Subscribe to Gizbot

ಪ್ರೈಮ್, ಐಕೊನಿಯಾ: ಏಸಸ್ vs ಏಸರ್

Posted By: Super
ಪ್ರೈಮ್, ಐಕೊನಿಯಾ: ಏಸಸ್ vs ಏಸರ್
ಶೀಘ್ರದಲ್ಲಿ ಮಾರುಕಟ್ಟೆಗೆ ಆಗಮಿಸಲಿರುವ ಎರಡು ಟ್ಯಾಬ್ಲೆಟ್ ಗಳು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಏಸರ್ ಕಂಪನಿ ಟ್ರಾನ್ಸ್ ಫಾರ್ಮರ್ ಪ್ರೈಮ್ ಮತ್ತು ಏಸರ್ ಐಕೊನಿಯಾ ಎ200 ಎಂಬೆರಡು ಟ್ಯಾಬ್ಲೆಟ್ ಮಾಹಿತಿ ಇಲ್ಲಿದೆ.

Asus Transformer ಈಗಾಗಲೇ ಆಂಡ್ರಾಯ್ಡ್ ಟ್ಯಾಬ್ಲೆಟ್ ಮಾರುಕಟ್ಟೆಗೆ ಆಗಮಿಸಿದೆ. ಹೀಗಾಗಿ ನೂತನ Asus Transformer Prime ಗೆಲುವಿನ ಕುರಿತು ಯಾವುದೇ ಸಂಯವಿಲ್ಲ. ಮೂಲಗಳ ಪ್ರಕಾರ ಈ ಟ್ಯಾಬ್ಲೆಟ್ ಡಿಸೆಂಬರ್ 16ರಂದು ಮಾರುಕಟ್ಟೆಗೆ ಆಗಮಿಸಲಿದೆ.

ಆದರೆ Acer Iconia Tab A200 ಕುರಿತು ವದಂತಿಗಳು ಹೆಚ್ಚಿವೆ. ಆದರೆ ಇದು ಯಾವಾಗ ಮಾರುಕಟ್ಟೆಗೆ ಬರಲಿದೆ ಎನ್ನುವುದರ ಕುರಿತು ನಿಖರ ಮಾಹಿತಿ ಲಭ್ಯವಿಲ್ಲ.

ಏಸರ್ ಟ್ರಾನ್ಸ್ ಫಾರ್ಮರ್ ಪ್ರೈಮ್ ಸಣ್ಣ ಹಗುರ ತೆಳ್ಳಗಿನ ಟ್ಯಾಬ್ಲೆಟ್ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆನ್ ಲೈನ್ ನಲ್ಲಿ ಹರಿದಾಡುತ್ತಿರುವ ಇದರ ಚಿತ್ರಗಳಿಂದ ಇದರ ಗಾತ್ರ ಸುಲಭವಾಗಿ ತಿಳಿದುಕೊಳ್ಳಬಹುದು. ಇದರ ಕೀಪ್ಯಾಡ್ ಹಳೆಯ ಟ್ರಾನ್ಸ್ ಫಾರ್ಮರ್ ನಂತೆಯೇ ಇದೆ. ಆದರೆ ಇನ್ನಷ್ಟು ಆಕರ್ಷಕವಾಗಿದೆ.

ಪ್ರೈಮ್ ಟ್ಯಾಬ್ಲೆಟ್ ನಲ್ಲಿ ಮಿನಿ ಎಚ್ ಡಿಎಂಐ ಪೋರ್ಟ್ ಮತ್ತು ಮೈಕ್ರೊ ಎಸ್ ಡಿ ಪೋರ್ಟ್ ಗಳಿವೆ. ವೈಫೈ ಮತ್ತು ಬ್ಲೂಟೂಥ್ ಮುಂತಾದ ಕನೆಕ್ಟಿವಿಟಿ ಆಯ್ಕೆಗಳಿವೆ. ಕಂಪನಿಯು ಪ್ರೈಮ್ ಟ್ಯಾಬ್ಲೆಟಿಗೆ 3ಜಿ ಫೀಚರ್ಸ್ ಅಳವಡಿಸುವ ನಿರೀಕ್ಷೆಯಿದೆ.

ಏಸರ್ ಐಕಾನಿಯಾ ಎ200 ಕೂಡ ಮೈಕ್ರೊ ಎಸ್ ಡಿ ಕಾರ್ಡ್ ಮತ್ತು ಯುಎಸ್ ಬಿ ಪೋರ್ಟ್ ಹೊಂದಿದೆ. ಆನ್ ಲೂನ್ ಚಾಟಿಂಗ್ ಮತ್ತು ವಿಡಿಯೊ ರೆಕಾರ್ಡಿಂಗ್ ಗೆ ಸೂಕ್ತವಾದ ಸ್ಟಾಂಡರ್ಡ್ ವೆಬ್ ಕ್ಯಾಮ್ ಇದರಲ್ಲಿದೆ ಎಂದು ಮೂಲಗಳು ತಿಳಿಸಿವೆ.

ಪ್ರೈಮ್ ಟ್ಯಾಬ್ಲೆಟ್ ಎನ್ವಿಡಿಯಾ ಟೆಗ್ರಾ 3 ಪ್ರೊಸೆಸರ್ ಹೊಂದಿರಲಿದೆ. ಐಕಾನಿಯಾ ಟ್ಯಾಬ್ಲೆಟ್ ನಲ್ಲಿ ಎನ್ವಿಡಿಯಾ ಟೆಗ್ರಾ 2 ಪ್ರೊಸೆಸರ್ ಇರಲಿದೆ. ಟೆಗ್ರಾ 3 ಪ್ರೊಸೆಸರ್ ಹೆಚ್ಚು ಕರೆಂಟ್ ಬಳಸದೇ 2 ಮೆಗಾಹರ್ಟ್ಸ್ ಸ್ಪೀಡ್ ನಲ್ಲಿ ಆಕ್ಸೆಸ್ ಮಾಡಲು ನೆರವಾಗುತ್ತದೆ.

ಟ್ರಾನ್ಸ್ ಫಾರ್ಮರ್ ಪ್ರೈಮ್ ಟ್ಯಾಬ್ಲೆಟ್ 16 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ ಹೊಂದಿರಲಿದೆ. ಜೊತೆಗೆ ಇದು ಒಂದ ಜಿಬಿಯ RAM ಹೊಂದಿರಲಿದೆ. ಏಸರ್ ಐಕಾಣಿಯಾ ಕೂಡ 1ಜಿಬಿ RAM ಹೊಂದಿರಲಿದೆ.

ಏಸಸ್ ಟ್ರಾನ್ಸ್ ಫಾರ್ಮರ್ ಪ್ರೈಮ್(500ಜಿಬಿ) ದರ ಸುಮಾರು 25 ಸಾವಿರ ರು. ಆಸುಪಾಸಿನಲ್ಲಿದೆ. ಏಸರ್ ಐಕಾನಿಯಾ ಟಾಬ್ ಎ200 ದರದ ಬಗ್ಗೆ ಮಾಹಿತಿಯಿಲ್ಲ. ಒಂದು ವರದಿಯ ಪ್ರಕಾರ ಐಕಾನಿಯ ಮುಂದಿನ ವರ್ಷದ ಆರಂಭದಲ್ಲಿ ಮಾರುಕಟ್ಟೆಗೆ ಆಗಮಿಸಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot