ವಾರದ ಅತ್ಯುತ್ತಮ ಟ್ವೀಟ್, ನಿಮ್ಮ ಇಮೇಲ್ ಗೆ ಬರಲಿದೆ

By Varun
|

ವಾರದ ಅತ್ಯುತ್ತಮ ಟ್ವೀಟ್, ನಿಮ್ಮ ಇಮೇಲ್ ಗೆ ಬರಲಿದೆ
ಇಮೇಜ್ ಕೃಪೆ: ಮಶಾಬಲ್

ಜಗತ್ತಿನ ಅತ್ಯಂತ ಫೇಮಸ್ ಮೈಕ್ರೋ ಬ್ಲಾಗಿಂಗ್ ವೆಬ್ಸೈಟ್ಟ್ವಿಟರಿನಲ್ಲಿ ನಿಮ್ಮ ಖಾತೆ ಇದ್ದು, ಸೆಲೆಬ್ರಿಟಿಗಳ, ಗೆಳೆಯರ ಟ್ವೀಟ್ ಗಳನ್ನು ಕುತೂಹಲದಿಂದ ನಿರೀಕ್ಷಿಸುವವರಾಗಿದ್ದು ನಿಮ್ಮ ಕೆಲಸದ ಸಮಯದಲ್ಲಿ ಇಲ್ಲವೆ ಇಂಟರ್ನೆಟ್ ಇಲ್ಲದಿದ್ದಾಗ ಟ್ವಿಟರನ್ನು ಮಿಸ್ ಮಾಡಿಕೊಂಡಿದ್ದರೆ ಬೇಜಾರು ಮಾಡಿಕೊಳ್ಳಬೇಡಿ. ಆ ರೀತಿ ಟ್ವೀಟ್ ಗಳನ್ನು ವಾರಕ್ಕೊಮ್ಮೆ ನಿಮ್ಮ ಇಮೇಲ್ ಖಾತೆಗೆ ಕಳುಹಿಸುವಇಮೇಲ್ ಡೈಜೆಸ್ಟ್ಎಂಬ ಹೊಸ ಸೌಲಭ್ಯವನ್ನು ಹೊರತಂದಿದೆ ಟ್ವಿಟರ್.

ಮೇ 14ರಿಂದ ಈ ಸೌಲಭ್ಯವನ್ನು ಶುರು ಮಾಡಲಾಗಿದ್ದು, ನೀವು ಹಿಂಬಾಲಿಸುವ (following) ಖಾತೆಗಳ ಟ್ವೀಟ್ ಗಳು, ಟ್ವಿಟರ್ ನಲ್ಲಿ ಚರ್ಚೆಯಾಗುವ, ನಿಮಗೆ ಇಷ್ಟವಾಗುವ ವಿಷಯಗಳ ಬಗೆಗಿನ ಟ್ವೀಟ್ ಗಳನ್ನೂ ಇಮೇಲ್ ಮೂಲಕ ವಾರಕ್ಕೊಮ್ಮೆ ಕಳುಹಿಸಿಕೊಡಲಾಗುತ್ತದೆ.

ಇದನ್ನು Activate ಮಾಡಿಕೊಳ್ಳಲು ನೀವು ಈ ಕೆಳಗಿನ ಹಂತಗಳನ್ನು ಪಾಲಿಸಿ:

  • ಮೊದಲಿಗೆ ನಿಮ್ಮ ಟ್ವಿಟರ್ ಖಾತೆಗೆ ಲಾಗಿನ್ ಆಗಿ Settings ಕ್ಲಿಕ್ ಮಾಡಿ.

  • ನಂತರ ಪರದೆಯ ಎಡಭಾಗದಲ್ಲಿ ಗೋಚರಿಸುವ Notifcations ಮೇಲೆ ಕ್ಲಿಕ್ ಮಾಡಿ.

  • Notifications ಕ್ಲಿಕ್ ಮಾಡಿ 3ನೆ ಸಾಲಿನಲ್ಲಿ ಇರುವ updates ನಲ್ಲಿ ಕೊಟ್ಟಿರುವ A weekly digest of Stories & Tweets from my network ಅನ್ನು ಸೆಲೆಕ್ಟ್ ಮಾಡಿ.

  • ನಂತರ save changes ಕೊಟ್ಟರೆ, ಟ್ವಿಟರ್ ಖಾತೆಯಲ್ಲಿ ನೀವು ಕೊಟ್ಟಿರುವ ಇಮೇಲ್ ವಿಳಾಸಕ್ಕೆ ವಾರದ ಟ್ವೀಟ್ಸ್ ಕಳುಹಿಸಿಕೊಡುತ್ತದೆ ಟ್ವಿಟರ್.

ಇದೇ ರೀತಿ ಡಿಸ್ಕವರ್ ಟ್ಯಾಬ್ ಎಂಬ ಫೀಚರನ್ನೂ ಟ್ವಿಟರ್ ಕಳೆದ ವರ್ಷ ಬಿಡುಗಡೆ ಮಾಡಿತ್ತು. ಅದರ ಪ್ರಕಾರ ನಿಮ್ಮ ಪ್ರೊಫೈಲ್ ನಲ್ಲಿ ನೀವು follow ಮಾಡುವ ವಿಷಯಗಳನ್ನು ನೋಡಿಕೊಂಡು ಟ್ವಿಟರ್, ಅದೇ ವಿಷಯಗಳ ಬಗ್ಗೆ ಇರುವ ಸುದ್ದಿಯನ್ನು ನಿಮ್ಮ ಖಾತೆಯಲ್ಲೇ ನೋಡುವ ವ್ಯವಸ್ಥೆ ಮಾಡಿತ್ತು. (#Discover ನೋಡಿ)

ಈಗಲೇ ನಿಮ್ಮ ಖಾತೆಗೆ ಲಾಗಿನ್ ಆಗಿ ಆಕ್ಟಿವೇಟ್ ಮಾಡಿಕೊಂಡು ಟ್ವೀಟ್ ಗಳನ್ನು ನಿಮ್ಮ ಇಮೇಲ್ಗೆ ಬರುವಂತೆ ನೋಡಿಕೊಳ್ಳಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X