ಎರಡು ಸ್ಕ್ರೀನ್ ಹೊಂದಿರುವ 'ಜೆನ್ ಬುಕ್ ಪ್ರೊ15' ಲ್ಯಾಪ್‌ಟಾಪ್ ನೋಡಲು ರೆಡಿಯಾಗಿ!!

By Avinash
|

ಮಾಹಿತಿ ತಂತ್ರಜ್ಞಾನದ ದೈತ್ಯ ಆ್ಯಸಸ್ ಹೊಸ ಟಚ್ ಪ್ಯಾಡ್ ಬಿಡುಗಡೆ ಮಾಡಿದ್ದು, ಒಂದೇ ದರದಲ್ಲಿ ಎರಡೇರಡು ಸ್ಕ್ರೀನ್ ಗಳನ್ನು ಗ್ರಾಹಕರಿಗೆ ಒಂದೇ ಗ್ಯಾಡ್ಜೆಟ್ ನಲ್ಲಿ ನೀಡುತ್ತಿದೆ. ತೈಪೆಯ ಕಂಪ್ಯೂಟೆಕ್ಸ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ಕುರಿತು ಘೋಷಿಸಿರುವ ಕಂಪನಿ ಜುಲೈ ತಿಂಗಳಾಂತ್ಯಕ್ಕೆ ZenBook Pro ಗ್ರಾಹಕರ ಕೈ ಸೇರಲಿವೆ ಎಂದಿದೆ. ಒಂದೇ ಡಿವೈಸ್ ನಲ್ಲಿ ಎರಡು ಸ್ಕ್ರೀನ್ ಬಳಸಲು ಗ್ರಾಹಕ ಉತ್ಸುಕನಾಗಿದ್ದಾನೆ.

ಎರಡು ಸ್ಕ್ರೀನ್ ಹೊಂದಿರುವ 'ಜೆನ್ ಬುಕ್ ಪ್ರೊ15' ಲ್ಯಾಪ್‌ಟಾಪ್ ನೋಡಲು ರೆಡಿಯಾಗಿ!!


UX580 ಸ್ಕ್ರೀನ್ ಪ್ಯಾಡ್ ಹೊಂದಿರುವ ಜೆನ್ ಬುಕ್ ಪ್ರೊ 15 ಹಲವು ವಿಶೇಷತೆಗಳನ್ನು ಹೊಂದಿದೆ. 5.5 ಇಂಚ್ ಡಿಸ್ ಪ್ಲೇ ಸ್ಕ್ರೀನ್ ಪ್ಯಾಡ್ ಅನ್ನು ಟಚ್ ಪ್ಯಾಡ್ ನಲ್ಲಿ ಅಳವಡಿಸಲಾಗಿದ್ದು, ಬಳಕೆದಾರರಿಗೆ ಹೊಸ ರೀತಿಯ ಅನುಭವ ಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲದಂತಾಗಿದೆ. ಜುಲೈ ತಿಂಗಳಲ್ಲಿ ಗ್ರಾಹಕರ ಕೈ ಸೇರುವ ಸಾಧ್ಯತೆಯಿದ್ದು, 2,299 ಅಮೆರಿಕನ್ ಡಾಲರ್ ಮೌಲ್ಯ ಹೊಂದಿದ್ದು, ಏನೆಲ್ಲಾ ವಿಶೇಷತೆಗಳನ್ನು ಹೊಂದಿದೆ ಎಂಬುದನ್ನು ಮುಂದೆ ಓದಿ.

ಸ್ಮಾರ್ಟ್ ಪೋನ್ ತರ ಬಳಸಬಹುದಾದ ಸ್ಕ್ರೀನ್ ಪ್ಯಾಡ್

ಸ್ಮಾರ್ಟ್ ಪೋನ್ ತರ ಬಳಸಬಹುದಾದ ಸ್ಕ್ರೀನ್ ಪ್ಯಾಡ್

ZENBook Pro 15 ಸ್ಕ್ರೀನ್ ಪ್ಯಾಡ್ 5.5 ಇಂಚ್ FHD ಡಿಸ್ ಪ್ಲೇ ಹೊಂದಿದ್ದು, ವಿಂಡೋಸ್ 10 ಗೆಸ್ಚರ್ ಗಳಿಗಾಗಿರುವ ಮೈಕ್ರೋಸಾಫ್ಟ್ ಪ್ರೆಶಿಷಿನ್ ಡ್ರೈವರ್ ಗೆ ಬೆಂಬಲಿತವಾಗಿ ಕಾರ್ಯನಿರ್ವಹಿಸುತ್ತದೆ. ಸ್ಕ್ರೀನ್ ಪ್ಯಾಡ್ ನಲ್ಲಿ ಟೂಲ್ ಬಾರ್ ಇದ್ದು ಅಪ್ಲಿಕೇಷನ್ ಲಾಂಚರ್ ಹೊಂದಿದೆ. ಯೂಟ್ಯೂಬ್ ಮತ್ತು ಸ್ಪೂಟಿಪೈ, ವರ್ಡ್, ಎಕ್ಸೇಲ್ ಮತ್ತು ಪವರ್ ಪಾಯಿಂಟ್ ಗಳಿಗೆ ಬಿಲ್ಟ್ಇನ್ ಸಪೋರ್ಟ್ ನೀಡಲಾಗಿದೆ. ಅದಲ್ಲದೇ ಆ್ಯಸಸ್ ಸಿಂಕ್ ಆ್ಯಪ್ ನಿಂದ ಸ್ಮಾರ್ಟ್ ಪೋನ್ ಅನ್ನು ಮೀರರನಂತೆ ಸ್ಕ್ರೀನ್ ಪ್ಯಾಡ್ ನಲ್ಲಿ ಬಳಸಬಹುದು.

ಏನೆಲ್ಲಾ ಇರುತ್ತೆ...

ಏನೆಲ್ಲಾ ಇರುತ್ತೆ...

15 ಇಂಚಿನ ZENBook Pro 15 ಕೋರ್ i9-8950HK CPU, 4K ಡಿಸ್ ಪ್ಲೇ, NvidiaGeForce GTX1050 Ti GPU ಮತ್ತು 1TBವರೆಗಿನ PCle SSD ಹೊಂದಿದೆ. ವಿವಿಧ ಪೋರ್ಟ್ಗ್ ಗಳನ್ನು ಹೊಂದಿದ್ದು, 2 ಥಂಡರ್ ಬೋಲ್ಟ್ 3 ಪೋರ್ಟ್, 2 USB Type-A ಪೋರ್ಟ್, HDMI ಔಟ್ ಪುಟ್, ಗಿಗಾಬಿಟ್ ಕ್ಲಾಸ್ 802.11ac ವೈಫೈ ಡ್ರೈವ್, 5.0 ಬ್ಲೂಟೂತ್, ಆಡಿಯೋ ಜಾಕ್ ಮತ್ತು ಮೈಕ್ರೋ SD ಕಾರ್ಡ್ ರೀಡರ್ ಹೊಂದಿರುತ್ತೆ. ಇನ್ನು 14 ಇಂಚಿನ ZENBook Pro 15 ಕೋರ್ i7 ಪ್ರೊಸೆಸರ್, 14 ಇಂಚ್ 1080p ಡಿಸ್ ಪ್ಲೇ ಮತ್ತು ಮ್ಯಾಕ್ಸ್ ಕ್ಯೂ ವಿನ್ಯಾಸ ಹೊಂದಿರುವ NvidiaGeForce 1050 ಹೊಂದಿದೆ. ಒಂದು ಥಂಡರ್ ಬೋಲ್ಟ್ 3 ಪೋರ್ಟ್, 2 USB Type-A ಪೋರ್ಟ್, HDMI ಔಟ್ ಪುಟ್ ಹೊಂದಿರಲಿದ್ದು, ಬಳಕೆದಾರರಿಗೆ ಅದ್ಭುತ ಅನುಭವ ನೀಡುವುದರಲ್ಲಿ ಅನುಮಾನವಿಲ್ಲ.

ಉತ್ಕೃಷ್ಟ ಡಿಸ್ ಪ್ಲೇ

ಉತ್ಕೃಷ್ಟ ಡಿಸ್ ಪ್ಲೇ

ಆ್ಯಸಸ್ ತನ್ನ ZENBook Pro 15 ಟಚ್ ಪ್ಯಾಡ್ 15 ಇಂಚಿನ ಮಾದರಿಯಲ್ಲಿ ಬಳಸುವ ಡಿಸ್ ಪ್ಲೇಗಳು ನ್ಯಾನೋ ಎಡ್ಜ್ ಮಾದರಿಗಳಾಗಿದ್ದು, ಪ್ಯಾನ್ ಟಾನ್ ನಿಂದ ದೃಢೀಕರಿಸಲ್ಪಟ್ಟಿವೆ. 100% RGB ಪರಿಪೂರ್ಣತೆ ಮತ್ತು 178 ಡಿಗ್ರಿ Viewing Angle ಹೊಂದಿರಲಿದೆ. ZENBook Pro 15ನಲ್ಲಿ ಹರ್ಮನ್ ಕಾರ್ಡಾನ್ ಪ್ರಮಾಣೀಕೃತ ಶಬ್ಧ ಗುಣಮಟ್ಟವಿದ್ದು, ದೊಡ್ಡದಾದ ಮತ್ತು ಸ್ಪಷ್ಟವಾದ ಶಬ್ಧದ ಗ್ಯಾರಂಟಿಯನ್ನು ಕಂಪನಿ ನೀಡಿದೆ.

How to Send Message to Multiple Contacts on WhatsApp - GIZBOT KANNADA
ತೂಕರಹಿತ  ZenBook Pro

ತೂಕರಹಿತ ZenBook Pro

ಆ್ಯಸಸ್ ಬಿಡುಗಡೆ ಮಾಡಿರುವ ZenBook Pro ಟಚ್ ಪ್ಯಾಡ್ ತೆಳುವಾಗಿದ್ದು, ಮಿನಿಮಲ್ ಬೇಜೆಲ್ ವಿನ್ಯಾಸ ಹೊಂದಿದೆ. ಆ್ಯಸಸ್ ಸ್ಕ್ರೀನ್ ಗಾತ್ರವನ್ನು ಹೆಚ್ಚಿಸುತ್ತಿದೆ. ಆದರೆ, ಲ್ಯಾಪ್ ಟಾಪ್ ಗಾತ್ರವನ್ನು ಕಡಿಮೆ ಮಾಡುತ್ತಿದೆ. ಹೊಸ ಆ್ಯಸಸ್ ZenBook Proನ ತೂಕ ಕೇವಲ 1.83 ಕೆಜಿಯಿದ್ದು, ಗ್ರಾಹಕರನ್ನು ಆಕರ್ಷಿಸುತ್ತಿದೆ. ಏನೇ ಆಗಲಿ ಆ್ಯಸಸ್ ZenBook Pro ನಿಮ್ಮ ಕೈ ಸೇರಲು ಜುಲೈ ಅಂತ್ಯದವರೆಗೂ ಕಾಯಲೇಬೇಕು.

Best Mobiles in India

Read more about:
English summary
Asus ZenBook Pro gives you 2 screens for the price of 1, To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X