Subscribe to Gizbot

ಮೊಟ್ಟಮೊದಲ ಆಂಡ್ರಾಯ್ಡ್ ಐಸ್ ಕ್ರೀಮ್ ಸ್ಯಾಂಡ್ ವಿಚ್ ಟ್ಯಾಬ್ಲೆಟ್

Posted By:
ಮೊಟ್ಟಮೊದಲ ಆಂಡ್ರಾಯ್ಡ್ ಐಸ್ ಕ್ರೀಮ್ ಸ್ಯಾಂಡ್ ವಿಚ್ ಟ್ಯಾಬ್ಲೆಟ್

ಆಸಸ್ ಟ್ಯಾಬ್ಲೆಟ್ ನಲ್ಲಿ ಆಂಡ್ರಾಯ್ಡ್ ಐಸ್ ಕ್ರೀಮ್ ಸ್ಯಾಂಡ್ ವಿಚ್ ಬಳಸಲಿದೆ ಎಂಬ ಸುದ್ದಿ ತಾಂತ್ರಿಕ ಲೋಕದಲ್ಲಿ ಕೆಲವು ಕಾಲಗಳಿಂದ ಕೇಳಿ ಬರುತ್ತಾ ಇತ್ತು. ಆದರೆ ಇದೀಗ ಕಂಪನಿ ಅಧಿಕೃತವಾಗಿ ಆಸಸ್ ಟ್ರಾನ್ಸ್ ಫಾರ್ಮರ್ ಪ್ರೈಮ್ ಪರಿಷ್ಕೃತವನ್ನು ಶೀಘ್ರವೆ ಅಂದರೆ ಜನವರಿ 12ರಿಂದ ಅಳವಡಿಸಲಿದೆ ಎಂಬ ಸುದ್ದಿ ಕೇಳಿ ಬರುತ್ತಿದೆ.

ಇದು ಬಂದರೆ ಆಂಡ್ರಾಯ್ಡ್ ಐಸ್ ಕ್ರೀಮ್ ಸ್ಯಾಂಡ್ ವಿಚ್ ಬಳಸಿದ ಮೊದಲ ಟ್ಯಾಬ್ಲೆಟ್ ಎಂಬ ಕೀರ್ತಿಗೆ ಪಾತ್ರವಾಗಲಿದೆ.ಇದರಲ್ಲಿ ಬೂಟ್ ಲೋಡರ್ ಪವರ್ ಇದ್ದು ಟೆಗ್ರಾ 3 ಪ್ರೊಸೆಸರ್ ಬಳಸಲಾಗಿದ್ದು, ಇದನ್ನು ಕಸ್ಟಮ್ ROMs ಇರುವ ಸಾಧನಗಳಲ್ಲಿ ಬಳಸಬಹುದು.

ಆದರೆ ಇದರಲ್ಲಿ ಕಂಡು ಬರುವ ಸಮಸ್ಯೆ ಅಂದರೆ ಇದರಲ್ಲಿ GPS ಸಿಗ್ನಲ್ ಕೇಳಿ ಬರುವುದಿಲ್ಲ ಒಂದು ವೇಳೆ ಲಾಕ್ ಸಿಕ್ಕಿದರೂ ಅದು ತುಂಬಾ ಹೊತ್ತು ನಿಲ್ಲವುದಿಲ್ಲ. ಆದರೆ ಇದರ ಬಗ್ಗೆ ಆಸಸ್ ಹಾರ್ಡ್ ವೇರ್ ಡಿಸೈನ್ ನಿಂದಾಗಿ ಈ ರೀತಿ ಇರುತ್ತದೆ. ಇದರಲ್ಲಿರುವ ಲೋಹದ ಕವಚದಿಂದ ಈ ರೀತಿಯ ಸಮಸ್ಯೆ ಉಂಟಾಗುತ್ತದೆ ಎಂದು ಹೇಳಲಾಗಿದೆ. ಆದರೆ ಬೇರೆ ಅನೇಕ ಲೋಹದ GPS ಸಾಧನಗಳಿದ್ದು ಅವುಗಳನ್ನು ಬಳಸಿದರೆ ಯಾವುದೇ ತೊಂದರೆಯಿಲ್ಲದೆ ಕಾರ್ಯವನ್ನು ನಿರ್ವಹಿಸಲು ಸಾಧ್ಯವಾಗಲಿದೆ.

ಈ ಆಸಸ್ ಟ್ಯಾಬ್ಲೆಟ್ ಭಾರತೀಯ ಮಾರುಕಟ್ಟೆಯಲ್ಲಿ ರು. 30, 000 ಬೆಲೆಗೆ ಲಬ್ಯವಾಗಲಿದೆ ಎಂಬ ಸುದ್ದಿ ಕೇಳಿ ಬರುತ್ತಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot