ಆಪಲ್ iOS 6.0 WWDC ಯಲ್ಲಿ ಅನಾವರಣ

Posted By: Varun
ಆಪಲ್ iOS 6.0 WWDC ಯಲ್ಲಿ ಅನಾವರಣ

ಇಮೇಜ್ ಕೃಪೆ: James Martin/CNET

ಇಂದಿನಿಂದ ಆಪಲ್ ನ ವರ್ಲ್ಡ್ ವೈಡ್ ಡೆವೆಲಪರ್ ಕಾನ್ಫರೆನ್ಸ್ 2012 ಶುರುವಾಗಲಿದ್ದು, ಸ್ಯಾನ್ ಫ್ರಾನ್ಸಿಸ್ಕೋ ದಲ್ಲಿ ನಡೆಯಲಿದೆ ಎಂಬ ಸುದ್ದಿ ಆಪಲ್ ನ ಅಭಿಮಾನಿಗಳಿಗೆ ಗೊತ್ತೇ ಇರುತ್ತೆ. ಪ್ರತಿ ವರ್ಷ ಆಪಲ್ ಕಂಪನಿ ಹೊಸ ಆವೃತ್ತಿಯ iOS ತಂತ್ರಾಂಶವನ್ನು ಅನಾವರಣಗೊಳಿಸಲು ಈ ವೇದಿಕೆಯನ್ನು ಬಳಸಿಕೊಳ್ಳುತ್ತದೆ.

ಜೂನ್ 11 ರಿಂದ ಜೂನ್ 15 ರ ವರೆಗೆ ನಡೆಯುವ ಈ ಕಾನ್ಫರೆನ್ಸ್ ನಲ್ಲಿ ಈಗಾಗಲೇ iOS 6 ಬಿಡುಗಡೆಯ ಬಗ್ಗೆ ಬ್ಯಾನರ್ ಗಳನ್ನು ಹಾಕಲಾಗಿದ್ದು ಸಾಕಷ್ಟು ಸುದ್ದಿಯಾಗಿದೆ. ಆಪಲ್ ನ iOS 6.0 ದಲ್ಲಿ ಹೊಸ ಹೊಸ ಫೀಚರುಗಳ ನಿರೀಕ್ಷೆ ಇದ್ದು, ಗೂಗಲ್ ಮ್ಯಾಪ್ಸ್ ರೀತಿಯಲ್ಲಿ 3D ಮ್ಯಾಪ್ಸ್ ಬರಬಹುದು ಎಂದು ನಿರೀಕ್ಷಿಸಲಾಗುತ್ತಿದೆ.

ಬರಿ iOS 6.0 ತಂತ್ರಾಂಶದ ಅನಾವರಣವಷ್ಟೇ ಅಲ್ಲದೆ ಐಪ್ಯಾಡ್ ಗಳಿಗೆ ಸಿರಿ ವಾಯ್ಸ್ ರೆಕಗ್ನಿಶನ್ ತಂತ್ರಾಂಶ ಹಾಗು iOS ಗೆ ಫೇಸ್ ಬುಕ್ ಅನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಅನುಕಲನ ಮಾಡಬಹುದು ಎಂಬ ನಿರೀಕ್ಷೆಯೂ ಇದೆ. ಇದು ಮೊದಲನೇ ಆವೃತ್ತಿಯ ಐಪ್ಯಾಡ್ ಹಾಗು ಹಳೆಯ ಐಪಾಡ್ ಟಚ್ ಗಳಿಗೆ ಹೊಂದಾಣಿಕೆಯಾಗಲಿಕ್ಕಿಲ್ಲ ಎಂಬ ಗುಮಾನಿಯೂ ಇದೆ.

ಆಪಲ್ ಕಳೆದ ವರ್ಷದ WWDC ಅಲ್ಲಿ iOS 5 ಅನ್ನು ಅನಾವರಣಗೊಳಿಸಿತ್ತು ಹಾಗು ಜೂನ್ 2010 ರ ಕಾನ್ಫರೆನ್ಸ್ ನಲ್ಲಿ iOS 4 ಅನ್ನು ಘೋಷಿಸಿತ್ತು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot