ಆಸಸ್ ಲ್ಯಾಪ್ ಟಾಪ್: ಎರಡು "ಯು" ನಡುವೆ ಏನಿದೆ?

By Super
|

ಆಸಸ್ ಲ್ಯಾಪ್ ಟಾಪ್: ಎರಡು
ಆಸಸ್ ಕಂಪನಿಯು ಹೊಸದೊಂದು ನೋಟ್ ಬುಕ್ ಕಂಪ್ಯೂಟರ್ ಅನಾವರಣ ಮಾಡಲಿದೆ. ಅದರ ಹೆಸರು ಆಸಸ್ ಯು32ಯು. ಇದು 13.3 ಇಂಚಿನ ಡಿಸ್ ಪ್ಲೇ ಹೊಂದಿದೆ. ಅದರಲ್ಲಿ ಯಾವೆಲ್ಲ ಫೀಚರುಗಳಿರಲಿವೆ ಎಂದು ಕೇಳುತ್ತೀರಾ?

ಬ್ರಿಲಿಯಂಟ್ ಡಿಸ್ ಪ್ಲೇ ಮಾತ್ರವಲ್ಲದೇ ವಿಂಡೋಸ್ 7 ಹೋಮ್ ಅಪರೇಟಿಂಗ್ ಸಿಸ್ಟಮ್ ಕೂಡ ಇದರಲ್ಲಿರಲಿದೆ. AMDಯ E-4 Fusion APU ತಂತ್ರಜ್ಞಾನ ಈ ನೋಟ್ ಬುಕ್ಕಿನಲ್ಲಿರಲಿದ್ದು ಅತ್ಯುತ್ತಮ ಸ್ಪಷ್ಟತೆ ಮತ್ತು ಅನನ್ಯ ಬಣ್ಣವನ್ನು ನೀಡಲಿದೆ.

ಇದು ಅತ್ಯಧಿಕ ಕಾರ್ಯಕ್ಷಮತೆಯ ನೋಟ್ ಬುಕ್ ಕೂಡ ಹೌದು. ಇದು ಹೆಚ್ಚು ಶಕ್ತಿಶಾಲಿ RAM ಮತ್ತು ವಿಫುಲ ಹಾರ್ಡ್ ಡ್ರೈವ್ ಸ್ಥಳಾವಕಾಶ ಹೊಂದಿದೆ. ಇದು 2 ಜಿಬಿ RAM ಮತ್ತು 320 ಜಿಬಿ ಹಾರ್ಡ್ ಡಿಸ್ಕ್ ಇದರಲ್ಲಿರಲಿದೆ.

ಯುಎಸ್ ಬಿ ಪೋರ್ಟ್, ಬ್ಲೂಟೂಥ್ ಕೂಡ ಇದರಲ್ಲಿದೆ. 8 ಸೆಲ್ 5,600 mAh ಬ್ಯಾಟರಿ ಇದರಲ್ಲಿರಲಿದೆ. ಅಂದ ಹಾಗೆ ಇದರ ಬ್ಯಾಟರಿ ಬಾಳಿಕೆ 12 ಗಂಟೆ. ಹೀಗಾಗಿ ಹೆಚ್ಚು ಬ್ಯಾಟರಿ ಬಾಳಿಕೆಯ ಗ್ಯಾಡ್ಜೆಟ್ ಹುಡುಕುವರಿಗೆ ಈ ನೋಟ್ ಬುಕ್ ಸೂಕ್ತ.

ಚಾಟಿಂಗ್ ಮತ್ತು ಸೋಷಿಯನ್ ನೆಟ್ ವರ್ಕಿಂಗ್ ಅವಶ್ಯಕತೆಗಾಗಿ ವೆಬ್ ಕ್ಯಾಮರಾ ಇದೆ. ಕಂಪನಿಯು ಈ ನೋಟ್ ಬುಕ್ ಕಂಪ್ಯೂಟರ್ ದರದ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಆದರೆ ಮೂಲಗಳ ಪ್ರಕಾರ Asus U32U ದರ ಸುಮಾರು 25 ಸಾವಿರ ರು. ಇರಲಿದೆಯಂತೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X