ಕೋರ್ಟಿನಲ್ಲಿ ಆಪಲ್ ಬಾಯ್ಬಿಟ್ಟ 6 ಸತ್ಯಗಳು

Posted By: Varun
ಕೋರ್ಟಿನಲ್ಲಿ ಆಪಲ್ ಬಾಯ್ಬಿಟ್ಟ 6 ಸತ್ಯಗಳು

ಆಪಲ್ ನ ಐಪ್ಯಾಡ್, ಐಫೋನ್, ಐಪಾಡ್ ಯಾವುದೇ ತಗೊಳ್ಳಿ, ನಿಮಗೆ ಮೊದಲು ಅನ್ನಿಸೋದು ಏನಂದ್ರೆ, ಈ ಥರ ಉತ್ಕೃಷ್ಟವಾದ ಉತ್ಪನ್ನವನ್ನ ಹೇಗಪ್ಪಾ ಮಾಡಿದ್ರು, ಹೇಗೆ ಇದೆಲ್ಲಾ ಸಾಧ್ಯ ಆಯ್ತು ಅಂತಾ ತಾನೇ?

ನಿಮ್ಮ ಕೈಯಲ್ಲಿ ಆಪಲ್ ಉತ್ಪನ್ನವನ್ನ ಇಟ್ಕೊಂಡ್ರೆ ಹೆಮ್ಮೆ ಅನ್ನಿಸೋ ಥರ ಮಾಡಿರೋ ಆಪಲ್ ಎಂಜಿನಿಯರುಗಳು ಎಷ್ಟು ಕಷ್ಟ ಪಟ್ಟಿರಬಹುದು, ಏನೆಲ್ಲಾ ರಣತಂತ್ರ ರೂಪಿಸಿರಬಹುದು ಅಂತ ಇದುವರೆಗೂ ಹೊರ ಜಗತ್ತಿಗೆ ಬಹುಪಾಲು ಗೊತ್ತಿರಲಿಲ್ಲ.

ಆದರೆ ಈಗ ಸ್ಯಾಮ್ಸಂಗ್ ಹಾಗು ಆಪಲ್ ನಡುವೆ ಪೇಟೆಂಟ್ ಗೆ ಸಂಬಂಧಿಸಿದಂತೆ ಕಳೆದ ವಾರದಿಂದ ಅಮೆರಿಕಾದ ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದ್ದು, ಈಗ ಆಪಲ್ ತನ್ನ ಲ್ಯಾಬ್ ಗಳಲ್ಲಿ ಹೇಗೆ ಪ್ಲಾನ್ ಮಾಡಿ ಯಾರಿಗೂ ಗೊತ್ತಾಗದಂತೆ ಉತ್ಪನ್ನವನ್ನು ಹೊರತರುತ್ತದೆ ಎಂದು ವಿಚಾರಣೆ ವೇಳೆ ಬಯಲು ಮಾಡುತ್ತಿದೆ. ಕೆಲವು ಸತ್ಯಗಳಂತೂ ಶಾಕಿಂಗ್ ಎನಿಸುತ್ತವೆ.

ಆಪಲ್ ಹೇಳಿದ ಆ 6 ಸತ್ಯಗಳು ಏನು ಎಂಬುದನ್ನು ನೀವೇ ಓದಿ:

1) ಐಫೋನ್ ಮಾಡುವುದನ್ನು ಹಲವಾರು ಬಾರಿ ಕೈ ಬಿಡಲಾಯಿತಂತೆ- ಹೌದು. ಆಪಲ ನ ಹಿರಿಯ ಉಪಾಧ್ಯಕ್ಷ ಸರ್ ಜಾನಾಥನ್ ಐವ್ ಹೇಳಿಕೆಯ ಪ್ರಕಾರ ಐಫೋನ್ ಪ್ರಾಜೆಕ್ಟ್ ಅನ್ನು ಸುಮಾರು ಬಾರಿ ಕೈಬಿಡಲಾಗಿತ್ತಂತೆ. ಪ್ರಾರಂಭದಲ್ಲಿ ಐಫೋನ್ ಸಿದ್ದಪಡಿಸುತ್ತಿದ್ದಾಗ ಫೋನ್ ಅನ್ನು ಕಿವಿಯ ಹತ್ತಿರ ಇಟ್ಟುಕೊಂಡಾಗ ಆಟೋಮ್ಯಾಟಿಕ್ ಆಗಿ ಬಟನ್ ಗಳು ಚಾಲೂ ಆಗುತ್ತಿತ್ತಂತೆ. ಇದು ಹಲವಾರು ಬಾರಿ ಕಿರಿಕಿರಿ ಉಂಟುಮಾಡುತ್ತಿತ್ತಂತೆ.

2) ಐಫೋನ್ ತಯಾರಿಕೆಗೆ ಪ್ರಾಜೆಕ್ಟ್ ಪರ್ಪಲ್ ಹೆಸರು- ಐಫೋನ್ ಸಿದ್ದಪಡಿಸುವ ಪ್ರಾಜೆಕ್ಟ್ ಗೆ ಪ್ರಾಜೆಕ್ಟ್ ಪರ್ಪಲ್ ಎಂದು ಹೆಸರಿಡಲಾಗಿದ್ದು, ಐಫೋನ್ ನ ಯಾವುದೇ ಮಾಹಿತಿಯನ್ನು ಬೇರೆಯವರ ಜೊತೆ ಹಂಚಿಕೊಳ್ಳದ ಹಾಗೆ ನಿರ್ಬಂಧ ಹೇರಲಾಗಿತ್ತಂತೆ. ಈ ಪ್ರಾಜೆಕ್ಟ್ ಗೆ ಆಪಲ್ ಹೊರಗೆ ಇರುವ ಯಾರನ್ನೂ ತೆಗೆದುಕೊಂಡಿರಲಿಲ್ಲವಂತೆ. ಸೆಲೆಕ್ಟ್ ಆದವರಿಗೆ ಸುಮಾರು ವರ್ಷಗಳ ಕಾಲ ವೀಕ್ ಎಂಡ್ ಕೂಡ ಕೆಲಸ ಮಾಡಲು ಆದೇಶಿಸಲಾಗಿತ್ತಂತೆ. ಇನ್ನೊಂದು ಅಚ್ಚರಿಯ ಸಂಗತಿ ಏನೆಂದರೆ ಬಹುತೇಕ ಮಂದಿಗೆ ತಾವು ಯಾವ ಉತ್ಪನ್ನದ ಮೇಲೆ ಕೆಲಸ ಮಾಡುತ್ತಿದ್ದಾರೆ ಎಂದೇ ತಿಳಿಸಿರಲಿಲ್ಲವಂತೆ!

3) ಸ್ಟೀವ್ ಜಾಬ್ಸ್ ಗೆ 7 ಇಂಚ್ ಐಪ್ಯಾಡ್ ಇಷ್ಟವಿರಲಿಲ್ಲ- ಇಂಟರ್ನೆಟ್ ಹಾಗು ತಂತ್ರಾಂಶ ನೋಡಿಕೊಳ್ಳುತ್ತಿದ್ದ ಆಪಲ್ ನ ಹಿರಿಯ ಉಪಾಧ್ಯಕ್ಷ ಎಡ್ಡಿ ಕ್ಯೂ ಪ್ರಕಾರ ಸ್ಟೀವ್ ಜಾಬ್ಸ್ ಗೆ 7 ಇಂಚ್ ಟ್ಯಾಬ್ಲೆಟ್ ಅನ್ನು ಸಿದ್ದಪಡಿಸುವುದು ಇಷ್ಟವಿರಲಿಲ್ಲವಂತೆ. ಅದು ಆಪಲ್ iOS ತಂತ್ರಾಂಶವನ್ನು ಸಂಪೂರ್ಣವಾಗಿ ಬಳಸಲು ಸಾಧ್ಯವಾಗುವುದಿಲ್ಲ ಎಂಬುದು ಜಾಬ್ಸ್ ರವರ ಅಭಿಪ್ರಾಯವಾಗಿತ್ತಂತೆ.

4) ಬಳಕೆದಾರರ ಸಮೀಕ್ಷೆ ನಡೆಸುವುದು ನಿಜ- ಆಪಲ್ ತಾನು ಬಳಕೆದಾರರ ಬಗ್ಗೆ ಸಮೀಕ್ಷೆ ನಡೆಸುತ್ತಿಲ್ಲ ಎಂದು ಇದುವರೆಗೂ ಹೇಳಿಕೊಂಡಿತ್ತು. ಆದ್ರೆ ಕೋರ್ಟಿನಲ್ಲಿ ಸತ್ಯವನ್ನು ಒಪ್ಪಿಕೊಂಡ ಅದು, ಬಳಕೆದಾರ ಸಮೀಕ್ಷೆಯನ್ನು ಫೋನ್ ಹಾಗು ಇಂಟರ್ನೆಟ್ ಮೂಲಕ ಮಾಡುತ್ತಿದ್ದಾಗಿಒಪ್ಪಿಕೊಂಡಿದೆ.

5) ಜಾಹೀರಾತಿಗಾಗಿ ಹಣ ಖರ್ಚು ಮಾಡುತ್ತಿತ್ತು- ಆಪಲ್ ಹತ್ತಿರ ಸಾಕಷ್ಟು ಹಣವಿದ್ದು ತನ್ನ ಉತ್ಪನ್ನಗಳ ಮಾರಾಟಕ್ಕೆ ಜಾಹೀರಾತಿಗಾಗಿ ಹಣ ಮೀಸಲಿಟ್ಟಿತ್ತಂತೆ.

6) ಪ್ರತಿ ಹೊಸ ಆವೃತ್ತಿಯ ಐಫೋನ್ ಮಾರಾಟ ದಾಖಲೆ- ಪ್ರತಿ ಬಾರಿ ಐಫೋನ್ ಬಿಡುಗಡೆಯಾದಾಗಲೂ, ಅದರ ಮಾರಾಟ, ಹಿಂದಿನ ಆವೃತ್ತಿಗಳ ಒಟ್ಟು ಮಾರಾಟಕ್ಕಿಂತಾ ಜಾಸ್ತಿಯಾಗಿರುತ್ತಂತೆ. ಆದರೆ ಇದುವರೆಗೂ ಇದನ್ನು ಬಹಿರಂಗ ಪಡಿಸದ ಆಪಲ್ ಕೋರ್ಟಿನಲ್ಲಿ ಇದನ್ನು ಬಾಯಿ ಬಿಟ್ಟಿದೆ.

ಒಟ್ಟಾರೆಯಾಗಿ ಆಪಲ್ ನ ಇನ್ನೆಷ್ಟು ಸ್ಫೋಟಕ ಮಾಹಿತಿಗಳು ಈ ಕೇಸಿನ ಮೂಲಕ ಹೊರಬರುತ್ತದೋ ಅದು ಸ್ಟೀವ್ ಜಾಬ್ಸ್ ಗೂ ಗೊತ್ತಿರಲಿಕ್ಕಿಲ್ಲ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot