ವಿದ್ಯಾರ್ಥಿಗಳಿಗೆ ಗಿಫ್ಟ್?..ಬರುತ್ತಿದೆ ಅತ್ಯಂತ ಅಗ್ಗದ ಆಪಲ್ ಮ್ಯಾಕ್‌ಬುಕ್!
ಟೆಕ್ ದೈತ್ಯ ಆಪಲ್ ಎಂದರೆ ಎಂದಿಗೂ ಪ್ರೀಮಿಯಂ ಗ್ಯಾಜೆಟ್ ಉತ್ಪನ್ನಗಳ ಪ್ರತೀಕವಾಗಿಯೇ ಕಾಣುತ್ತದೆ. ಆಪಲ್‌ನ ಯಾವದೇ ಉತ್ಪನ್ನವು ಸ್ಮಾರ್ಟ್ ವಿನ್ಯಾಸ, ಶಕ್ತಿಶಾಲಿ ಕಾರ್ಯಕ್ಷಮತೆ ಮತ್ತು ಹೆಚ್ಚು ಬೆಲೆ ಹೊಂದಿರುತ್ತವೆ ಎಂಬುದು ನಮ್ಮ ಸಾಮಾನ್ಯ ಕಲ್ಪನೆ. ಆದರೆ, ಇದೀಗ ಆಪಲ್ ಹೊಸ ದಿಕ್ಕಿನಲ್ಲಿ ಹೆಜ್ಜೆ ಇಡುತ್ತಿದೆ. ಬ್ಲೂಂಬರ್ಗ್‌ನ ಇತ್ತೀಚಿನ ವರದಿ ಪ್ರಕಾರ, ಆಪಲ್ 2026ರಲ್ಲಿ ಅಗ್ಗದ ಮ್ಯಾಕ್‌ಬುಕ್ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಹೊಸ ಲ್ಯಾಪ್‌ಟಾಪ್ ವಿದ್ಯಾರ್ಥಿಗಳು, ಸಣ್ಣ ಉದ್ಯಮಗಳು ಮತ್ತು ಸಾಮಾನ್ಯ ಬಳಕೆದಾರರನ್ನು ಹೆಚ್ಚಾಗಿ ಗುರಿಯಾಗಿಸಿಕೊಂಡಿದೆ.!
ಹೌದು, ಬ್ಲೂಂಬರ್ಗ್‌ನ ಮಾರ್ಕ್ ಗುರ್ಮನ್ ವರದಿಯು ಪ್ರಕಾರ, ಈ ಹೊಸ ಮ್ಯಾಕ್‌ಬುಕ್‌ನ ಕೋಡ್‌ನೆಮ್ J700 ಆಗಿದ್ದು, ವೆಬ್ ಬ್ರೌಸಿಂಗ್, ಡಾಕ್ಯುಮೆಂಟ್ ಕೆಲಸ ಮತ್ತು ಚಿಕ್ಕ ಮೀಡಿಯಾ ಸಂಪಾದನೆ ಮಾಡಲು ಸೂಕ್ತವಾಗಿರಲಿದೆ. ಆಪಲ್ ಮೊದಲ ಬಾರಿಗೆ ಈ ಮ್ಯಾಕ್‌ಬುಕ್‌ನಲ್ಲಿ ಐಫೋನ್ ಚಿಪ್ ಬಳಕೆ ಮಾಡಲಿದೆ. ಇದು ಕಂಪ್ಯೂಟರ್‌ಗಳಿಗೆ ವಿನ್ಯಾಸಗೊಳಿಸಲಾದ ಪ್ರೊಸೆಸರ್‌ಗಳ ಬದಲಿಗೆ ಸ್ಮಾರ್ಟ್‌ಫೋನ್ ಚಿಪ್‌ನ ಶಕ್ತಿ ಉಪಯೋಗಿಸುವ ವಿಶಿಷ್ಟ ಪ್ರಯೋಗವಾಗಿದೆ. ವರದಿಯ ಪ್ರಕಾರ, ಈ ಚಿಪ್‌ನ ಕಾರ್ಯಕ್ಷಮತೆ ಹಳೆಯ M1 ಚಿಪ್‌ಗಿಂತಲೂ ಉತ್ತಮವಾಗಿದೆಯಂತೆ.

ಬ್ಲೂಂಬರ್ಗ್ ವರದಿಯಲ್ಲಿ ಉಲ್ಲೇಖಿಸಿರುವಂತೆ, ಈ ಅಗ್ಗದ ಮ್ಯಾಕ್‌ಬುಕ್‌ನ ಬೆಲೆ $1,000ಕ್ಕಿಂತ ಕಡಿಮೆ (ಭಾರತದಲ್ಲಿ ಸುಮಾರು ₹88,000) ಇರಲಿದೆ. ಹೊಸ ಮ್ಯಾಕ್‌ಬುಕ್‌ನ ಬೆಲೆ ಕಡಿಮೆ ಇರಲು ಸಾಮಾನ್ಯ LCD ಡಿಸ್ಪ್ಲೇ ಮತ್ತು ಸರಳ ಭಾಗಗಳನ್ನು ಬಳಸಲಾಗುತ್ತದೆ ಎಂದು ವರದಿ ಹೇಳುತ್ತದೆ. ಇದರ ಸ್ಕ್ರೀನ್ ಗಾತ್ರ 13.6 ಇಂಚುಗಳಿಗಿಂತ ಸ್ವಲ್ಪ ಚಿಕ್ಕದಾಗಿದ್ದು, ಇದು ಆಪಲ್‌ನ ಅತ್ಯಂತ ಸಣ್ಣ ಮ್ಯಾಕ್‌ಬುಕ್ ಆಗಿರಬಹುದು. ಗಮನಿಸುವುದಾದರೆ, ಪ್ರಸ್ತುತ M4 ಮ್ಯಾಕ್‌ಬುಕ್ ಏರ್‌ನ ಬೆಲೆ $999 ಆಗಿದ್ದು, ವಿದ್ಯಾರ್ಥಿಗಳಿಗೆ $899 ರ ರಿಯಾಯಿತಿ ಬೆಲೆಯಲ್ಲಿ ಲಭ್ಯವಿದೆ.ಹಾಗಾಗಿ, ಭಾರತದಲ್ಲಿ ಈ ಅಗ್ಗದ ಮ್ಯಾಕ್‌ಬುಕ್‌ನ ಬೆಲೆ ಮತ್ತಷ್ಟು ಕಡಿಮೆ ಇರಬಹುದಾದ ಸಾಧ್ಯತೆ ಇದೆ.
ಬಿಡುಗಡೆ ಯಾವಾಗ?
ಆಪಲ್ ಈಗಾಗಲೇ ಈ ಹೊಸ ಮ್ಯಾಕ್‌ಬುಕ್‌ನ ಪರೀಕ್ಷೆ ಮತ್ತು ಪ್ರಾಥಮಿಕ ಉತ್ಪಾದನೆಗೆ ಕೈ ಹಾಕಿದೆ ಎಂದು ವರದಿಯು ತಿಳಿಸುತ್ತಿದೆ, 2026ರ ಮೊದಲಾರ್ಧದಲ್ಲಿ ಈ ಸಾಧನವು ಅಧಿಕೃತವಾಗಿ ಬಿಡುಗಡೆ ಆಗುವ ಸಾಧ್ಯತೆ ಇದೆ. ಆಪಲ್‌ನ ಹೊಸ ಅಗ್ಗದ ಮ್ಯಾಕ್‌ಬುಕ್ ಯೋಜನೆ ಯಶಸ್ವಿಯಾದರೆ, ಇದು ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಮ್ಯಾಕ್ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಬಹುದು. ಅಗ್ಗದ ಬೆಲೆಯೊಂದಿಗೆ ಮ್ಯಾಕ್OS ಅನುಭವವನ್ನು ನೀಡುವ ಈ ಹೊಸ ಪ್ರಯತ್ನವು ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಬಳಕೆದಾರರಿಗೆ ಆಪಲ್‌ನ ವಿಶ್ವದಲ್ಲಿ ಮೊದಲ ಹೆಜ್ಜೆ ಇರಬಹುದು. ಇದರಿಂದ ಕ್ರೋಮ್‌ಬುಕ್ ಮತ್ತು ಅಗ್ಗದ ವಿಂಡೋಸ್ ಲ್ಯಾಪ್‌ಟಾಪ್‌ಗಳ ಮಾರುಕಟ್ಟೆಗೆ ಹೊಸ ಸ್ಪರ್ಧೆ ಹಾಕಬಹುದು.
M5 ಚಿಪ್‌ಸಹಿತ 14 ಇಂಚಿನ ಮ್ಯಾಕ್‌ಬುಕ್ ಪ್ರೊ!
ಕಳೆದ ತಿಂಗಳು Apple M5 ಚಿಪ್‌ನಿಂದ ನಡೆಸಲ್ಪಡುವ ಹೊಸ 14-ಇಂಚಿನ MacBook Pro ಅನ್ನು ಸದ್ದಿಲ್ಲದೆ ಅನಾವರಣಗೊಳಿಸುವ ಮೂಲಕ ಅಚ್ಚರಿಗೊಳಿಸಿತು. ಈ ಸಾಧನವು ಹಿಂದಿನ ಮಾದರಿಗಳಿಗಿಂತ 3.5 ಪಟ್ಟು ವೇಗವಾದ AI ಕಾರ್ಯಕ್ಷಮತೆಯನ್ನು ಒದಗಿಸುತ್ತದೆ ಮತ್ತು ಬ್ಯಾಟರಿ ಆಯುಷ್ಯವೂ ಹೆಚ್ಚು. ಪ್ರೊ ಲೈನ್‌ಅಪ್‌ನ ಸಿಗ್ನೇಚರ್ ವಿನ್ಯಾಸವನ್ನು ಉಳಿಸಿಕೊಂಡಿರುವ ಈ ಸಾಧನವು ಡೆವಲಪರ್‌ಗಳಿಗೆ ಸಮಾನವಾಗಿರುವ ಕಾರ್ಯಕ್ಷಮತೆಯನ್ನು ಒದಗಿಸುತ್ತಿದೆ. ದೇಶದಲ್ಲಿ ಇದರ ಆರಂಭಿಕ ಬೆಲೆ ₹1,69,900 ಆಗಿದ್ದು, Space Black ಮತ್ತು Silver ಬಣ್ಣಗಳಲ್ಲಿ apple.com/in ಹಾಗೂ ಅಧಿಕೃತ ಆಪಲ್ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಿದೆ.


Click it and Unblock the Notifications








