Home
ಕಂಪ್ಯೂಟರ್‌‌

ಇ ಪ್ಯಾಡ್ ಮೆಮೊ: ಆಸಸ್ ಟ್ಯಾಬ್ಲೆಟಿಗೆ ನಮೊ

By Super

ಇ ಪ್ಯಾಡ್ ಮೆಮೊ: ಆಸಸ್ ಟ್ಯಾಬ್ಲೆಟಿಗೆ ನಮೊ
ಆಸಸ್ ಕಂಪನಿಯು ನೂತನ ಟ್ಯಾಬ್ಲೆಟ್ Eee pad MeMo ಹೊರತರಲು ನಿರ್ಧರಿಸಿದೆ. ಈ ಟ್ಯಾಬ್ಲೆಟ್ ಆಂಡ್ರಾಯ್ಡ್ ತಂತ್ರಜ್ಞಾನ ಆಧರಿತವಾಗಿರಲಿದ್ದು, ಹತ್ತು ಹಲವು ಫೀಚರುಗಳೊಂದಿಗೆ ಬರಲಿದೆ. ಈ ಟ್ಯಾಬ್ಲೆಟ್ ಮಾರುಕಟ್ಟೆಗೆ ಮುಂದಿನ ವರ್ಷದ ಆರಂಭದಲ್ಲಿ ಆಗಮಿಸುವ ನಿರೀಕ್ಷೆಯಿದೆ.

Asus EEE Pad MeMo ಫೀಚರುಗಳು

* ಮೂರು ಡೈಮೆನ್ಷನ್ ಡಿಸ್ ಪ್ಲೇ

* ಬ್ಲೂಟೂಥ್ ಕಂಟ್ರೋಲರ್

* ಆಂಡ್ರಾಯ್ಡ್ 4.0 ಐಸ್ ಕ್ರೀಮ್ ಸ್ಯಾಂಡ್ ವಿಚ್ ಅಪರೇಟಿಂಗ್ ಸಿಸ್ಟಮ್

* ಎನ್ವಿಡಿಯಾ ಟೆಗ್ರಾ 3 ಪ್ರೊಸೆಸರ್

ಸಣ್ಣದಾದ, ಆಕರ್ಷಕವಾದ ವಿನ್ಯಾಸದೊಂದಿಗೆ ನೂತನ ಟ್ಯಾಬ್ಲೆಟ್ ಆಗಮಿಸಲಿದೆ. ಇದು 7 ಇಂಚಿನ ಡಿಸ್ ಪ್ಲೇ ಹೊಂದಿರಲಿದ್ದು, ಸಾಗಾಟ ಸುಲಭ. ಇದರಲ್ಲಿ ಹತ್ತು ಹಲವು ಫೀಚರುಗಳಿರಲಿದೆ ಎಂಬ ಸುದ್ದಿ ನೆಟ್ ಲೋಕದಲ್ಲಿ ಹರಿದಾಡುತ್ತಿದೆ. ಆದರೆ ಖಚಿತವಾಗಿ ಇಂತದ್ದೇ ಫೀಚರುಗಳಿರಲಿವೆ ಎಂಬ ವರದಿ ಇನ್ನೂ ಬಂದಿಲ್ಲ.

Eee pad MeMo ಟ್ಯಾಬ್ಲೆಟ್ ಹೆಚ್ಚುವರಿಯಾಗಿ ಮಿಮಿಕ್ ಬ್ಲೂಟೂಥ್ ಸೌಲಭ್ಯ ಹೊಂದಿದೆ. ಇದರಿಂದ ಫೋನ್ ಕರೆಗಳನ್ನು, ಸಂಗೀತ ಕೇಳಲು, ರಿಮೋಟ್ ಕಂಟ್ರೋಲ್ ಆಗಿ ಬ್ಲೂಟೂಥ್ ಕಂಟ್ರೋಲರ್ ಮೂಲಕ ನಿರ್ವಹಿಸಬಹುದಾಗಿದೆ.

ಉಳಿದಂತೆ ಇದರಲ್ಲಿ ಆಂಡ್ರಾಯ್ಡ್ 4.0 ಐಸ್ ಕ್ರೀಮ್ ಸ್ಯಾಂಡ್ ವಿಚ್ ಅಪರೇಟಿಂಗ್ ಸಿಸ್ಟಮ್ ಇರಲಿದೆ. ಈ ಕುರಿತು ಖಚಿತ ಮಾಹಿತಿ ದೊರಕಿಲ್ಲ. ಈ ಟ್ಯಾಬ್ಲೆಟ್ ಎನ್ವಿಡಿಯಾ ಟೇಗ್ರಾ 3 ಪ್ರೊಸೆಸರ್ ಹೊಂದಿರುವ ನಿರೀಕ್ಷೆಯನ್ನು ಮೂಲಗಳು ವ್ಯಕ್ತಪಡಿಸಿವೆ. ಇದರ ದರದ ಕುರಿತು ಯಾವುದೇ ಮಾಹಿತಿಯಿಲ್ಲ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+