ಆಪಲ್ ನ ಹೊಸ ಐಪ್ಯಾಡ್ ಹೆಸರು ನ್ಯೂ ಐಪ್ಯಾಡ್ !

ಟ್ಯಾಬ್ಲೆಟ್ ಪ್ರೇಮಿಗಳು ನಿರೀಕ್ಷೆಯಿಂದ ಕಾಯುತ್ತಿದ್ದ ದಿನ ಬಂದೇ ಬಿಟ್ಟಿತು.ಆಪಲ್ ನ ಐಪ್ಯಾಡ್ ನ ಬಗ್ಗೆ ನಾನಾ ತರಹದ ಊಹಾಪೋಹಗಳಿಗೆ ಇಂದು ತೆರೆಬಿದ್ದಿದೆ.
ಐಪ್ಯಾಡ್ 3 ಅಂತ ಒಬ್ರು , ಇಲ್ಲ ಇಲ್ಲ ಐಪ್ಯಾಡ್ HD ಅಂತ ಇನ್ನೊಬ್ರು ಅಂದಾಜು ಮಾಡಿದ್ದೇ ಮಾಡಿದ್ದು. ಈ ರೀತಿಯ ಸಾಂಪ್ರದಾಯಿಕ ಹೆಸರಿಗೆ ಜೋತು ಬೀಳದ ಆಪಲ್ ತನ್ನ ಹೊಸ ಐಪ್ಯಾಡ್ ಗೆ ನ್ಯೂ ಐಪ್ಯಾಡ್ ಎಂದು ನಾಮಕರಣ ಮಾಡಿದೆ. ಹೆಸರಿಗೆ ತಕ್ಕಂತೆ ಹೊಸ ಹೊಸ ಫೀಚರ್ಗಳನ್ನು ಸೇರಿಸಿ ಬಿಡುಗಡೆ ಮಾಡಿ ತನ್ನ ವೈರಿ ಟ್ಯಾಬ್ಲೆಟ್ ಉತ್ಪಾದಕರಿಗೆ ಹಾಗು ಲ್ಯಾಪ್ಟಾಪ್ ಹಾಗು ಪಿ.ಸಿ ಮಾರಾಟಗಾರರಿಗೂ ನಡುಕ ಹುಟ್ಟಿಸಿದೆ.
ಸ್ಯಾನ್ ಫ್ರಾನ್ಸಿಸ್ಕೋ ದಲ್ಲಿ ನಡೆದ ಸಮಾರಂಭದಲ್ಲಿ, ಆಪಲ್ ನ ಚೀಫ್ ಎಕ್ಸಿಕ್ಯುಟಿವ್ ಟಿಮ್ ಕೂಕ್ ನ್ಯೂ ಐಪ್ಯಾಡ್ ಅನ್ನು ಬಿಡುಗಡೆ ಮಾಡಿದರು. ಅಂದ ಹಾಗ ಆಪಲ್ ನ ಈ ನ್ಯೂ ಐಪ್ಯಾಡ್ ನ ವಿಶೇಷಗಳತ್ತ ಗಮನ ಹರಿಸೋಣ.
- ಡಿಸ್ಪ್ಲೇ - ರೆಟಿನಾ ಡಿಸ್ಪ್ಲೇ ತಂತ್ರಜ್ಞಾನದ 2048x1536 ಪಿಕ್ಸೆಲ್ ರೆಸಲ್ಯೂಶನ್ ನ 9.7 ಇಂಚ್ (ಡಯಾಗನಲ್) ಸ್ಕ್ರೀನ್. ಅದೂ LED ಬ್ಯಾಕ್ ಲಿಟ್ ಸ್ಕ್ರೀನ್ ನೊಂದಿಗೆ.
- ಪ್ರಾಸೆಸರ್- ಡ್ಯುಯಲ್ ಕೋರ್ ಆಪಲ್ A5X ಚಿಪ್ ಜೊತೆಗೆ ಕ್ವಾಡ್ರಾ ಕೋರ್ ಗ್ರಾಫಿಕ್ಸ್.
- ಕ್ಯಾಮರಾ- 5 ಮೆಗಾ ಪಿಕ್ಸೆಲ್ ಐಸೈಟ್ ಕ್ಯಾಮರಾ.
- ಬ್ಯಾಟರಿ- 42.5 ವಾಟ್ (ಪ್ರತಿ ಘಂಟೆಗೆ) ರೀಚಾರ್ಜ್ ಮಾಡಬಹುದಾದ ಆಂತರಿಕ ಬ್ಯಾಟರಿ. ವೆಬ್ ಸರ್ಫ್ ಹಾಗು ವೈ-ಫೈ ನಲ್ಲಿದ್ದರೂ 10 ಗಂಟೆ ಬ್ಯಾಕ್ ಅಪ್ ಹೊಂದಿರುವ ಬ್ಯಾಟರಿ ಇದಾಗಿದೆ.
- ತೂಕ- 652 ಗ್ರಾಂ (ವೈಫೈ), 662 ಗ್ರಾಂ ( ವೈಫೈ+ 4G)
- ಮಾಡೆಲ್ ಗಳು- ವೈಫೈ & ವೈಫೈ+ 4G
- ಬೆಲೆ- 16GB ಮಾಡೆಲ್ ಗೆ 499 ಡಾಲರ್, 32GB ಮಾಡೆಲ್ ಗೆ 599 ಡಾಲರ್, 16GB ಯಾ ಐಪ್ಯಾಡ್ ವೈಫೈ+ 4G ಗೆ 329 ಡಾಲರ್, 32GB ವೈಫೈ+4G ಮಾಡೆಲ್ ಗೆ 829 ಡಾಲರ್
Comments
Best Mobiles in India


Click it and Unblock the Notifications




