ಆಸಸ್ ಪಿ ಸಿ 1225 ಬಿ ನೆಟ್ ಬುಕ್ ವಿಶೇಷ ಗೊತ್ತೆ?

Posted By:
 ಆಸಸ್ ಪಿ ಸಿ 1225 ಬಿ ನೆಟ್ ಬುಕ್ ವಿಶೇಷ ಗೊತ್ತೆ?

ಆಸಸ್ ಇದೀಗ ಹೊಸ ನೆಟ್ ಬುಕ್ ಈ ಪಿ ಸಿ 1225 ಬಿ ಯನ್ನು ಬಿಡುಗಡೆ ಮಾಡಿದೆ. ಈ ಕಾಂಪ್ಯಾಕ್ಟ್ ಸಾಧನ 11.6 ಇಂಚಿನ ಡಿಸ್ ಪ್ಲೇ ಹೊಂದಿದ್ದು ಈ ಕೆಳಗಿನ ಪ್ರಮುಖ ಲಕ್ಷಣಗಳನ್ನು ಹೊಂದಿದೆ.

ಲಕ್ಷಣಗಳು:

* 11.6 ಇಂಚಿನ ಸ್ಕ್ರೀನ್

* LED ಬ್ಯಾಕ್ ಹೊಳೆಯುವ ಡಿಸ್ ಪ್ಲೇ

* 1366 x 768 ಪಿಕ್ಸಲ್ ರೆಸ್ಯೂಲೇಶನ್

* ಡ್ಯುಯೆಲ್ ಕೋರ್ AMD ಫ್ಯೂಷನ್ E450 ಪ್ರೊಸೆಸರ್

* ಕ್ಲೋಕ್ ಸ್ಪೀಡ್ 1.65 GHz

* DDR3 ರೀತಿಯ 2 GB / 4 GB ಸಿಸ್ಟಮ್ ಮೆಮೊರಿ

* 750 GB ಹಾರ್ಡ್ ಡಿಸ್ಕ್ ಡ್ರೈವ್

* 0.3 ವೆಬ್ ಕ್ಯಾಮೆರಾದ ಮೆಗಾ ಪಿಕ್ಸಲ್

* ವೈಫೈ

* HDMI ಸಂಪರ್ಕ

* VGA

* USB 3.0 ಮತ್ತು USB 2.0 ಪೋರ್ಟ್

* ಮಲ್ಟಿ ಫಾರ್ಮೇಟ್ ಕಾರ್ಡ್ ರೀಡರ್

* 6 ಸೆಲ್ ಬ್ಯಾಟರಿ

ಇದು ಚಿಕ್ಕ ಮತ್ತು ಆಕರ್ಷಕವಾದ ನೆಟ್ ಬುಕ್ ಆಗಿದೆ. ಇದು ಕಪ್ಪು ಬಣ್ಣವನ್ನು ಹೊಂದಿದೆ. ಅಲ್ಲದೆ ಇದರಲ್ಲಿ QWERTY ಕೀಬೋರ್ಡ್ ಇರುವುದರಿಂದ ಬಳಸಲು ಸುಲಭವಾಗಿದೆ.ಇದರ ಡಿಸ್ ಪ್ಲೇ ಉತ್ತಮ ಗುಣಮಟ್ಟವನ್ನು ಹೊಂದಿದ್ದು ಹೈಡೆಫಿನೆಷನ್ ವೀಡಿಯೊಗಳನ್ನು ನೋಡಬಹುದು.

ಈ ಆಸಸ್ ನೋಟ್ ಬುಕ್ ಇನ್ನೂ ಮಾರುಕಟ್ಟೆಗೆ ಇನ್ನಷ್ಟೆ ಬರಬೇಕಾಗಿದೆ. ಇದರ ಬೆಲೆಯ ಬಗ್ಗೆ ಕಂಪನಿ ಅಧಿಕೃತವಾಗಿ ಘೋಷಿಸಲಿಲ್ಲವಾದರೂ ಕೈಗೆಟುಕುವ ದರದಲ್ಲಿ ಲಭ್ಯವಾಗಲಿದೆ ಎಂದು ಊಹಿಸಲಾಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot