ಹೊಸ Zenbook A14 ಮತ್ತು Vivobook 16 ಲ್ಯಾಪ್‌ಗಳ ಫೀಚರ್ಸ್ ಮತ್ತು ಬೆಲೆ ನೋಡಿ!
ಲ್ಯಾಪ್‌ಟಾಪ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಆಸಸ್ (Asus) ಕಂಪೆನಿ ಭಾರತದಲ್ಲಿ ತನ್ನ ಹೊಸ Zenbook A14 ಮತ್ತು Vivobook 16 ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸಿದೆ. ಈ ಎರಡು ಲ್ಯಾಪ್‌ಟಾಪ್‌ಗಳ ಮೂಲಕ ತನ್ನ ಸ್ನಾಪ್‌ಡ್ರಾಗನ್-ಚಾಲಿತ AI ಪಿಸಿಗಳ ಶ್ರೇಣಿಯನ್ನು ವಿಸ್ತರಿಸಿರುವ ಆಸಸ್ ಕಂಪೆನಿಯು, Zenbook A14 ಅನ್ನು ಅಲ್ಟ್ರಾ-ಪೋರ್ಟಬಿಲಿಟಿಗಾಗಿ ವಿನ್ಯಾಸಗೊಳಿಸಿದೆ. ಈ ಲ್ಯಾಪ್‌ಟಾಪ್ ಕೇವಲ 980 ಗ್ರಾಂ ತೂಕವಿದ್ದು, ಸೆರಾಲುಮಿನಿಯಮ್ ಚಾಸಿಸ್ ಅನ್ನು ಹೊಂದಿದೆ. ಇತ್ತ ವಿವೋಬುಕ್ 16 ಲ್ಯಾಪ್‌ಟಾಪ್ ಅನ್ನು ಪ್ರವೇಶ ಮಟ್ಟದ AI-ಚಾಲಿತ ಲ್ಯಾಪ್‌ಟಾಪ್ ಆಗಿ ಪರಿಚಯಿಲಾಗಿದ್ದು, AI-ವರ್ಧಿತ ಕಾರ್ಯಗಳಿಗಾಗಿ 45 ಟಾಪ್ಸ್ NPU ಕಾರ್ಯಕ್ಷಮತೆಯನ್ನು ತರುತ್ತದೆ. ಹಾಗಾದರೆ, Zenbook A14 ಮತ್ತು Vivobook 16 ಲ್ಯಾಪ್‌ಟಾಪ್‌ಗಳು ಹೊಂದಿರುವ ಪ್ರಮುಖ ವೈಶಿಷ್ಟ್ಯಗಳು ಯಾವುವು ಮತ್ತು ಬೆಲೆಗಳು ಎಷ್ಟು ಎಂಬ ವಿವರಗಳನ್ನು ನೋಡೋಣ ಬನ್ನಿ.
Zenbook A14 ಪ್ರಮುಖ ವೈಶಿಷ್ಟ್ಯಗಳು
Zenbook A14 ಲ್ಯಾಪ್‌ಟಾಪ್ ಅನ್ನು ಅದರ ಹಗುರವಾದ ಸೆರಾಲುಮಿನಿಯಮ್ TM ಚಾಸಿಸ್‌ನೊಂದಿಗೆ ಪೋರ್ಟಬಿಲಿಟಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದು ಸ್ನಾಪ್‌ಡ್ರಾಗನ್ X ಎಲೈಟ್ ಮತ್ತು ಸ್ನಾಪ್‌ಡ್ರಾಗನ್ X ಪ್ರೊಸೆಸರ್‌ಗಳನ್ನು, 45 TOPS AI ಕಾರ್ಯಕ್ಷಮತೆಯೊಂದಿಗೆ ಕ್ವಾಲ್ಕಾಮ್ ಹೆಕ್ಸಾಗನ್ NPU ಮತ್ತು 600-ನಿಟ್ ಪೀಕ್ ಬ್ರೈಟ್‌ನೆಸ್‌ನೊಂದಿಗೆ 14-ಇಂಚಿನ OLED ಡಿಸ್ಪ್ಲೇಯನ್ನು ಒಳಗೊಂಡಿದೆ. ಲ್ಯಾಪ್‌ಟಾಪ್ 32 ಗಂಟೆಗಳ ಬ್ಯಾಟರಿ ಬಾಳಿಕೆ, Wi-Fi 7 ಸಂಪರ್ಕ ಮತ್ತು ಡಾಲ್ಬಿ ಅಟ್ಮೋಸ್ ಬೆಂಬಲದೊಂದಿಗೆ ಡ್ಯುಯಲ್ ಸ್ಪೀಕರ್‌ಗಳನ್ನು ಒದಗಿಸುತ್ತದೆ. ಇದರ ಸಂಪೂರ್ಣ ಫೀಚರ್ಸ್ ಹೀಗಿವೆ,
- 14″ 16:10 FHD (1920 x 1200) OLED ಡಿಸ್‌ಪ್ಲೇ, 90% ಸ್ಕ್ರೀನ್-ಟು-ಬಾಡಿ ಅನುಪಾತ, 600-ನಿಟ್ಸ್ ಪೀಕ್ ಬ್ರೈಟ್ನೆಸ್, 100% DCI-P3, DisplayHDR 600 ಟ್ರೂ ಬ್ಲಾಕ್ ಪ್ರಮಾಣೀಕರಣ
- 16 GB 8448 MHz LPDDR5X RAM, 512 GB PCIe 4.0 x4 NVMe M.2 SSD
- ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ X ಎಲೈಟ್ ಪ್ರೊಸೆಸರ್ (45W ಚಿಪ್‌ಸೆಟ್ ಶಕ್ತಿ) / ಸ್ನಾಪ್‌ಡ್ರಾಗನ್ X ಪ್ರೊಸೆಸರ್ (28W ಚಿಪ್‌ಸೆಟ್ ಶಕ್ತಿ) ಕ್ವಾಲ್ಕಾಮ್ ಅಡ್ರಿನೊ iGPU ಮತ್ತು ಕ್ವಾಲ್ಕಾಮ್ ಹೆಕ್ಸಾಗನ್ NPU (45 TOPS) ಸಹಿತ
- Windows 11 ಹೋಮ್
- ASUS AI ಕ್ಯಾಮೆರಾ FHD 3DNR IR ಕ್ಯಾಮೆರಾ, ಆಂಬಿಯೆಂಟ್ ಲೈಟ್ ಮತ್ತು ಕಲರ್ ಸೆನ್ಸರ್‌ಗಳೊಂದಿಗೆ
- 2 x USB4 ಟೈಪ್-C (ಪೂರ್ಣ ಶ್ರೇಣಿಯ ಚಾರ್ಜಿಂಗ್ 5-20 V), 1 x USB 3.2 Gen 2 ಟೈಪ್-A, 1 x HDMI 2.1 (TMDS), 1 x 3.5 mm ಕಾಂಬೊ ಆಡಿಯೋ ಜ್ಯಾಕ್
- ವೈರ್‌ಲೆಸ್: ಟ್ರೈ-ಬ್ಯಾಂಡ್ ವೈ-ಫೈ 7 (802.11ax) (ಎಲೈಟ್ ರೂಪದಲ್ಲಿ ಮಾತ್ರ) / ವೈ-ಫೈ 6E (802.11ax), ಬ್ಲೂಟೂತ್ 5.4 ಟ್ರೈ-ಬ್ಯಾಂಡ್ / ಬ್ಲೂಟೂತ್ 5.3
- ಇತರ ವೈಶಿಷ್ಟ್ಯಗಳು: ಡಾಲ್ಬಿ ಅಟ್ಮಾಸ್ ಸೌಂಡ್ ಸಿಸ್ಟಮ್, ಬಿಲ್ಟ್-ಇನ್ ಅರೇ ಮೈಕ್ರೊಫೋನ್, ಸ್ಮಾರ್ಟ್ ಗೆಸ್ಚರ್ ಬೆಂಬಲದ ASUS ಎರ್ಗೊಸೆನ್ಸ್ ಟಚ್‌ಪ್ಯಾಡ್
- ತೂಕ: 980 ಗ್ರಾಂ
- 70 Wh ಲಿಥಿಯಂ-ಪಾಲಿಮರ್ ಬ್ಯಾಟರಿ, 90 W ಟೈಪ್-ಸಿ (ಎಲೈಟ್) / 65 W ಟೈಪ್-ಸಿ ಅಡಾಪ್ಟರ್‌ೊಂದಿಗೆ

Vivobook 16 ಪ್ರಮುಖ ವೈಶಿಷ್ಟ್ಯಗಳು
Vivobook 16 ಲ್ಯಾಪ್‌ಟಾಪ್ ಸ್ನಾಪ್‌ಡ್ರಾಗನ್ X ಪ್ರೊಸೆಸರ್‌ಗಳು ಮತ್ತು 45 TOPS NPU ಕಾರ್ಯಕ್ಷಮತೆಯೊಂದಿಗೆ AI ಸಾಮರ್ಥ್ಯಗಳನ್ನುಒದಗಿಸುತ್ತದೆ. ಇದು 16-ಇಂಚಿನ FHD+ IPS ಡಿಸ್ಪ್ಲೇ, AI-ಚಾಲಿತ ಕ್ಯಾಮೆರಾ ಮತ್ತು ನೈಜ-ಸಮಯದ ಅನುವಾದ ಮತ್ತು ಜನರೇಟಿವ್ ಫಿಲ್ ಇನ್ ಪೇಂಟ್‌ನಂತಹ AI ವೈಶಿಷ್ಟ್ಯಗಳನ್ನು ಹೊಂದಿದೆ. ಈ ಸಾಧನವು 27 ಗಂಟೆಗಳ ಬ್ಯಾಟರಿ ಬಾಳಿಕೆಯನ್ನು ಒದಗಿಸುತ್ತದೆ ಮತ್ತು USB4, HDMI 2.1, ಮತ್ತು ಮೀಸಲಾದ ಕೊಪಿಲೋಟ್ ಕೀಲಿಯೊಂದಿಗೆ ErgoSense ಕೀಬೋರ್ಡ್‌ನೊಂದಿಗೆ ಬರುತ್ತದೆ.ಇದರ ಸಂಪೂರ್ಣ ಫೀಚರ್ಸ್ ಹೀಗಿವೆ,
- 16-ಇಂಚಿನ FHD+ (1920×1200 ಪಿಕ್ಸೆಲ್‌ಗಳು) IPS ಸ್ಕ್ರೀನ್, 16:10 ಆಕಾರ ಅನುಪಾತ, 60Hz ರಿಫ್ರೆಶ್ ದರ, 45% NTSC ಬಣ್ಣ ಗ್ಯಾಮಟ್, 300-nit ಹೊಳಪು
- 16 GB 8448 MHz LPDDR5X RAM, 512 GB PCIe 4.0 x4 NVMe M.2 SSD
- ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ X1 26 100 ಪ್ರೊಸೆಸರ್ (30MB ಕ್ಯಾಶ್, 2.97GHz ವರೆಗೆ, 8 ಕೋರ್‌ಗಳು, 8 ಥ್ರೆಡ್‌ಗಳು) ಕ್ವಾಲ್ಕಾಮ್ ಅಡ್ರಿನೊ iGPU ಮತ್ತು ಹೆಕ್ಸಾಗನ್ NPU (45 TOPS ವರೆಗೆ)
- Windows 11 ಹೋಮ್
- FHD IR ಕ್ಯಾಮೆರಾ, ಗೌಪ್ಯತೆ ಶಟರ್ ಮತ್ತು ವಿಂಡೋಸ್ ಹಲೋ ಬೆಂಬಲ
- 2x USB 3.2 Gen 1 Type-A (5Gbps ವರೆಗೆ ಡೇಟಾ ವೇಗ), 2x USB 4.0 Gen 3 Type-C (ಡೇಟಾ ವೇಗ 40Gbps ವರೆಗೆ, ಡಿಸ್ಪ್ಲೇ/ಪವರ್ ಡೆಲಿವರಿ ಬೆಂಬಲ), 1x HDMI 2.1 TMDS, 1x 3.5mm ಕಾಂಬೊ ಆಡಿಯೋ ಜ್ಯಾಕ್
- ವೈರ್‌ಲೆಸ್: Wi-Fi 6E (802.11ax), ಬ್ಲೂಟೂತ್ 5.3
- ಇತರ ವೈಶಿಷ್ಟ್ಯಗಳು: ASUS ErgoSense ಕೀಬೋರ್ಡ್ (ಮೀಸಲಾದ ಕೊಪಿಲೋಟ್ ಕೀ), ASUS ErgoSense ಟಚ್‌ಪ್ಯಾಡ್ (127.0×78.47 mm) ಶಬ್ದ ಕಡಿತ ತಂತ್ರಜ್ಞಾನ, ASUS ಸ್ಮಾರ್ಟ್ ಗೆಸ್ಚರ್, ಡೈರಾಕ್ ಸೌಂಡ್, ಸೋನಿಕ್‌ಮಾಸ್ಟರ್ ಮತ್ತು ಬಿಲ್ಟ್-ಇನ್ ಅರೇ ಮೈಕ್ರೊಫೋನ್
- ತೂಕ: 1.88 ಕೆಜಿ
- 50 WHr 65W ವೇಗದ ಚಾರ್ಜಿಂಗ್ ಬೆಂಬಲ
Zenbook A14 ಮತ್ತು Vivobook 16 ಬೆಲೆ ಮತ್ತು ಲಭ್ಯತೆ
Zenbook A14 ಎರಡು ರೂಪಾಂತರಗಳಲ್ಲಿ ಲಭ್ಯವಿದೆ: 99,990 ರೂ. ಗೆ ಸ್ನಾಪ್‌ಡ್ರಾಗನ್ X ಪ್ರೊಸೆಸರ್ ಮತ್ತು 1,29,990 ರೂ. ಗೆ ಸ್ನಾಪ್‌ಡ್ರಾಗನ್ X ಎಲೈಟ್ ಪ್ರೊಸೆಸರ್ ಹೊಂದಿರುವ ಲ್ಯಾಪ್‌ಟಾಪ್ ಖರೀದಿಗೆ ಲಭ್ಯವಿದೆ. ಇತ್ತ Vivobook 16 ಲ್ಯಾಪ್‌ಟಾಪ್ 65,990 ರೂ.ಗಳ ಗ್ರಾಹಕ ಸ್ನೇಹಿ ಬಜೆಟ್ ಬೆಲೆಯಲ್ಲಿ ಲಭ್ಯವಿದೆ. ಈ ಎರಡೂ ಲ್ಯಾಪ್‌ಟಾಪ್‌ಗಳು ಆಸಸ್ ಇ-ಶಾಪ್, ಫ್ಲಿಪ್‌ಕಾರ್ಟ್, ಅಮೆಜಾನ್, ಆಸಸ್ ಎಕ್ಸ್‌ಕ್ಲೂಸಿವ್ ಸ್ಟೋರ್‌ಗಳು ಮತ್ತು ಆಯ್ದ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಖರೀದಿಗೆ ಲಭ್ಯವಿರುತ್ತವೆ ಎಂದು ಆಸಸ್ ಕಂಪೆನಿ ತಿಳಿಸಿದೆ .


Click it and Unblock the Notifications








