗಿಂತ ಎರಡು ಪಟ್ಟುಹೆಚ್ಚು ಮೆಮೊರಿಯನ್ನು ಕಾಣಬಹುದಾಗಿದೆ. ಆಪಲ್ ಮ್ಯಾಕ್ 21.5 ಇಂಚಿನ ಡಿಸ್ ಪ್ಲೇ, 21.5 ಇಂಚಿನ ಐಮ್ಯಾಕ್ ರೆಟಿನಾ 4K ಡಿಸ್ ಪ್ಲೇ ಮತ್ತು 27 ಇಂಚಿನ ಐಮ್ಯಾಕ್ ರೆಟಿನಾ 4K ಡಿಸ್ ಪ್ಲೇ ಮಾದರಿಯಲ್ಲಿ ಕಾಣಬಹುದಾಗಿದೆ.

ಐಮ್ಯಾಕ್ ಮಾಡಲ್ ಗಳು $1,099 ನಿಂದ $1,799 ವರೆಗೆ ದೊರೆಯಲಿದೆ. ಈ ಮ್ಯಾಕ್ ಗಳು ಮ್ಯಾಕ್ OS ಗೈ ಸಿಯೆರಾದಲ್ಲಿ ಕಾರ್ಯನಿರ್ವಹಿಸಲಿದೆ. ಈ ಮ್ಯಾಕ್ ಮಾಡಲ್ ಗಳು ಆಪಲ್ ವೆಬ್ ಸೈಟಿನಲ್ಲಿ ಪ್ರೀ ಬುಕಿಂಗ್ ಗೆ ಲಭ್ಯವಿದೆ.

ಈ ಮೂರು ಆವೃತ್ತಿಯ ಮ್ಯಾಕ್ ಗಳಲ್ಲಿ ಹೆಚ್ಚುವರಿ ಸ್ಟೋರೆಜ್ ವ್ಯವಸ್ಥೆಯನ್ನು ನೀಡಲಾಗಿದ್ದು, ಇವು 50% ವೇಗವಾಗಿ ಕಾರ್ಯನಿರ್ವಹಿಸಲು ಶಕ್ತವಾಗಿವೆ. ಮ್ಯಾಕ್ USB Type C ಪೋರ್ಟ್ ಹೊಂದಿದ್ದು, ಪ್ರಾಥಮಿಕ ಆವೃತ್ತಿಯ ಮ್ಯಾಕ್ ನಲ್ಲಿ ಇಂಟೆಲ್ ಐರಿಸ್ ಪ್ಲಸ್ ಗ್ರಾಫಿಕ್ಸ್ ಇದ್ದು, ಇದು ಈ ಹಿಂದಿನ GPU ಗಿಂತಲೂ ವೇಗವಾಗಿ ಕಾರ್ಯನಿರ್ವಹಿಸಲಿದೆ. ಈ ಮೂರು ಆವೃತ್ತಿಗಳು ವೇಗದ ಗ್ರಾಫಿಕ್ ಕಾರ್ಡ್ ಗಳನ್ನು ಹೊಂದಿವೆ.

Read more about:
English summary
Apple's new iMac lineup has been launched with Intel Kaby Lake processor.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot