ಅಸುಸ್ ವಿಂಡೋಸ್ RT ಎರಡು ಟ್ಯಾಬ್ಲೆಟ್ ಅನಾವರಣ

Posted By: Varun
ಅಸುಸ್ ವಿಂಡೋಸ್ RT ಎರಡು ಟ್ಯಾಬ್ಲೆಟ್ ಅನಾವರಣ

ವಿಂಡೋಸ್ 8, ವಿಂಡೋಸ್ 8,ವಿಂಡೋಸ್ 8. ಎಲ್ಲಾ ಕಡೆ ಬರೀ ಅದೇ ಸುದ್ದಿ. ಪೂರ್ಣ ಪ್ರಮಾಣದ ವಿಂಡೋಸ್ 8 ತಂತ್ರಾಂಶ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಗುವುದರಿಂದ ಈಗಲೇ ಬಹುತೇಕ ಕಂಪನಿಗಳು ತಮ್ಮ ತಮ್ಮ ವಿಂಡೋಸ್ ಆಧಾರಿತ ಪ್ರಯೋಗಾತ್ಮಕ ಟ್ಯಾಬ್ಲೆಟ್ ಅನ್ನು ಅನಾವರಣಗೊಳಿಸುತ್ತಿವೆ.

ಡೆಲ್ ಹಾಗು ಏಸರ್ ಕಂಪನಿಗಳು ಈಗಾಗಲೇ ಅನಾವರಣಗೊಳಿಸಿದ್ದುಈಗ ಅಸುಸ್, ವಿಂಡೋಸ್ RT (ವಿಂಡೋಸ್ Run Time ಟ್ಯಾಬ್ಲೆಟ್ ಆವೃತ್ತಿಯನ್ನು ವಿಂಡೋಸ್ RT ಎಂದು ಕರೆಯಲಾಗುತ್ತದೆ) ಹೊಂದಿರುವ ಟ್ಯಾಬ್ಲೆಟ್ 600 ಹಾಗು ಟ್ಯಾಬ್ಲೆಟ್ 810 ಹೆಸರಿನ ಎರಡು ಟ್ಯಾಬ್ಲೆಟ್ ಗಳನ್ನು ಅನಾವರಣಗೊಳಿಸಿದೆ.

ಟ್ಯಾಬ್ಲೆಟ್ 600 ನ ಫೀಚರುಗಳು ಈ ರೀತಿ ಇವೆ:

 • ವಿಂಡೋಸ್ RT ತಂತ್ರಾಂಶ

 • 10.1 ಇಂಚ್ ಸ್ಕ್ರೀನ್

 • 366x768 IPS+ ಟಚ್ ಸ್ಕ್ರೀನ್

 • ಕ್ವಾಡ್ ಕೋರ್ ಎನ್ವಿಡಿಯ ಟೆಗ್ರಾ 3 ಮೊಬೈಲ್ ಪ್ರೋಸೆಸರ್

 • 2 GB ರಾಮ್

 • ವೈಫೈ, ಬ್ಲೂಟೂತ್ 4.0, ಡಿಜಿಟಲ್ ಕಂಪಾಸ್, NFC

 • 2 ಮೆಗಾ ಪಿಕ್ಸೆಲ್ ಮುಂಬದಿಯ ಕ್ಯಾಮರಾ

 • 8 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮರಾ, LED ಫ್ಲಾಶ್ ನೊಂದಿಗೆ.
ಟ್ಯಾಬ್ಲೆಟ್ 810 ನ ಫೀಚರುಗಳು ಈ ರೀತಿ ಇವೆ:
 • ವಿಂಡೋಸ್ RT ತಂತ್ರಾಂಶ

 • 11.6 ಇಂಚ್ ಟಚ್ ಸ್ಕ್ರೀನ್

 • 366x768 ಸೂಪರ್ IPS+ ಟಚ್ ಸ್ಕ್ರೀನ್

 • ಇಂಟೆಲ್ ಮೆಡ್ ಫೀಲ್ಡ್ ಮೊಬೈಲ್ ಪ್ರೋಸೆಸರ್

 • ಡಿಜಿಟಲ್ ಪೆನ್ ಹಾಗು ಮಲ್ಟಿ ಟಚ್ ಫಿಂಗರ್ ಕನೆಕ್ಟ್ ಮಾಡುವ ಸಾಮರ್ಥ್ಯ

 • 2 GB ರಾಮ್

 • 64 GB ಫ್ಲಾಶ್ ಮೆಮೊರಿ

 • ವೈಫೈ, ಬ್ಲೂಟೂತ್ 4.0, ಡಿಜಿಟಲ್ ಕಂಪಾಸ್, NFC
 

ಈ ಎರಡೂ ಮಾಡಲ್ ಗಳು ವರ್ಷದ ಮುಂದಿನ ತಿಂಗಳುಗಳಲ್ಲಿ ಬಿಡುಗಡೆಯಾಗುವಸಾಧ್ಯತೆ ಇದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot