Subscribe to Gizbot

ಪ್ರಪಂಚದಲ್ಲಿಯೆ ನಂ.1 ಟ್ಯಾಬ್ಲೆಟ್ ಯಾವುದು ಗೊತ್ತಾ?

Posted By:
ಪ್ರಪಂಚದಲ್ಲಿಯೆ ನಂ.1 ಟ್ಯಾಬ್ಲೆಟ್ ಯಾವುದು ಗೊತ್ತಾ?
ಒಂದು ಕಂಪನಿ ಹೊಸ ಮಾಡಲ್ ಟ್ಯಾಬ್ಲೆಟ್ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಸ್ವಲ್ಪದರಲ್ಲೀಯೆ ಮತ್ತೊಂದು ಕಂಪನಿ ಗುಣಮಟ್ಟದ ಟ್ಯಾಬ್ಲೆಟ್ ಬಿಡುಗಡೆ ಮಾಡಿರುತ್ತಿದೆ. ಆದ್ದರಿಂದಾಗಿ ಟ್ಯಾಬ್ಲೆಟ್ ಗಳ ನಡುವೆ ಸ್ಪರ್ಧೆ ಅಧಿಕವಾಗಿದೆ. ಇದೀಗ ಹೊಸ ಏಸಸ್ ಟ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡಿದ್ದು ಟ್ಯಾಬ್ಲೆಟ್ ಲೋಕದಲ್ಲಿ ಆಸಸ್ ಟ್ರಾನ್ಸ್ ಫಾರ್ಮ್ ಪ್ರೈಮ್ ಅಧಿಕ ಸುದ್ಧಿಯನ್ನು ಮಾಡುತ್ತಿದೆ. ಈ ಟ್ಯಾಬ್ಲೆಟ್ ಅತ್ಯುತ್ತಮವಾದ 10.1 ಇಂಚಿನ IPS LCD ಸಾಮರ್ಥ್ಯವಿರುವ ಮತ್ತು HD ರೆಸ್ಯೂಲೇಶನ್ ಟಚ್ ಸ್ಕ್ರೀನ್ ಹೊಂದಿದ್ದು ನೋಡಲು ಕೂಡ ಅತ್ಯಾಕರ್ಷಕವಾಗಿದೆ.

ಈಏಸಸ್ ಟ್ಯಾಬ್ಲೆಟ್ ನ ಮುಖ್ಯ ಲಕ್ಷಣಗಳು ಇಂತಿವೆ.

* NVIDIA ಟೆಗ್ರಾ 3 ಚಿಪ್ ಸೆಟ್

* ಕ್ವಾಡ್ ಕೋರ್ 1.3 GHz ಕೋರ್ಟೆಕ್ಷ್ -A9 ಪ್ರೊಸೆಸರ್ ಮತ್ತು ULP ಜೀಫೋರ್ಸ್ ಗ್ರಾಫಿಕ್ ಪ್ರೊಸೆಸಿಂಗ್ ಯೂನಿಟ್

* ಗೂಗಲ್ ಆಂಡ್ರಾಯ್ಡ್ v3.2 ಹನಿಕೋಂಬ್ ಆಪರೇಟಿಂಗ್ ಸಿಸ್ಟಮ್ ಮತ್ತು v4.0 ಐಸ್ ಕ್ರೀಮ್ ಸ್ಯಾಂಡ್ ವಿಚ್ ಆಂಡ್ರಾಯ್ಡ್ ಗೆ ಅಪಡೇಟ್ ಸಪೋರ್ಟ್

* 8 ಮೆಗಾ ಪಿಕ್ಸಲ್ LED ಫ್ಲಾಷ್ ಕ್ಯಾಮೆರಾ ಮತ್ತು 1080p ವೀಡಿಯೊ ರೆಕಾರ್ಡಿಂಗ್ ಸಾಮರ್ಥ್ಯ

* ವೀಡಿಯೊ ಸಮ್ಮೇಳನಕ್ಕೆ 1.2 ಸೆಕಂಡರಿ ಕ್ಯಾಮೆರಾ

ಈ ಎಲ್ಲಾ ಗುಣಗಳು ಈ ಟ್ಯಾಬ್ಲೆಟ್ ಅನ್ನು ಪ್ರಪಂಚದಲ್ಲಯೆ ಅತಿ ಸಾಮರ್ಥ್ಯವನ್ನು ಹೊಂದಿರುವ ಟ್ಯಾಬ್ಲೆಟ್ ಆಗಿ ಮಾಡಿದೆ.

ಇದೀಗ ಬಂದ ಆಶ್ಚರ್ಯಕರ ಸುದ್ಧಿಯ ಪ್ರಕಾರ ಸೋನಿ ಪ್ಲೇ ಸ್ಟೇಷನ್ 3 ಡ್ಯುಯೆಲ್ ಶಾಕ್ ಕಂಟ್ರೋಲರ್ ಗೆ ಸರಿಯಾಗಿ ಹೊಂದಿಕೆಯಾಗುವಂತಹ ಟ್ಯಾಬ್ಲೆಟ್ ಅಂದರೆಏಸಸ್ ಟ್ರಾನ್ಸ್ ಫಾರ್ಮರ್ ಆಗಿದೆ.ಏಸಸ್ ಟ್ರಾನ್ಸ್ ಫಾರ್ಮೇರ್ ಫ್ರೈಮ್ ಅನ್ನು ಸೋನಿ ಪ್ಲೇ ಸ್ಟೇಷನ್ 3 ಡ್ಯುಯೆಲ್ ಶಾಕ್ ಕಂಟ್ರೋಲರ್ ಗೆ ಜೋಡಿಸಲು ಯಾವುದೆ ಪ್ರತ್ಯೇಕ ಡ್ರೈವರ್ ಅಗತ್ಯವಿಲ್ಲ.

ಇದನ್ನು USB ಪೋರ್ಟ್ ಬಳಸಿ ಜೋಡಿಸಲಾಗುವುದು. ಅಲ್ಲದೆ ಸೋನಿ ಪ್ಲೇ ಸ್ಟೇಷನ್ 3 ಡ್ಯುಯೆಲ್ ಶಾಕ್ ಕಂಟ್ರೋಲರ್ ಅನ್ನು ವೈರ್ ಲೆಸ್ ಆಗಿ ಕೂಡ ಜೋಡಿಸಬಹುದು. ಆದರೆ ಕೆಲವೊಂದು ಗೇಮ್ ಅನ್ನು ಡಿಟೆಕ್ಟರ್ ಗೆ ಕಂಡು ಹಿಡಿಯಲು ಕಷ್ಟವಾಗುತ್ತದೆ. ಆದ್ದರಿಂದ USB ಸಂಪರ್ಕವನ್ನು ಬಳಸುವುದು ಒಳ್ಳೆಯದು.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot