Subscribe to Gizbot

ಆಪಲ್‌ ಐಪ್ಯಾಡ್‌ ಮಿನಿ VS ಆಪಲ್‌ ಐಪ್ಯಾಡ್‌ 4

Posted By: Vijeth

ಆಪಲ್‌ ಐಪ್ಯಾಡ್‌ ಮಿನಿ VS ಆಪಲ್‌ ಐಪ್ಯಾಡ್‌ 4
ಆಪಲ್‌ ಸಂಸ್ಥೆಯು ತನ್ನಯ ಬಹು ಚರ್ಚಿತ ನೂತನ ಐಪ್ಯಾಡ್‌ ಮಿನಿಯನ್ನು ಅಕ್ಟೋಬರ್‌ 23 ರಂದು ನಡೆದ ವಿಶೇಷ ಸಮಾರಂಭದಲ್ಲಿ ಅನಾವರಣ ಪಡಿಸಿತು. ಅಲ್ಲದೆ ಇದರ ಜೊತೆಯಲ್ಲಿಯೇ 9.7 ಇಂಚಿನ ಐಪ್ಯಾಡ್‌ 4 ಕೂಡಾ ಅನಾವರಣ ಗೊಳಿಸಿದೆ. ಅಂದಹಾಗೆ ಈ ಎರಡೂ ನ್ಯೂತನ ಟ್ಯಾಬ್ಲೆಟ್ಸಗಳು ನವೆಂಬರ್‌ ತಿಂಗಳಿನಲ್ಲಿ ಮಾರುಕಟ್ಟೆಗೆ ಕಾಲಿರಿಸಲಿದೆ. ಎರಡೂ ಟ್ಯಾಬ್ಲೆಟ್ಸ್‌ಗಳು ಅ.26 ರಿಂದ ಪ್ರೀ ಆರ್ಡರ್‌ನಲ್ಲಿ ಲಭ್ಯವಿದ್ದು, ನವೆಂಬರ್‌ 2 ರಿಂದ ಅಮೇರಿಕಾ ಸೇರಿದಂತೆ 30 ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ.

ಅಂದಹಾಗೆ ಎರಡೂ ಟ್ಯಾಬ್ಲೆಟ್ಸ್‌ಗಳು ಕೇವಲ ಗತ್ರದಲ್ಲಿ ಮಾತ್ರವಷ್ಟೇ ವೆತ್ಯಾಸವನ್ನು ಹೊಂದಿದ್ದು ಉಳಿದೆಲ್ಲಾ ಫೀಚರ್ಸ್‌ಗಳಲ್ಲಿ ಅಷ್ಟೇನು ವೆತ್ಯಾಸಗಳಿಲ್ಲ. ಅಮೇರಿಕಾದ ದರದ ಅನ್ವಯ ಈಪ್ಯಾಡ್‌ ಮಿನಿಯ 16GB, 32GB ಹಾಗೂ 64GB ಮಾದರಿ ಟ್ಯಾಬ್ಲೆಟ್ಸ್‌ಗಳು ರೂ. 31,874, 38,819 ಹಾಗೂ ರೂ. 45,763 ಬೆಲೆಯಲ್ಲಿ ಲಭ್ಯವಾಗಲಿದೆ, ಹಾಗೂ ಐಪ್ಯಾಡ್‌ 4 ನ 16GB Wi-Fi ಮಾದರಿಯು ಆರಂಭಿಕ 499 ಅ.ಡಾಲರ್‌ (ಸುಮಾರು. Rs 30,500) ದರದಲ್ಲಿ ಹಾಗೂ 16GB Wi-Fi + ಸೆಲ್ಯುಲಾರ್ ಮಾದರಿಯು $629 (ಸುಮಾರು ರೂ. 34,000) ದರದಲ್ಲಿಮ ಲಭ್ಯವಿದೆ

ಅಂದಹಾಗೆ ಮಾರುಕಟ್ಟೆಗೆ ಕಾಲಿರಿಸಲು ದಿನಗಣನೆ ಮಾಡುತ್ತಿರುವ ಈ ನೂತನ ಟ್ಯಾಬ್ಲೆಟ್ಸ್ಗಳ ಹೋಲಿಕೆಯನ್ನು ಒಮ್ಮೆ ನೋಡಿ ಬರೋಣ.

ತೂಕ ಹಾಗೂ ಸುತ್ತಳತೆ: ಈ ವಿಚಾರದಲ್ಲಿ ಯಾವುದೇ ಸಂಷ್ಯ ವಿಲ್ಲದಂತೆ ಐಪ್ಯಾಡ್‌ ಮಿನಿ ಕೊಂವ ಕಡಿಮೆಯ ಅಂದರೆ 200 x 134.7 x 7.2 mm ಸುತ್ತಳತೆಯೊಂದಿಗೆ 308 ಗ್ರಾಂ ತೂಕವಿದೆ, ಮತ್ತೊಂದೆಡೆ ಕೊಂಚ ದೊಡ್ಡದಾದ ಐಪ್ಯಾಡ್ 4 ಟ್ಯಾಬ್ಲೆಟ್‌ 241.2 x 185.7 x 9.4 mm ಸುತ್ತಳತೆಯೊಂದಿಗೆ 652 ಗ್ರಾಂ ತೂಕವಿದೆ.

ದರ್ಶಕ: ಐಪ್ಯಾಡ್‌ ಮಿನಿಯಲ್ಲಿ 7.9 ಇಂಚಿನ LED-ಬ್ಯಾಕ್‌ಲೈಟ್‌ IPS LCD ಸಾಮರ್ತ್ಯದ ಟಚ್‌ಸ್ಕ್ರೀನ್‌ ದರ್ಶಕ ಹಾಗೂ 1024 x 768 ಪಿಕ್ಸೆಲ್‌ ರೆಸೆಲ್ಯೂಷನ್‌ ನೊಂದಿಗೆ ರೆಟಿನಾ ಡಿಸ್ಪ್ಲೆ ಹೊಂದಿದೆ. ಮತ್ತೊಂದೆಡೆ ಐಪ್ಯಾಡ್‌ 4 ನಲ್ಲಿ ಹಿರಿದಾದ 9.7 ಇಂಚಿನ LED-ಬ್ಯಾಕಲೈಟ್‌ ಮಲ್ಟಿ-ಟಚ್‌ ದರ್ಶಕ ಹಾಗೂ IPS ತಂತ್ರಜ್ಞಾನ ದೊಂದಿಗೆ 2048 x 1536 ಪಿಕ್ಸೆಲ್‌ ರೆಸೆಲ್ಯೂಷನ್‌ ಹಾಗೂ ರೆಟಿನಾ ಡಿಸ್ಪ್ಲೇ ಹೊಂದಿದೆ.

ಪ್ರೊಸೆಸರ್‌: ಐಪ್ಯಾಡ್‌ ಮಿನಿಯಲ್ಲಿ 1GHz ಡ್ಯುಯೆಲ್‌ ಕೋರ್‌ ಆಪಲ್‌ A5 ಪ್ರೊಸೆಸರ್‌ ಹೊಂದಿದ್ದರೆ ಐಪ್ಯಾಡ್‌ 4 ನಲ್ಲಿ ಡ್ಯುಯೆಲ್‌ ಕೋರ್‌ A6X ಪ್ರೊಸೆಸರ್‌ ಹೊಂದಿದೆ. ಅಂದಹಾಗೆ A6X ಪ್ರೊಸೆಸರ್‌ A5X ಪ್ರೊಸೆಸರ್‌ ಗಿಂತಲೂ ದ್ವಿಗುಣ ವೇಗವನ್ನು ಹೊಂದಿದೆ.

ಆಪರೇಟಿಂಗ್‌ ಸಿಸ್ಟಂ: ಎರಡೂ ಟ್ಯಾಬ್ಲೆಟ್‌ಗಳಲ್ಲಿ iOS 6 ಆಪರೇಟಿಂಗ್‌ ಸಿಸ್ಟಂ ಹೊಂದಿದ್ದು ಆಪಲ್‌ ಮ್ಯಾಪ್ಸ್‌, ಸುಧಾರಿತ ಸಿರಿ, ನೂತನ ಸಫಾರಿ ಬ್ರೌಸರ್‌, ಐಕ್ಲೌಡ್‌ ಕ್ಲೌಡ್‌ ಸ್ಟೋರೇಜ್‌ ಹಾಗೂ ಫೇಸ್‌ಬುಕ್‌ ಸೇರಿದಂತೆ 200 ಕ್ಕೂ ಹೆಚ್ಚು ಫೀಚರ್ಸ್‌ಗಳಿಂದ ಕೂಡಿದೆ.

ಕ್ಯಾಮೆರಾ: ಈ ವಿಚಾರದಲ್ಲಿಯೂ ಕೂಡ ಎರಡೂ ಟ್ಯಾಬ್ಲೆಟ್‌ಗಳಲ್ಲಿ ಐಸೈಟ್‌ ತಂತ್ರಜ್ಞಾನದ 5MP ನ ಹಿಂಬದಿಯ ಕ್ಯಾಮೆರಾ ಹಾಗೂ 1.2MP ನ ಮುಂಬದಿಯ HD ಕ್ಯಾಮೆರಾ ಹೊಂದಿದೆ.

ಸ್ಟೋರೇಜ್‌: ಎರಡೂ ಟ್ಯಾಬ್ಲೆಟ್‌ಗಳು – 16GB, 32GB ಹಾಗೂ 64GB ಆಂತರಿಕ ಸ್ಟೋರೇಜ್‌ ಮಾದರಿಗಳಲ್ಲಿ ಲಭ್ಯವಾಗಲಿವೆ. ಅಂದಹಾಗೆ ಐಪ್ಯಾಡ್‌ ಮಿನಿ 8GB ಮಾದರಿಯಲ್ಲೂ ದೊರೆಯಲಿದೆ. ಇದಲ್ಲದೆ ಎರಡೂ ಟ್ಯಾಬ್ಕೆಟ್‌ಗಳು 512MB RAM ಒಳಗೊಂಡಿವೆ.

ಕನೆಕ್ಟಿವಿಟಿ: ಈ ವಿಚಾರದಲ್ಲಿಯೂ ಕೂಡಾ ಎರಡೂ ಟ್ಯಾಬ್ಲೆಟ್‌ಗಳಲ್ಲಿ ಲೈಟ್ನಿಂಗ್‌ ಪೋರ್ಟ್‌, ವೈ-ಫೈ ಹಾಗೂ ಬ್ಲೂಟೂತ್‌ ಫೀಚರ್ಸ್‌ ಹೋಂದಿವೆ. ಇದಲ್ಲದೆ 3G ಹಾಗೂ 4G ಕನೆಕ್ಟಿವಿಟಿ ಹೊಂದಿದೆ.

ಬ್ಯಾಟರಿ: ಐಪ್ಯಾಡ್‌ ಮಿನಿಯಲ್ಲಿ 16.3 Whr Li-Po ಬ್ಯಾಟರಿ ಇದ್ದರೆ, ಐಪ್ಯಾಡ್‌ 4 ನಲ್ಲಿ ಕೊಂಚ ದೊಡ್ಡದಾದ 42.5 Whr Li-ion ಬ್ಯಾಟರಿ ಇದ್ದು 10 ಗಂಟೆಗಳ ಬ್ಯಾಕಪ್‌ ನೀಡುತ್ತದೆ.

Read In English...

ವಿಶೇಷ ಆನ್‌ಲೈನ್‌ ಆಫರ್‌ನಲ್ಲಿ ಕಾರ್ಬನ್‌ ಟ್ಯಾಬ್ಲೆಟ್‌ಗಳು

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot