Home
ಕಂಪ್ಯೂಟರ್‌‌

ಎರಡು ಹೊಸ ಲ್ಯಾಪ್‌ಟಾಪ್ ಲಾಂಚ್ ಮಾಡಿದ ಆಸುಸ್..!

ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಲಾಪ್ ಟಾಪ್ ಬೇಡಿಕೆಯೂ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ, ಈಗಾಗಲೇ ಮಾರುಕಟ್ಟೆಯಲ್ಲಿ ಹಲವು ಮಾದರಿಯ ಲ್ಯಾಪ್ ಟಾಪ್ ಗಳನ್ನು ಬಿಡುಗಡೆ ಮಾಡುವ ಮೂಲಕ ಬಳಕೆದಾರರ ನಂಬಿಕೆಯನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ತೈವಾನ್ ಮೂಲಕ ಕಂಪನಿ ಅಸೂಸ್, ಮಾರುಕಟ್ಟೆಗೆ ಮತ್ತೆ ಹೊಸದಾಗಿ ಲ್ಯಾಪ್ ಟಾಪ್ ಗಳನ್ನು ಲಾಂಚ್ ಮಾಡಲು ಮುಂದಾಗಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ಹೊಸ ಮಾದರಿಯ ಸಂಚಲನವನ್ನು ಮೂಡಿಸಲು ಮುಂದಾಗಿದೆ.

ಎರಡು ಹೊಸ ಲ್ಯಾಪ್‌ಟಾಪ್ ಲಾಂಚ್ ಮಾಡಿದ ಆಸುಸ್..!

ಅಸುಸ್ ಹೊಸದಾಗಿ ವಿವೋ ಬುಕ್ ಸರಣಿಯ ಲ್ಯಾಪ್ ಟಾಪ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಮುಂದಾಗಿದ್ದು, ಇದರಲ್ಲಿ ಬಳಕೆದಾರರಿಗೆ ದೊಡ್ಡ ಮಾದರಿಯ ಆಯ್ಕೆಗಳನ್ನು ನೀಡಲಿದ್ದು, ಮಾರುಕಟ್ಟೆಯಲ್ಲಿ ಬೆಸ್ಟ್ ಎನ್ನಿಸಿಕೊಂಡಿರುವ ಆಯ್ಕೆಗಳನ್ನು ಈ ಹೊಸ ಸರಣಿಯ ಲ್ಯಾಪ್ ಟಾಪ್ ಗಳನ್ನು ಕಾಣಬಹುದಾಗಿದ್ದು, ಇದರಿಂದ ಬಳಕೆದಾರರಿಗೆ ಭವಿಷ್ಯದ ತಂತ್ರಜ್ಞಾನವನ್ನು ತಮ್ಮ ಬಜೆಟ್ ನಲ್ಲಿಯೇ ಆನಂದಿಸಬಹುದಾಗಿದೆ.

ಸದ್ಯ ಆಸುಸ್ ಮಾರುಕಟ್ಟೆಗೆ ವಿವೋ ಬುಕ್ S14 ವಿವೋ ಬುಕ್ S15 ಅನ್ನು ಲಾಂಚ್ ಮಾಡಿದ್ದು, ಇದು ಬಳಕೆದಾರರಿಗೆ ಹೆಚ್ಚಿನ ಆಯ್ಕೆಯ ಸ್ವಾತಂತ್ರ್ಯವನ್ನು ಮಾಡಿಕೊಡಲಿದೆ. ಆಸುಸ್ ವಿವೋ ಬುಕ್ S14 ಮಾರುಕಟ್ಟೆಯಲ್ಲಿ ರೂ. 54,990ಕ್ಕೆ ಮಾರಾಟವಾಗಲಿದ್ದು, ಇದೇ ಮಾದರಿಯಲ್ಲಿ ಆಸುಸ್ ವಿವೋ ಬುಕ್ S15 ರೂ. 69,990 ಕ್ಕೆ ದೊರೆಯಲಿದೆ ಎನ್ನಲಾಗಿದೆ.

ನವೆಂವರ್ 1 ರಿಂದ ಫ್ಲಿಪ್ ಕಾರ್ಟ್ ನಲ್ಲಿ ಈ ಲಾಪ್ ಟಾಪ್ ಗಳನ್ನು ಖರೀದಿ ಮಾಡಬಹುದಾಗಿದ್ದು, ಇದೇ ನವೆಂಬರ್ 15 ರಿಂದ ಆಸುಸ್ ರಿಟೇಲ್ ಮಳಿಗೆಗಳಲ್ಲಿಯೂ ಈ ಲ್ಯಾಪ್ ಟಾಪ್ ಗಳನ್ನು ಖರೀದಿ ಮಾಡಬಹುದಾಗಿದೆ. ಈ ಎರಡು ಲ್ಯಾಪ್ ಟಾಪ್ ಗಳು ಇಂಟೆಲ್ ಕೋರ್ 8 ಜನರೇಷನ್ ಪ್ರೋಸೆಸರ್ ಅನ್ನು ಹೊಂದಿದ್ದು, ನವೀಡಾ ಜಿ ಪೋರ್ಸ್ ಎಂಎಕ್ಸ್ 150 ಗ್ರಾಫಿಕ್ಸ್ ಕಾರ್ಡ್ ಅನ್ನು ಹೊಂದಿವೆ. ಅಲ್ಲದೇ ಬಳಕೆದಾರರಿಗೆ ವೇಗವಾಗಿ ಕಾರ್ಯಚರಣೆಯನ್ನು ಮಾಡಲು ಸಹಾಯ ಮಾಡಲಿವೆ.

ಈ ಎರಡು ಮಾದರಿಯ ಲ್ಯಾಪ್ ಟಾಪ್ ಗಳಲ್ಲಿ ವ್ಯತ್ಯಾಸ ಎಂದರೆ ಸ್ಕ್ರಿನ್ ಸೈಜ್, ಆಸುಸ್ ವಿವೋ ಬುಕ್ S14 ಲ್ಯಾಪ್ ಟಾಪ್ 14 ಇಂಚಿನ್ ಡಿಸ್ ಪ್ಲೇಯನ್ನು ಹೊಂದಿದ್ದರೆ, ಆಸುಸ್ ವಿವೋ ಬುಕ್ S15 ಲ್ಯಾಪ್ ಟಾಪ್ 15.6 ಇಂಚಿನ ಡಿಸ್ ಪ್ಲೇಯನ್ನು ಹೊ0ದಿದೆ ಎನ್ನಲಾಗಿದೆ.

Best Mobiles in India

English summary
Asus VivoBook S14 and S15 announced, priced at Rs 54,990 and Rs 69,990 respectively. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+