ಬರಲಿದೆ ಆಪಲ್ ಐಪ್ಯಾಡ್ ಮಿನಿ ಟ್ಯಾಬ್ಲೆಟ್

By Varun
|

ಬರಲಿದೆ ಆಪಲ್ ಐಪ್ಯಾಡ್ ಮಿನಿ ಟ್ಯಾಬ್ಲೆಟ್
ಕ್ಯುಪರ್ಟಿನೋ ಮೂಲದ ಆಪಲ್ ಕಂಪ್ಯೂಟರ್ಸ್ ತನ್ನ ಉತ್ಕೃಷ್ಟ ಉತ್ಪನ್ನಗಳಿಗಾಗಿ ವರ್ಲ್ಡ್ ಫೇಮಸ್. ಆಪಲ್ ನ ಯಾವುದೇ ಉತ್ಪನ್ನ ಬರಲಿ ಬರದೆ ಇರಲಿ, ಅದರ ಬಗ್ಗೆ ಒಂದಿಲ್ಲೊಂದು ಸುದ್ದಿ ಯಾವಾಗಲೂ ಇರುತ್ತದೆ.

ಈ ವರ್ಷದ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾದ ಮೂರನೇ ತಲೆಮಾರಿನ ನ್ಯೂಪ್ಯಾಡ್ (ಕ್ರಾಂತಿಕಾರಿ ರೆಟಿನಾ ಡಿಸ್ಪ್ಲೇ ಹೊಂದಿತ್ತು) ಯಶಸ್ವಿಯಾದ ಮೇಲಂತೂ ಆಪಲ್ ಮುಂದಿನ ಐಫೋನ್ ಬಗ್ಗೆ ಈಗಲೇ ನಿರೀಕ್ಷೆಗಳು ಮುಗಿಲು ಮುಟ್ಟಿವೆ.

ಈಗ ಗರಿಗೆದರಿರುವ ಮತ್ತೊಂದು ಸುದ್ದಿಯೇನೆಂದರೆ ಆಪಲ್ 7 ಇಂಚ್ ಗಾತ್ರದ ಸ್ಕ್ರೀನ್ ಇರುವ ಮಿನಿ ಐಪ್ಯಾಡ್ ಅನ್ನು ಹೊರತರಲಿದೆ ಅಂತ. ಈಗಿರುವ ಐಪ್ಯಾಡ್ 9.7 ಇಂಚ್ ಇದ್ದು ಹಲವಾರು ಇತರೆ ಟ್ಯಾಬ್ಲೆಟ್ಟುಗಳ ಮಾದರಿಯಲ್ಲಿ 7 ಇಂಚ್ ಟ್ಯಾಬ್ಲೆಟ್ ಬಿಡುವ ಸೂಚನೆ ಕೊಟ್ಟಿರುವ ಆಪಲ್, ಅಕ್ಟೋಬರ್ ವೇಳೆಗೆ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆಯೆಂದು ಆಪಲ್ ಮೂಲಗಳು ತಿಳಿಸಿವೆ.

ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಗುವ ಗುಲ್ಲು ಯಾಕೆ ದಟ್ಟವಾಗಿದೆ ಎಂದರೆ, ಅದೇ ವೇಳೆಗೆ ಸ್ಯಾಮ್ಸಂಗ್ ನ ಗ್ಯಾಲಕ್ಸಿ ನೋಟ್ 2 ಬಿಡುಗಡೆಯಾಗಲಿದ್ದು, ಅದಕ್ಕೆ ಪ್ರತಿಸ್ಪರ್ಧಿಯಾಗಿ ಆಪಲ್ ಇದನ್ನು ತರಬಹುದು ಎಂಬುದು.

ಸುಮಾರು 249 ರಿಂದ 299 ಡಾಲರ್ ಗೆ ಆಪಲ್ ಐಪ್ಯಾಡ್ ಮಿನಿ ಬರಬಹುದು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X