Just In
Don't Miss
- Movies
ದರ್ಶನ್ ಹುಟ್ಟುಹಬ್ಬಕ್ಕೆ D56 ಅಪ್ಡೇಟ್ ಗ್ಯಾರೆಂಟಿ: ಟೈಟಲ್ ಕೂಡ ರಿವೀಲ್
- News
Budget 2023: ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆಯನ್ನು ಲೋಕಸಭೆಯಲ್ಲಿ ವೀಕ್ಷಿಸಿದ ಪುತ್ರಿ, ಸಂಬಂಧಿಕರು- ಪತಿ ಗೈರು
- Sports
ENG vs SA ODI: ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ: ಸರಣಿ ವೈಟ್ವಾಶ್ ಮಾಡುವ ಗುರಿ
- Automobiles
ಭಾರತದಿಂದ ಬ್ರಿಟನ್ಗೆ ರಾಯಲ್ ಎನ್ಫೀಲ್ಡ್ ಸೂಪರ್ ಮಿಟಿಯೊರ್ 650 ರಫ್ತು ಪ್ರಾರಂಭ
- Finance
LIC Jeevan Lakshya: LIC ಜೀವನ್ ಲಕ್ಷ್ಯ ಯೋಜನೆ: ಪಾಲಿಸಿ ಪ್ರಯೋಜನವೇನು? ಆರ್ಥಿಕ ರಕ್ಷಣೆ ಹೇಗೆ? ತಿಳಿಯಿರಿ
- Lifestyle
ಕೇಂದ್ರ ಬಜೆಟ್ನಲ್ಲಿ ವಿತ್ತ ಸಚಿವೆ ಧರಿಸಿರುವ ಸೀರೆಯ ವಿಶೇಷತೆ ಗೊತ್ತೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಭಾರತದಲ್ಲಿ ಖರೀದಿಸಬಹುದಾದ 17 ಇಂಚಿನ ಸ್ಕ್ರೀನ್ ಇರುವ ಲ್ಯಾಪ್ ಟಾಪ್ ಗಳು
ಎಲ್ಲಿದ್ದರೂ ಕೂಡ ಕೆಲಸ ಮಾಡಲು ಇಚ್ಛಿಸುವ ಮತ್ತು ಗೇಮ್ ಆಡಲು ಬಯಸುವವರಿಗೆ ಲ್ಯಾಪ್ ಟಾಪ್ ಖಂಡಿತ ಅತ್ಯುತ್ತಮವಾಗಿರುವ ಟೂಲ್ ಆಗಿದೆ. ಹಾಗಾಗಿ ಹೆಚ್ಚಿನವರು 14 ಇಂಚಿನ ಅಥವಾ 15 ಇಂಚಿನ ಲ್ಯಾಪ್ ಟಾಪ್ ಗಳನ್ನು ಇಚ್ಛಿಸುತ್ತಾರೆ. ಆದರೆ ಕೆಲವು ಬಳಕೆದಾರರು 17 ಇಂಚಿನ ದೊಡ್ಡ ಸ್ಕ್ರೀನ್ ಇರುವ ಲ್ಯಾಪ್ ಟಾಪ್ ಬೇಕು ಎಂದು ಇಚ್ಛಿಸುವುದೂ ಕೂಡ ಇದೆ.

ನಾವಿಲ್ಲಿ ಕೆಲವು 17 ಇಂಚಿನ ಸ್ಕ್ರೀನ್ ಇರುವ ಲ್ಯಾಪ್ ಟಾಪ್ ಗಳನ್ನು ಪಟ್ಟಿ ಮಾಡಿದ್ದು ಹೈ-ಎಂಡ್ ಸಿಪಿಯು ಮತ್ತು ಜಿಪಿಯು ಪ್ರದರ್ಶನವನ್ನು ಇವು ಒಳಗೊಂಡಿವೆ. ಈ ಲ್ಯಾಪ್ ಟಾಪ್ ಗಳು ಮಲ್ಟಿಮೀಡಿಯಾ ಮತ್ತು ಗೇಮ್ ಪ್ಲೇ ಮಾಡುವುದಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ 17 ಇಂಚಿನ ಲ್ಯಾಪ್ ಟಾಪ್ ಗಳನ್ನು ನಾವಿಲ್ಲಿ ನಿಮಗೆ ತಿಳಿಸಿಕೊಡುತ್ತಿದ್ದೇವೆ.

ಆಸೂಸ್ TUF FX705DD-AU055T ಲ್ಯಾಪ್ ಟಾಪ್
ಆಸೂಸ್ TUF FX705DD-AU055T ಲ್ಯಾಪ್ ಟಾಪ್ ದೊಡ್ಡದಾದ 17.3 ಇಂಚಿನ ಸ್ಕ್ರೀನ್ FHD+ ರೆಸಲ್ಯೂಷನ್ ನ್ನು ಹೊಂದಿದೆ. ಈ ಲ್ಯಾಪ್ ಟಾಪ್ Ryzen 5-3550H CPU ಮತ್ತು Nvidia GeForce GTX 1050 GPU ಇದ್ದು 3GB ವೀಡಿಯೋ ಮೆಮೊರಿ ಜೊತೆಗೆ 8GB RAM ಮತ್ತು 1TB HDDಯನ್ನು ಇದು ಹೊಂದಿದೆ. ಇದರ ಬೆಲೆ ಅಂದಾಜು 50,000 ರುಪಾಯಿಗಳು. ಹಾಗಾಗಿ ಇದು 17 ಇಂಚಿನ ಸ್ಕ್ರೀನ್ ಇರುವ ಕೈಗೆಟುಕುವ ಬೆಲೆಯ ಗೇಮಿಂಗ್ ಲ್ಯಾಪ್ ಟಾಪ್ ಗಳಲ್ಲಿ ಒಂದೆನಿಸಿದೆ.

ಏಸರ್ ನಿಟ್ರೋ 5 AN517-51-516W
ಏಸರ್ ನಿಟ್ರೋ 5 AN517-51-516W ಮಧ್ಯಮ ರೇಂಜಿನ ಗೇಮಿಂಗ್ ಲ್ಯಾಪ್ ಟಾಪ್ ಆಗಿದ್ದು 17.3-ಇಂಚಿನ IPS LCD ಸ್ಕ್ರೀನ್ ಹೊಂದಿದ್ದು 300nits ಬ್ರೈಟ್ ನೆಸ್ ನ್ನು ಆಫರ್ ಮಾಡುತ್ತದೆ. 9th ನೇ ಜನರೇಷನ್ನಿನ ಇಂಟೆಲ್ ಕೋರ್ i5-9300H ಮತ್ತು Nvidia GeForce 1650 GPU ಜೊತೆಗೆ 4GB ವೀಡಿಯೋ ಮೆಮೊರಿಯನ್ನು ಇದು ಹೊಂದಿದೆ. RAM ಮತ್ತು ಸ್ಟೋರೇಜ್ 8GB RAM ಮತ್ತು 256GB SSD ಜೊತೆಗೆ ಹೆಚ್ಚುವರಿಯಾಗಿ 1TB SSD ಯನ್ನು ಆಫರ್ ಮಾಡುತ್ತದೆ. ಇದರ ಬೆಲೆ 82,000 ರುಪಾಯಿಗಳು. ಗೇಮರ್ ಗಳಿಗೆ ಈ 17 ಇಂಚಿನ ಲ್ಯಾಪ್ ಟಾಪ್ ಅತ್ಯುತ್ತಮ ಲ್ಯಾಪ್ ಟಾಪ್ ಗಳಲ್ಲಿ ಒಂದಾಗಿದೆ.

MSI GF75 8RD-076IN ಲ್ಯಾಪ್ ಟಾಪ್
MSI GF75 8RD-076IN ಲ್ಯಾಪ್ ಟಾಪ್ 17.3-ಇಂಚಿನ ಸ್ಕ್ರೀನ್ ಜೊತೆಗೆ ಮಿನಿಮಮ್ ಬೇಝಲ್ ಡಿಸೈನ್ ನ್ನು ಹೊಂದಿದೆ.ಈ ಲ್ಯಾಪ್ ಟಾಪ್ 8th ಜನರೇಷನ್ನಿನ ಇಂಟೆಲ್ ಕೋರ್ i7-8750H ಜೊತೆಗೆ Nvidia GeForce GTX 1050 Ti 4G GPUಯನ್ನು ಹೊಂದಿದೆ.ಈ ಕಂಪ್ಯೂಟರ್ 8GB RAM ಮತ್ತು 128GB SSD ಸ್ಟೋರೇಜ್ ಜೊತೆಗೆ 1TB HDDಯನ್ನು ಹೊಂದಿದೆ.

ಡೆಲ್ ಅಲಿಯನ್ವೇರ್ 17 MLK (Z569971HIN9)
ಡೆಲ್ ಅಲಿಯನ್ವೇರ್ 17 MLK (Z569971HIN9) ಲ್ಯಾಪ್ ಟಾಪ್ ಅತ್ಯಂತ ಶಕ್ತಿಯುತವಾಗಿರು 17.3-ಇಂಚಿನ ಗೇಮಿಂಗ್ ಲ್ಯಾಪ್ ಟಾಪ್ ಆಗಿದೆ.ಇದು 16GB RAM ಮತ್ತು 1TB ಸ್ಟೊರೇಜ್ ವ್ಯವಸ್ಥೆ ಹೊಂದಿದೆ. ಈ ಲ್ಯಾಪ್ ಟಾಪ್ ಹೆಚ್ಚು ಬಿಸಿಯಾಗುವುದಿಲ್ಲ ಹಾಗಾಗಿ ದೀರ್ಘಾವಧಿ ಗೇಮ್ ಆಡುವವರಿಗೆ ಹೇಳಿ ಮಾಡಿಸಿದ ಡಿವೈಸ್ ಆಗಿದೆ.

ಆಸೂಸ್ ROG Strix G731GT-H7114T ಲ್ಯಾಪ್ ಟಾಪ್
ಆಸೂಸ್ ROG Strix G731GT-H7114T ಲ್ಯಾಪ್ ಟಾಪ್ 17.3-ಇಂಚಿನ ಪೆನಲ್ ಜೊತೆಗೆ ಬೆಝಲ್ ಲೆಸ್ ಡಿಸೈನ್ ನ್ನು ಹೊಂದಿದೆ. ಈ ಕಂಪ್ಯೂಪರ್ 9th ನೇ ಜನರೇಷನ್ನಿನ ಇಂಟೆಲ್ ಕೋರ್ i7-9750H CPU ಜೊತೆಗೆ 4GB Nvidia GeForce 1650 GPUಯನ್ನು ಹೊಂದಿದೆ.ಈ ಲ್ಯಾಪ್ ಟಾಪ್ 8GB RAM ಮತ್ತು 512GB SSD ಆಧಾರಿತ ಸ್ಟೋರೇಜ್ ವ್ಯವಸ್ಥೆ ಹೊಂದಿದ್ದು ಒಟ್ಟಾರೆ ಲ್ಯಾಪ್ ಟಾಪಿನ ಬೂಟ್ ಸ್ಪೀಡ್ ನ್ನು ಹೆಚ್ಚಿಸುತ್ತದೆ.

ಏಸರ್ ಪ್ರಿಡೇಟರ್ ಹೆಲಿಯೋಸ್ 300 PH317-53-57MW
ಏಸರ್ ಪ್ರಿಡೇಟರ್ ಹೆಲಿಯೋಸ್ 300 PH317-53-57MW ಕೂಡ 17.3-ಇಂಚಿನ ಸ್ಕ್ರೀನ್ ಜೊತೆಗೆ FHD ರೆಸಲ್ಯೂ,ನ್ ನ್ನು ಹೊಂದಿದೆ. ಇದು 9th ಜನರೇಷನ್ನಿ ಇಂಟೆಲ್ ಕೋರ್ i5 ಪ್ರೊಸೆಸರ್ ಜೊತೆಗೆ 16GB RAM ಮತ್ತು 1TB HDD ಜೊತೆಗೆ 256GB SSDಯನ್ನು ಒಳಗೊಂಡಿದೆ.

MSI GL73 8SE-039IN
MSI GL73 8SE-039IN ಲ್ಯಾಪ್ ಟಾಪ್ ಕೂಡ 17.3-ಇಂಚಿನ ಗೇಮಿಂಗ್ ಲ್ಯಾಪ್ ಟಾಪ್ ಆಗಿದ್ದು 8th ಜನರೇಷನ್ನಿನ ಇಂಟೆಲ್ ಕೋರ್ i7-8750H ಪ್ರೊಸೆಸರ್ ಜೊತೆಗೆ 6GB Nvidia RTX GPU ಮತ್ತು 16GB RAM ನ್ನು ಹೊಂದಿದೆ. ಈ ಲ್ಯಾಪ್ ಟಾಪ್ ಡುಯ್ ಸ್ಟೋರೇಜ್ ಸೆಲ್ಯೂಷನ್ ಒಳಗೊಂಡಿದೆ ಜೊತೆಗೆ 256GB SSD ಮತ್ತು 1TB HDD ಹೊಂದಿದೆ.

ಹೆಚ್ ಪಿ ಒಮೆನ್ 17-an110nr (3WE36UA)
ಹೆಚ್ ಪಿ ಒಮೆನ್ 17-an110nr (3WE36UA) ಲ್ಯಾಪ್ ಟಾಪ್ 17.3-ಇಂಚಿನ 1920 x 1080p ಡಿಸ್ಪ್ಲೇ ಹೊಂದಿದ್ದು 12GB RAM ಮತ್ತು 1TB ಸ್ಟೋರೇಜ್ ವ್ಯವಸ್ಥೆ ಹೊಂದಿದೆ. ಮಲ್ಟಿ ಮೀಡಿಯಾಗೆ ಮತ್ತು ಗೇಮಿಂಗ್ ಗೆ ಹೇಳಿ ಮಾಡಿಸಿದ ಡಿವೈಸ್ ಆಗಿದೆ. ಇಂಟೆಲ್ ಕೋರ್ i7 ಪ್ರೊಸೆಸರ್ ಜೊತೆಗೆ 4GB Nvidia GeForce ಗ್ರಾಫಿಕ್ಸ್ ಕಾರ್ಡ್ ನ್ನು ಹೊಂದಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470