Subscribe to Gizbot

ಮ್ಯಾಜಿಕ್ ಮಾಡಲಿದೆ ಈ ಮ್ಯಾಗಿಕ್ ಗ್ಲೈಡ್ ಟ್ಯಾಬ್ಲೆಟ್

Posted By:
ಮ್ಯಾಜಿಕ್ ಮಾಡಲಿದೆ ಈ ಮ್ಯಾಗಿಕ್ ಗ್ಲೈಡ್ ಟ್ಯಾಬ್ಲೆಟ್

ಭಾರತೀಯ ಟೆಲಿಪೋನ್ ವಿಭಾಗದಲ್ಲಿ ಭಾರತಿ ಗ್ರೂಫ್ ಆಫ್ ಕಂಪನಿಯ ಕೊಡುಗೆ ಅಪಾರ. ಈ ಕಂಪನಿ ಮೊದಲು ವೈರ್ ಬಳಸಿ ಮಾಡಬಹುದಾದ ಸಂವಹನಕ್ಕೆ ಹೆಚ್ಚು ಹೊತ್ತು ನೀಡುತ್ತಿದ್ದರೂ ನಂತರ ವೈರ್ ಲೆಸ್ ಸಂವಹನದತ್ತ ಹೆಚ್ಚಿನ ಗಮನವನ್ನುನೀಡಲಾರಂಭಿಸಿತು. ಈಗ ಬೀಟಲ್ ಹೊಸ ಟ್ಯಾಬ್ಲೆಟ್ ತಂದಿದ್ದು ಅದನ್ನು ಮ್ಯಾಗಿಕ್ ಗ್ಲೈಡ್ ಎಂದು ಹೆಸರಿಸಲಾಗಿದೆ.

ಈ ಹೊಸ ಮ್ಯಾಗಿಕ್ ಗ್ಲೈಡ್ ಈ ಕೆಳಗಿನ ಗುಣ ಲಕ್ಷಣಗಳನ್ನು ಹೊಂದಿದೆ.

* 7 ಇಂಚಿನ ಸ್ಕ್ರೀನ್ ಮತ್ತು 800 x 480 ರೆಸ್ಯೂಲೇಶನ್

* ಆಂಡ್ರಾಯ್ಡ್ 2.2 ಫ್ರಯೊ ಪ್ಲಾಟ್ ಫಾರ್ಮ್

* ಟಚ್ ಸ್ಕ್ರೀನ್

* CMOS ರೀತಿಯ ಲೆನ್ಸ್ ಇರುವ 2 ಮೆಗಾ ಪಿಕ್ಸಲ್ ಡ್ಯುಯೆಲ್ ಕ್ಯಾಮೆರಾ

* 2200mAh ಬ್ಯಾಟರಿ

* ವೈಫೈ

* 3G

* ಬ್ಲೂಟೂಥ್

* 209 mm x 108 mm x 15.5 mm ಡೈಮೆಂಶನ್

* ಬ್ಯಾಟರಿ ಸೇರಿಸಿ 500 gm ತೂಕ

* ಇಂಟರ್ನಲ್ ಮೆಮೊರಿ 8 GB

ಈ ಟ್ಯಾಬ್ಲೆಟ್ ಒಂದೇ ಬಣ್ಣದಿಂದ ನೋಡಲು ಆಕರ್ಷಕವಾಗಿದ್ದು, ಇದರಲ್ಲಿ ಮಡಚಬಹುದಾದ ಸ್ಟ್ಯಾಂಡ್ ಕೂಡ ದೊರೆಯುತ್ತದೆ. ಈ ಟ್ಯಾಬ್ಲೆಟ್ ಬಳಸಿ ಸಿನಿಮಾ, ವೀಡಿಯೊ, ಮ್ಯೂಸಿಕ್ ಹೀಗೆ ಸಂಪೂರ್ಣ ಮನರಂಜನೆ ಪಡೆಯಬಹುದಾಗಿದೆ. ಇದರಲ್ಲಿರುವ ಮುಖ್ಯವಾದ ಇನ್ ಪುಟ್ ಅಂದರೆ ಟ್ರ್ಯಾಕ್ ಪ್ಯಾಡ್ ಮತ್ತು ಟಚ್ ಸ್ಕ್ರೀನ್ ಆಗಿದೆ. ಇದರಲ್ಲಿರುವ ಬ್ಲೂಟೂಥ್ ಮಾಹಿತಿಯನ್ನು ವೇಗವಾಗಿ ವರ್ಗಾಯಿಸುವ ಸಾಮರ್ಥ್ಯ ಹೊಂದಿದೆ.

ಗುಣಮಟ್ಟದಲ್ಲಿ ಬಳಕೆದಾರರ ಮೆಚ್ಚುಗೆಯನ್ನು ಗಳಿಸಿರುವ ಈ ಮ್ಯಾಗಿಕ್ ಗ್ಲೈಡ್ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಬೆಲೆ ರು. 12, 000 ಆಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot