Home
ಕಂಪ್ಯೂಟರ್‌‌

ಭಾರತದಲ್ಲಿ MacBook Neo ಲಾಂಚ್: ಇದುವರೆಗಿನ ಅತ್ಯಂತ ಕೈಗೆಟುಕುವ Apple ಲ್ಯಾಪ್‌!

ಟೆಕ್ ದೈತ್ಯ Apple ತನ್ನ ಅತ್ಯಂತ ಕೈಗೆಟುಕುವ ಲ್ಯಾಪ್‌ಟಾಪ್ ಆಗಿ ಹೊಸ MacBook Neo ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ದೇಶದಲ್ಲಿ ಈ ಹೊಸ ಲ್ಯಾಪ್‌ಟಾಪ್ ₹70,000 (ವಿದ್ಯಾರ್ಥಿಗಳಿಗೆ ₹59,900 ವಿಶೇಷ ಬೆಲೆ ಇದೆ) ಒಳಗಿನ ಬೆಲೆ ವಿಭಾಗದಲ್ಲಿ ಲಭ್ಯವಿದ್ದು, ಇದುವರೆಗಿನ ಅತ್ಯಂತ ಅಗ್ಗದ ಮ್ಯಾಕ್‌ಬುಕ್ ಮಾದರಿಯಾಗಿ ಗುರುತಿಸಿಕೊಂಡಿದೆ. ಪ್ರೀಮಿಯಂ ಅಲ್ಯೂಮಿನಿಯಂ ಬಾಡಿ, ಆಕರ್ಷಕ Liquid Retina ಡಿಸ್‌ಪ್ಲೇ ಮತ್ತು ಲೈಟ್‌ವೇಟ್ ವಿನ್ಯಾಸದೊಂದಿಗೆ ಇದು ಸ್ಟೈಲಿಷ್ ಲುಕ್ ನೀಡುತ್ತದೆ. ಕಡಿಮೆ ಬೆಲೆಯ ಮ್ಯಾಕ್‌ಬುಕ್‌ಗಾಗಿ ಕಾಯುತ್ತಿದ್ದ ಬಳಕೆದಾರರಿಗೆ ಈ ಹೊಸ ಸಾಧನವು ವಿಶೇಷವಾಗಿ ಗಮನ ಸೆಳೆಯುವ ಬಿಡುಗಡೆ ಆಗಿದೆ. ಹಾಗಾದರೆ, ಹೊಸ Apple MacBook Neo ಯಾವ ವಿಶೇಷತೆಗಳನ್ನು ಹೊಂದಿದೆ ಎಂಬುದನ್ನು ತಿಳಿಯೋಣ.

Apple MacBook Neo: ಪ್ರಮುಖ ವೈಶಿಷ್ಟ್ಯಗಳು
ಹೊಸ Apple MacBook Neo ಲ್ಯಾಪ್‌ಟಾಪ್‌ನಲ್ಲಿ 13 ಇಂಚಿನ Liquid Retina ಡಿಸ್‌ಪ್ಲೇ ನೀಡಲಾಗಿದೆ. ಇದರ ರೆಸಲ್ಯೂಶನ್ 2,408×1,506 ಪಿಕ್ಸೆಲ್ ಆಗಿದ್ದು, 500 ನಿಟ್ಸ್ ಬ್ರೈಟ್‌ನೆಸ್ ನೀಡುತ್ತದೆ. ಜೊತೆಗೆ 1 ಬಿಲಿಯನ್ ಬಣ್ಣಗಳನ್ನು ಪ್ರದರ್ಶಿಸುವ ಸಾಮರ್ಥ್ಯ ಇದಕ್ಕೆ ಇದೆ. ಈ ಬೆಲೆ ವಿಭಾಗದಲ್ಲಿರುವ ಹಲವಾರು ಪಿಸಿ ಲ್ಯಾಪ್‌ಟಾಪ್‌ಗಳಿಗಿಂತ ಈ ಡಿಸ್‌ಪ್ಲೇ ಹೆಚ್ಚು ಸ್ಪಷ್ಟತೆ ಮತ್ತು ಉತ್ತಮ ಬೆಳಕು ನೀಡುತ್ತದೆ ಎಂದು ಕಂಪನಿ ಹೇಳಿದೆ.

ಭಾರತದಲ್ಲಿ MacBook Neo ಲಾಂಚ್: ಇದುವರೆಗಿನ ಅತ್ಯಂತ ಕೈಗೆಟುಕುವ Apple ಲ್ಯಾಪ್‌!

Apple A18 Pro chip ಪ್ರೊಸೆಸರ್ ಈ ಲ್ಯಾಪ್‌ಟಾಪ್‌ಗೆ ಶಕ್ತಿ ನೀಡುತ್ತದೆ. ದಿನನಿತ್ಯದ ಕೆಲಸಗಳು, ಬ್ರೌಸಿಂಗ್, ಡಾಕ್ಯುಮೆಂಟ್ ಎಡಿಟಿಂಗ್ ಹಾಗೂ ಮಲ್ಟಿಟಾಸ್ಕಿಂಗ್‌ನಲ್ಲಿ ಉತ್ತಮ ಕಾರ್ಯಕ್ಷಮತೆಯನ್ನು ನೀಡುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಆಪಲ್ ಹೇಳುವ ಪ್ರಕಾರ, ಇತ್ತೀಚಿನ Intel Core Ultra 5 ಹೊಂದಿರುವ ಜನಪ್ರಿಯ ಪಿಸಿ ಲ್ಯಾಪ್‌ಟಾಪ್‌ಗಳಿಗಿಂತ ದೈನಂದಿನ ಕೆಲಸಗಳಲ್ಲಿ ಇದು ಸುಮಾರು 50% ವೇಗವಾಗಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ Magic Keyboard ಮತ್ತು ದೊಡ್ಡ Multi-Touch ಟ್ರ್ಯಾಕ್‌ಪ್ಯಾಡ್ ಬಳಕೆದಾರರಿಗೆ ಸುಲಭ ಹಾಗೂ ನಿಖರ ನಿಯಂತ್ರಣ ನೀಡುತ್ತದೆ.

ಈ Apple MacBook Neo ಲ್ಯಾಪ್‌ಟಾಪ್ ಒಂದೇ ಚಾರ್ಜ್‌ನಲ್ಲಿ ಗರಿಷ್ಠ 16 ಗಂಟೆಗಳವರೆಗೆ ಬ್ಯಾಟರಿ ಬ್ಯಾಕಪ್ ನೀಡುತ್ತದೆ ಎಂದು ಕಂಪನಿ ತಿಳಿಸಿದೆ. ವಿಡಿಯೋ ಕಾಲ್‌ಗಳಿಗಾಗಿ 1080p FaceTime HD ಕ್ಯಾಮೆರಾ ನೀಡಲಾಗಿದೆ. ಜೊತೆಗೆ dual side-firing ಸ್ಪೀಕರ್‌ಗಳು Spatial Audio ಮತ್ತು Dolby Atmos ಬೆಂಬಲದೊಂದಿಗೆ ಉತ್ತಮ ಧ್ವನಿ ಅನುಭವ ನೀಡುತ್ತವೆ. ಇದು ಸಿನಿಮಾ ವೀಕ್ಷಣೆ ಮತ್ತು ಸಂಗೀತ ಕೇಳುವವರಿಗೆ ಉತ್ತಮ ಆಡಿಯೋ ಕ್ವಾಲಿಟಿಯನ್ನು ಒದಗಿಸುವ ಭರವಸೆ ತಂದಿದೆ.

ಸಂಪರ್ಕದ ವಿಭಾಗದಲ್ಲಿ, Wi-Fi 6E ಮತ್ತು Bluetooth 6 ಬೆಂಬಲವನ್ನು ನೀಡಲಾಗಿದೆ. ಜೊತೆಗೆ ಹೆಡ್‌ಫೋನ್ ಜ್ಯಾಕ್ ಮತ್ತು ಎರಡು USB-C ಪೋರ್ಟ್‌ಗಳನ್ನು ನೀಡಲಾಗಿದೆ. ಈ ಎರಡು ಪೋರ್ಟ್‌ಗಳ ಮೂಲಕ ಲ್ಯಾಪ್‌ಟಾಪ್ ಅನ್ನು ಚಾರ್ಜ್ ಮಾಡಬಹುದು ಹಾಗೂ ಹೊರಗಿನ ಡಿಸ್‌ಪ್ಲೇ ಅಥವಾ ಇತರ ಆಕ್ಸೆಸರಿಗಳನ್ನು ಸಂಪರ್ಕಿಸಲು ಸಹ ಸಾಧ್ಯ. ಇನ್ನು ಈ ಲ್ಯಾಪ್‌ಟಾಪ್ ಅಲ್ಯೂಮಿನಿಯಂ ಚ್ಯಾಸಿಸ್‌ನಿಂದ ಲ್ಯಾಪ್‌ಟಾಪ್ ದೃಢವಾಗಿರುವುದರ ಜೊತೆಗೆ ಪ್ರೀಮಿಯಂ ಅನುಭವವನ್ನು ನೀಡುತ್ತದೆ.

ಭಾರತದಲ್ಲಿ MacBook Neo ಲಾಂಚ್: ಇದುವರೆಗಿನ ಅತ್ಯಂತ ಕೈಗೆಟುಕುವ Apple ಲ್ಯಾಪ್‌!

ಆಪಲ್ ಇಂಟೆಲಿಜೆನ್ಸ್ ಮತ್ತು ಸಾಫ್ಟ್‌ವೇರ್ ವೈಶಿಷ್ಟ್ಯಗಳು
ಈ Apple MacBook Neo ಲ್ಯಾಪ್‌ಟಾಪ್‌ನಲ್ಲಿ Safari, Photos, Messages ಮತ್ತು FaceTime ಸೇರಿದಂತೆ ಹಲವು ಬಿಲ್ಟ್-ಇನ್ ಆಪ್‌ಗಳು ಲಭ್ಯವಿವೆ. ಜೊತೆಗೆ Apple Intelligence ಆಧಾರಿತ ವೈಶಿಷ್ಟ್ಯಗಳಾದ Writing Tools, Live Translation ಮತ್ತು ಇನ್ನಿತರ ಸ್ಮಾರ್ಟ್ ಟೂಲ್ಸ್‌ಗಳನ್ನು ಬಳಸಬಹುದು. ಈ ವೈಶಿಷ್ಟ್ಯಗಳು ಬಳಕೆದಾರರಿಗೆ ಬರವಣಿಗೆ, ಅನುವಾದ ಮತ್ತು ದೈನಂದಿನ ಡಿಜಿಟಲ್ ಕೆಲಸಗಳನ್ನು ಇನ್ನಷ್ಟು ಸುಲಭಗೊಳಿಸಲು ಸಹಾಯ ಮಾಡುತ್ತವೆ ಎಂದು ತಿಳಿಸಲಾಗಿದೆ.

ಭಾರತದಲ್ಲಿ ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Apple MacBook Neo ಆರಂಭಿಕ ಬೆಲೆ ₹69,900 ಆಗಿದೆ. ಆದರೆ, ವಿದ್ಯಾರ್ಥಿಗಳು ₹59,900 ವಿಶೇಷ ದರದಲ್ಲಿ ಖರೀದಿಸಬಹುದು. blush, indigo, silver ಮತ್ತು citrus ಎಂಬ ನಾಲ್ಕು ಬಣ್ಣಗಳಲ್ಲಿ ಲ್ಯಾಪ್‌ಟಾಪ್ ಬಿಡುಗಡೆಯಾಗಿದ್ದು, ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಈಗಿನಿಂದಲೇ ಪ್ರೀ-ಆರ್ಡರ್ ಮಾಡಲು ಅವಕಾಶ ಇದೆ. ಇನ್ನು ಮಾರ್ಚ್ 11ರಿಂದ ಈ ಲ್ಯಾಪ್‌ಟಾಪ್ ಮಾರಾಟಕ್ಕೆ ಲಭ್ಯವಾಗಲಿದೆ. ಒಟ್ಟಿನಲ್ಲಿ, ಕಡಿಮೆ ಬೆಲೆಯಲ್ಲಿ ಆಪಲ್ ಲ್ಯಾಪ್‌ಟಾಪ್ ಅನುಭವವನ್ನು ನೀಡುವ ಉದ್ದೇಶದಿಂದ ಬಂದಿರುವ ಈ ಹೊಸ ಮಾದಯುರಿ ವಿದ್ಯಾರ್ಥಿಗಳು, ಪ್ರೊಫೆಷನಲ್‌ಗಳು ಮತ್ತು ಸಾಮಾನ್ಯ ಬಳಕೆದಾರರಿಗೆ ಆಕರ್ಷಕ ಆಯ್ಕೆಯಾಗಬಹುದು.

Best Mobiles in India

English summary
Apple has launched the MacBook Neo in India, its most affordable MacBook yet, starting under ₹70,000 with a special ₹59,900 price for students.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+