ASUS: 18 ಗಂಟೆ ಬ್ಯಾಟರಿ ಬ್ಯಾಕಪ್! 2 ಹೊಸ ಲ್ಯಾಪ್‌ಟಾಪ್ ಲಾಂಚ್; ಸೂಪರ್ ಫೀಚರ್ಸ್.. ಬೆಲೆ ಎಷ್ಟು?
ಆಸುಸ್ (ASUS) ಭಾರತದಲ್ಲಿ ಎರಡು ಹೊಸ ಸೊಗಸಾದ ಲ್ಯಾಪ್‌ಟಾಪ್‌ಗಳನ್ನು ಬಿಡುಗಡೆ ಮಾಡಿದೆ. ಇವು ವಿವೋಬುಕ್ S14 (Vivobook S14 - S3407VA) ಮತ್ತು ವಿವೋಬುಕ್ S14 ಫ್ಲಿಪ್ (Vivobook S14 Flip -TP3402VAO) ಎಂಬ ಹೆಸರಿನೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿವೆ. ವಿಶೇಷವೆಂದರೆ, ಈ 14 ಇಂಚಿನ ಲ್ಯಾಪ್‌ಟಾಪ್‌ಗಳನ್ನು ವಿದ್ಯಾರ್ಥಿಗಳು, ಕಂಟೆಂಟ್ ಕ್ರಿಯೇಟರ್ ಮತ್ತು ಯುವ ವೃತ್ತಿಪರರನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಇವು ಸ್ಲಿಮ್ ವಿನ್ಯಾಸ ಹೊಂದಿದ್ದು, ಬಳಸಲು ಮತ್ತು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಲು ಸುಲಭವಾಗಿವೆ.
ಆಸುಸ್ ವಿವೋಬುಕ್ ಲ್ಯಾಪ್‌ಟಾಪ್‌ಗಳು 13ನೇ ಜೆನ್ ಇಂಟೆಲ್ H ಸರಣಿಯ ಪ್ರೊಸೆಸರ್ ಹೊಂದಿದೆ. ವಿವೋಬುಕ್ 14 ಸರಣಿಯು ದಿನವಿಡೀ ಬ್ಯಾಟರಿ ಬಾಳಿಕೆ ನೀಡುತ್ತದೆ. ಹಾಗೆಯೇ 16:10 ಡಿಸ್ಪ್ಲೇಯೊಂದಿಗೆ ಅಲ್ಟ್ರಾ ಸ್ಲಿಮ್ ವಿನ್ಯಾಸವನ್ನು ಹೊಂದಿದೆ. ವಿವೋಬುಕ್ S14 ಮಿಲಿಟರಿ ದರ್ಜೆಯ ಪ್ರಮಾಣೀಕರಣವನ್ನು (MIL-STD 810H) ಪಡೆದಿದೆ. ವಿವೋಬುಕ್ S14 ಫ್ಲಿಪ್ 360 ಡಿಗ್ರಿ ಹಿಂಜ್ ಹೊಂದಿದೆ. ಇದರೊಂದಿಗೆ ಮಿಲಿಟರಿ ದರ್ಜೆಯ ಮಾನದಂಡಗಳನ್ನು ಸಹ ಒಳಗೊಂಡಿದೆ. ಬನ್ನಿ, ಈ ಹೊಸ ಲ್ಯಾಪ್‌ಟಾಪ್‌ಗಳ ಬೆಲೆ, ಲಭ್ಯತೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಆಸುಸ್ ವಿವೋಬುಕ್ S14 ವೈಶಿಷ್ಟ್ಯಗಳು
ಆಸುಸ್ ವಿವೋಬುಕ್ S14 ಲ್ಯಾಪ್‌ಟಾಪ್ ಕೇವಲ 17.9 ಎಂಎಂ ದಪ್ಪ ಹೊಂದಿದೆ. ಕೇವಲ 1.4 ಕೆಜಿ ತೂಗು ಇದೆ. ಈ ಲ್ಯಾಪ್‌ಟಾಪ್ 14 ಇಂಚಿನ ಐಪಿಎಸ್ ಡಿಸ್ಪ್ಲೇ ಹೊಂದಿದೆ. ಇದು 300 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಮತ್ತು TUV ರೈನ್‌ಲ್ಯಾಂಡ್ ಪ್ರಮಾಣೀಕರಣವನ್ನು ಹೊಂದಿದೆ. ಈ ಲ್ಯಾಪ್ ಇಂಟೆಲ್ ಕೋರ್ i5-13420H ಅಥವಾ i7-13620H ಪ್ರೊಸೆಸರ್ ಹೊಂದಿದೆ. ಜೊತೆಗೆ ಇಂಟೆಲ್ UHD ಗ್ರಾಫಿಕ್ಸ್ ಲಭ್ಯವಿದೆ. ಈ ಲ್ಯಾಪ್‌ಟಾಪ್ ಮೈಕ್ರೋಸಾಫ್ಟ್ ಆಫೀಸ್ ಹೋಮ್ 2024 ಮತ್ತು M365 ಬೇಸಿಕ್ ನೊಂದಿಗೆ ವಿಂಡೋಸ್ 11 ಹೋಮ್ ಅನ್ನು ರನ್ ಮಾಡುತ್ತದೆ.ಇದು 16GB RAM ಮತ್ತು 512GB ಸ್ಟೋರೇಜ್ ಆಯ್ಕೆ ಒಳಗೊಂಡಿದೆ.
ವಿವೋಬುಕ್ S14 ಲ್ಯಾಪ್‌ಟಾಪ್ ಭೌತಿಕ ಗೌಪ್ಯತೆ ಶಟರ್‌ನೊಂದಿಗೆ FHD IR ಕ್ಯಾಮೆರಾ ಹೊಂದಿದೆ. ವಿಂಡೋಸ್ ಹಲೋವನ್ನು ಬೆಂಬಲಿಸುತ್ತದೆ. ಇದು 70Wh ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ವೇಗವಾಗಿ ಚಾರ್ಜ್ ಮಾಡಲು, 65W ಟೈಪ್ ಸಿ ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಈ ಲ್ಯಾಪ್‌ಟಾಪ್ ಡಾಲ್ಬಿ ಅಟ್ಮಾಸ್ ಆಡಿಯೊ ಬೆಂಬಲದೊಂದಿಗೆ ಸ್ಟೀರಿಯೊ ಸ್ಪೀಕರ್‌ಗಳನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು ವೈ-ಫೈ 6 ಮತ್ತು ಬ್ಲೂಟೂತ್ 5.3 ಒಳಗೊಂಡಿದೆ. ಇದು ಎರಡು ಯುಎಸ್‌ಬಿ 3.2 ಜೆನ್ 1 ಟೈಪ್ A ಪೋರ್ಟ್‌ಗಳು, ಎರಡು ಯುಎಸ್‌ಬಿ 3.2 ಜೆನ್ 1 ಟೈಪ್ ಸಿ ಪೋರ್ಟ್‌ಗಳು, ಒಂದು HDMI 1.4 ಮತ್ತು 3.5 ಎಂಎಂ ಕಾಂಬೊ ಆಡಿಯೊ ಜ್ಯಾಕ್ ಸಹ ಹೊಂದಿದೆ.
ಆಸುಸ್ ವಿವೋಬುಕ್ S14 ಫ್ಲಿಪ್ ವೈಶಿಷ್ಟ್ಯಗಳು
ವಿವೋಬುಕ್ S14 ಫ್ಲಿಪ್ ಲ್ಯಾಪ್‌ಟಾಪ್ ಕೇವಲ 18.9 ಮಿಮೀ ದಪ್ಪ ಹೊಂದಿದೆ. ಇದು ಸುಮಾರು 1.5 ಕೆಜಿ ತೂಕ ಇದೆ. ಈ ಲ್ಯಾಪ್‌ಟಾಪ್ 360 ಡಿಗ್ರಿ ಹಿಂಜ್ ಹೊಂದಿದೆ. ಇದು ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಟೆಂಟ್ ಮತ್ತು ಸ್ಟ್ಯಾಂಡ್ ಸೇರಿದಂತೆ ಬಹು ಬಳಕೆಯ ವಿಧಾನಗಳನ್ನು ಸಕ್ರಿಯಗೊಳಿಸುತ್ತದೆ. ಈ ಲ್ಯಾಪ್‌ಟಾಪ್ ಮಿಲಿಟರಿ ದರ್ಜೆಯ ಮಾನದಂಡಗಳನ್ನು (US MIL-STD 810H) ಸಹ ಒಳಗೊಂಡಿದೆ. ಇದು ಹರ್ಮನ್ ಕಾರ್ಡನ್ ಮತ್ತು ಡಾಲ್ಬಿ ಅಟ್ಮೋಸ್ ಆಡಿಯೊ ಬೆಂಬಲದೊಂದಿಗೆ ಸ್ಟೀರಿಯೊ ಸ್ಪೀಕರ್‌ಗಳನ್ನು ಹೊಂದಿದೆ.
ವಿವೋಬುಕ್ S14 ಫ್ಲಿಪ್ ಲ್ಯಾಪ್‌ಟಾಪ್ 14 ಇಂಚಿನ ಐಪಿಎಸ್ ಟಚ್‌ಸ್ಕ್ರೀನ್ ಡಿಸ್ಪ್ಲೇ ಹೊಂದಿದೆ. ಇದು ಫುಲ್ ಎಚ್‌ಡಿ ಪ್ಲಸ್ ರೆಸಲ್ಯೂಶನ್, 60Hz ರಿಫ್ರೆಶ್ ದರ ಮತ್ತು 16:10 ಆಕಾರ ಅನುಪಾತವನ್ನು ಹೊಂದಿದೆ. ಈ ಲ್ಯಾಪ್‌ಟಾಪ್ 300 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್ ಮತ್ತು ಸ್ಟೈಲಸ್ ಸಹ ಬೆಂಬಲಿಸುತ್ತದೆ. ಈ ಲ್ಯಾಪ್‌ಟಾಪ್ ಇಂಟೆಲ್ ಕೋರ್ i5-13420H ಪ್ರೊಸೆಸರ್ ಹೊಂದಿದೆ. ಹಾಗೆಯೇ ಇಂಟೆಲ್ UHD ಗ್ರಾಫಿಕ್ಸ್ ಸಹ ಹೊಂದಿದೆ.
ವಿವೋಬುಕ್ S14 ಫ್ಲಿಪ್ ಲ್ಯಾಪ್‌ಟಾಪ್ ಭೌತಿಕ ಗೌಪ್ಯತೆ ಶಟರ್ ಮತ್ತು ವಿಂಡೋಸ್ ಹಲೋ ಬೆಂಬಲದೊಂದಿಗೆ FHD IR ಕ್ಯಾಮೆರಾವನ್ನು ಹೊಂದಿದೆ. ಇದರಲ್ಲಿ 50Wh ಬ್ಯಾಟರಿಯನ್ನು ಅಳವಡಿಸಲಾಗಿದೆ. ಈ ಬ್ಯಾಟರಿಯನ್ನು ವೇಗವಾಗಿ ಚಾರ್ಜ್ ಮಾಡಲು, 90W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು ವೈ-ಫೈ 6 ಮತ್ತು ಬ್ಲೂಟೂತ್ 5.3 ಅನ್ನು ಹೊಂದಿದೆ. ಇದು ಒಂದು ಯುಎಸ್‌ಬಿ 2.0 ಟೈಪ್ A ಪೋರ್ಟ್, ಒಂದು ಯುಎಸ್‌ಬಿ 3.2 ಜೆನ್ 1 ಟೈಪ್ A ಪೋರ್ಟ್, ಒಂದು ಯುಎಸ್‌ಬಿ 3.2 ಜೆನ್ 1 ಟೈಪ್ ಸಿ ಪೋರ್ಟ್, 3.5 ಎಂಎಂ ಕಾಂಬೊ ಆಡಿಯೊ ಜ್ಯಾಕ್ ಮತ್ತು ಡಿಸಿ ಇನ್ ಪೋರ್ಟ್ ಹೊಂದಿದೆ.

ವಿವೋಬುಕ್ S14 ಮತ್ತು ವಿವೋಬುಕ್ S14 ಫ್ಲಿಪ್ ಬೆಲೆ
ಆಸುಸ್ ವಿವೋಬುಕ್ S14 ಬೆಲೆ
ಇಂಟೆಲ್ i5-13420H = 67,990 ರೂ.
ಇಂಟೆಲ್ i7-13620H = 79,990 ರೂ.
ಆಸುಸ್ ವಿವೋಬುಕ್ S14 ಫ್ಲಿಪ್ ಬೆಲೆ
ಇಂಟೆಲ್ i5-13420H = 69,990 ರೂ.
ಭಾರತದಲ್ಲಿ ಆಸುಸ್ ವಿವೋಬುಕ್ S14 ಲ್ಯಾಪ್‌ಟಾಪ್‌ನ ಆರಂಭಿಕ ಬೆಲೆ 67,990 ರೂ. ಆಗಿದೆ. ಇದು ಕೂಲ್ ಸಿಲ್ವರ್ ಮತ್ತು ಮ್ಯಾಟ್ ಗ್ರೇ ಬಣ್ಣಗಳಲ್ಲಿ ಲಭ್ಯವಿದೆ. ಹಾಗೆಯೇ ವಿವೋಬುಕ್ S14 ಫ್ಲಿಪ್ ಲ್ಯಾಪ್‌ಟಾಪ್ ಇಂಟೆಲ್ ಕೋರ್ i5-13420H ಪ್ರೊಸೆಸರ್ ನೊಂದಿಗೆ ಒಂದೇ ರೂಪಾಂತರದಲ್ಲಿ ಬರುತ್ತದೆ. ಇದರ ಬೆಲೆ 69,990 ರೂ. ಆಗಿದೆ. ಇದು ಕೂಲ್ ಸಿಲ್ವರ್ ಮತ್ತು ಕ್ವೈಟ್ ಬ್ಲೂ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಎರಡೂ ಲ್ಯಾಪ್‌ಟಾಪ್‌ಗಳು ಆಸುಸ್ (ASUS) ಇಂಡಿಯಾ ಇ-ಶಾಪ್ ಮತ್ತು ಫ್ಲಿಪ್‌ಕಾರ್ಟ್ ಮೂಲಕ ಮಾರಾಟವಾಗಲಿವೆ.

ರೆಡ್ಮಿ ಬುಕ್ ಪ್ರೊ 14 (2025) ಬೆಲೆ
ರೆಡ್ಮಿ ಬುಕ್ ಪ್ರೊ 14 (2025) ಲ್ಯಾಪ್‌ಟಾಪ್‌ನ ಬೆಲೆ 68,000 ರೂ. ಆಗಿದೆ. ಇದು ಇಂಟೆಲ್ ಅಲ್ಟ್ರಾ 5 225H ಸಿಪಿಯು ಮತ್ತು 16GB RAM ಹೊಂದಿರುವ ರೂಪಾಂತರದ ಬೆಲೆ ಆಗಿದೆ. ಅದೇ ಸಿಪಿಯು ಮತ್ತು 32GB RAM ಹೊಂದಿರುವ ರೂಪಾಂತರದ ಬೆಲೆ 72,000 ರೂ. ಆಗಿದೆ. ಹಾಗೆಯೇ ಇಂಟೆಲ್ ಕೋರ್ ಅಲ್ಟ್ರಾ 7 255H ಪ್ರೊಸೆಸರ್ ಹೊಂದಿರುವ ವೇರಿಯಂಟ್ ಬೆಲೆಯನ್ನು 83,000 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದನ್ನು ಕ್ಲಿಯರ್ ಸ್ಕೈ ಬ್ಲೂ ಬಣ್ಣದಲ್ಲಿ ಖರೀದಿಸಬಹುದು.
ರೆಡ್ಮಿ ಬುಕ್ ಪ್ರೊ 16 (2025) ಬೆಲೆ
ರೆಡ್ಮಿ ಬುಕ್ ಪ್ರೊ 16 (2025) ಲ್ಯಾಪ್‌ಟಾಪ್‌ನ ಬೆಲೆ 77,000 ರೂ. ಆಗಿದೆ. ಇದು ಇಂಟೆಲ್ ಅಲ್ಟ್ರಾ 5 225H ಪ್ರೊಸೆಸರ್ ಆಯ್ಕೆಯ ಬೆಲೆ ಆಗಿದೆ. ಇಂಟೆಲ್ ಅಲ್ಟ್ರಾ 7 255H ಸಿಪಿಯು ರೂಪಾಂತರವು 89,000 ರೂ. ಬೆಲೆಯಲ್ಲಿ ಬಿಡುಗಡೆಯಾಗಿದೆ. ಈ ಹೊಸ ಲ್ಯಾಪ್‌ಟಾಪ್ ಸ್ಟಾರ್ ಗ್ರೇ ಬಣ್ಣದ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.


Click it and Unblock the Notifications








