ಭಾರತದಲ್ಲಿ ಖರೀದಿಸಬಹುದಾದ ಪ್ರೀಮಿಯಂ ಗೇಮಿಂಗ್ ಲ್ಯಾಪ್ ಟಾಪ್ ಗಳು

By Gizbot Bureau
|

ಲಾಕ್‌ಡೌನ್ ಸಮಯದಲ್ಲಿ ನೀವು ಸಮಯವನ್ನು ಸಾಗಿಸುವುದಕ್ಕೆ ಏನು ಮಾಡುತ್ತಿದ್ದೀರಿ? ನೀವು ನಿಮ್ಮ ಗೇಮಿಂಗ್ ಸ್ಕಿಲ್ ಹೆಚ್ಚಿಸಿಕೊಳ್ಳುವುದಕ್ಕೆ ಪ್ಲಾನ್ ಮಾಡಿತ್ತಿದ್ದರೆ ನಿಮಗಾಗಿ ಪ್ರೀಮಿಯಂ ಗೇಮಿಂಗ್ ಲ್ಯಾಪ್ ಟಾಪ್ ಗಳ ಪಟ್ಟಿಯನ್ನು ಇಲ್ಲಿ ನೀಡುತ್ತಿದ್ದೇವೆ.ಈ ಕೆಳಗಿನ ಲ್ಯಾಪ್ ಟಾಪ್ ಗಳನ್ನು ಪ್ರೀಮಿಯಂ ಎಂದು ಕರೆಯುವುದಕ್ಕೆ ಪ್ರಮುಖ ಕಾರಣ ಇವುಗಳು ಸ್ವಲ್ಪ ದುಬಾರಿಯಾಗಿರುತ್ತದೆ.

ಗೇಮಿಂಗ್ ಲ್ಯಾಪ್ ಟಾಪ್

ನಮ್ಮ ಲಿಸ್ಟ್ ನಲ್ಲಿರುವ ಎಲ್ಲಾ ಗೇಮಿಂಗ್ ಲ್ಯಾಪ್ ಟಾಪ್ ಗಳು OEM ಗಳಾಗಿದ್ದು ಇದರಲ್ಲಿ ನೂತನ ಡಿಸ್ಪೇ ವ್ಯವಸ್ಥೆ,ಸಿಪಿಐ ಮತ್ತು ಜಿಪಿಯು ತಂತ್ರಜ್ಞಾನ ವಿದೆ.ಇವುಗಳು ಭವಿಷ್ಯದ ರೆಡಿ ಮಷೀನ್ ಗಳಾಗಿದ್ದು ಮುಂದಿನ ಕೆಲವು ವರ್ಷಗಳವರೆಗೆ ಯಾವುದೇ ಸಮಸ್ಯೆ ಇಲ್ಲದೆ ಸುಲಭವಾಗಿ ಗೇಮ್ ಗಳನ್ನು ಆಡುವುದಕ್ಕೆ ಇವು ನೆರವು ನೀಡುತ್ತದೆ.

ಕೆಲವು ಅತ್ಯದ್ಭುತವಾಗಿ ಪ್ರದರ್ಶನ ನೀಡುವ ಗೇಮಿಂಗ್ ಲ್ಯಾಪ್ ಟಾಪ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಹೊಸ ಹೊಸ ಡಿಸೈನ್ ಮತ್ತು ಹಾರ್ಡ್ ವೇರ್ ಗಳನ್ನು ಇದು ಹೊಂದಿದೆ.

ಆಸೂಸ್ ROG G703GI-E5148T 17.3-ಇಂಚಿನ FHD

ಆಸೂಸ್ ROG G703GI-E5148T 17.3-ಇಂಚಿನ FHD

ಆಸೂಸ್ ROG G703GI-E5148T 17.3-ಇಂಚಿನ FHD ಬೆಲೆ ಭಾರತದಲ್ಲಿ 499,990 ರುಪಾಯಿಗಳು. ಇದರಲ್ಲಿ ದೊಡ್ಡ 17.3-ಇಂಚಿನ ಡಿಸ್ಪ್ಲೇ ಜೊತೆಗೆ 144Hz ರಿಫ್ರೆಶ್ ರೇಟ್ ನ್ನು ಹೊಂದಿದೆ. ಈ ಲ್ಯಾಪ್ ಟಾಪ್ ನಲ್ಲಿ 8ನೇ ಜನರೇಷನ್ನಕನ ಇಂಟೆಲ್ ಕೋರ್ i9-8950HK CPU ಜೊತೆಗೆ 64GB RAM ಮತ್ತು 2TB SSD ಆಧಾರಿತ ಸ್ಟೊರೇಜ್ ವ್ಯವಸ್ಥೆಯನ್ನು ಇದು ಹೊಂದಿದೆ. ಗ್ರಾಫಿಕ್ಸ್ ವಿಚಾರವನ್ನು ಹೇಳುವುದಾದರೆ ಇದರಲ್ಲಿ Nvidia GTX 1080 ಜೊತೆಗೆ 8GB ವೀಡಿಯೋ ಮೆಮೊರಿ ಇದೆ.

ಅಸೂಸ್ ROG G703 17.3

ಅಸೂಸ್ ROG G703 17.3" FHD 144Hz ಗೇಮಿಂಗ್ ಲ್ಯಾಪ್ ಟಾಪ್ RTX

ಅಸೂಸ್ ROG G703 17.3' FHD 144Hz ಗೇಮಿಂಗ್‌ ಲ್ಯಾಪ್ ಟಾಪ್RTX ನ ಬೆಲೆ 399,990 ರುಪಾಯಿಗಳು ಮತ್ತು ಇದರಲ್ಲಿ 17.3-ಇಂಚಿನ ಡಿಸ್ಪ್ಲೇ ಜೊತೆಗೆ 144Hz ರಿಫ್ರೆಶ್ ರೇಟ್ ಹೊಂದಿದೆ.ಈ ಡಿವೈಸ್ 9ನೇ ಜನರೇಷನ್ನಿನ ಇಂಟೆಲ್ ಕೋರ್ i9-9980HK CPU ಜೊತೆಗೆ 32GB RAM ಮತ್ತು 1TB SSD ಹೊಂದಿದೆ.ಗ್ರಾಫಿಕ್ಸ್ ವಿಚಾರದಲ್ಲಿ ಹೇಳುವುದಾದರೆ ಇದರಲ್ಲಿ Nvidia RTX 2080 ಜೊತೆಗೆ 8GB ವೀಡಿಯೋ ಮೆಮೊರಿ ಹೊಂದಿದೆ.

MSI ಗೇಮಿಂಗ್ GT75 ಟೈಟಾನ್ 9SG-413IN 2019

MSI ಗೇಮಿಂಗ್ GT75 ಟೈಟಾನ್ 9SG-413IN 2019

MSI ಗೇಮಿಂಗ್ GT75 ಟೈಟಾನ್ 9SG-413IN 2019 ಬೆಲೆ 349,990 ರುಪಾಯಿಗಳು ಮತ್ತು ಇದರಲ್ಲಿ ಅತೀ ದೊಡ್ಡ 17-ಇಂಚಿನ ಸ್ಕ್ರೀನ್ ಹೊಂದಿದೆ. ಈ ಲ್ಯಾಪ್ ಟಾಪ್ 9ನೇ ಜನರೇಷನ್ನಿನ ಇಂಟೆಲ್ ಕೋರ್ i7-9750H CPU ಜೊತೆಗೆ 32GB RAM, 1TB SSD, ಮತ್ತು 1TB HDD ಮತ್ತು ಗ್ರಾಫಿಕ್ಸ್ ನ್ನು RTX 2080 ಜೊತೆಗೆ 8GB ವೀಡಿಯೋ ಮೆಮೊರಿಯಲ್ಲಿ ಹ್ಯಾಂಡಲ್ ಮಾಡಲಾಗುತ್ತದೆ.

ಅಸೂಸ್ ROG ಝೀಫೈರಸ್ GX701 17.3

ಅಸೂಸ್ ROG ಝೀಫೈರಸ್ GX701 17.3" FHD 144Hz ಗೇಮಿಂಗ್ ಲ್ಯಾಪ್ ಟಾಪ್

ಅಸೂಸ್ ROG ಝೀಫೈರಸ್ S GX701 17.3' FHD 144Hz ಗೇಮಿಂಗ್ ಲ್ಯಾಪ್ ಟಾಪ್ ನಲ್ಲಿ 17.3-ಇಂಚಿನ ಸ್ಕ್ರೀನ್ ಜೊತೆಗೆ 144Hz ರಿಫ್ರೆಶ್ ರೇಟ್ ಇದ್ದು ಭಾರತದಲ್ಲಿ ಇದರ ಬೆಲೆ 299,990 ರುಪಾಯಿಗಳು. ಇದು 9 ನೇ ಜನರೇಷನ್ನಿನ ಇಂಟೆಲ್ ಕೋರ್ i7-9750H CPU ಜೊತೆಗೆ 32GB RAM, 1TB SSD, ಮಥ್ತು RTX 2080 ಗ್ರಾಫಿಕ್ಸ್ ಕಾರ್ಡ್ ಆಧಾರಿತವಾಗಿದೆ.

ಹೆಚ್ ಪಿ ಒಮೆನ್ X 2S ಕೋರ್ i7 9ನೇ ಜನರೇಷನ್ನಿನ 15.6-ಇಂಚಿನ ಡುಯಲ್ ಸ್ಕ್ರೀನ್ ಗೇಮಿಂಗ್ ಲ್ಯಾಪ್ ಟಾಪ್

ಹೆಚ್ ಪಿ ಒಮೆನ್ X 2S ಕೋರ್ i7 9ನೇ ಜನರೇಷನ್ನಿನ 15.6-ಇಂಚಿನ ಡುಯಲ್ ಸ್ಕ್ರೀನ್ ಗೇಮಿಂಗ್ ಲ್ಯಾಪ್ ಟಾಪ್

ಹೆಚ್ ಪಿ ಒಮೆನ್ X 2S ಕೋರ್ i7 9ನೇ ಜನರೇಷನ್ನಿನ 15.6-ಇಂಚಿನ ಡುಯಲ್ ಸ್ಕ್ರೀನ್ ಗೇಮಿಂಗ್ ಲ್ಯಾಪ್ ಟಾಪ್ನಲ್ಲಿ ಡುಯಲ್ ಡಿಸ್ಪ್ಲೇ ಸಲ್ಯೂಷನ್ ಜೊತೆಗೆ ಪ್ರೈಮರಿ 15.6-ಸ್ಕ್ರೀನ್ ಇದ್ದು FHD ರೆಸಲ್ಯೂಷನ್ ಮತ್ತು ಸೆಕೆಂಡರಿ ಡಿಸ್ಪ್ಲೇ ವ್ಯವಸ್ಥೆ ಇದೆ. ಈ ಲ್ಯಾಪ್ ಟಾಪ್ ಬೆಲೆ 274,657 ರುಪಾಯಿಗಳು. ಇದರಲ್ಲಿ ಇಂಟೆಲದ ಕೋರ್ ಡೌನ್ 9750H CPU ಜೊತೆಗೆ RTX 2080 GPU ಆಧಾರಿತವಾಗಿದೆ.

ಹೆಚ್ ಪಿ ಒಮೆನ್ 9ನೇ ಜನರೇಷನ್ನಿನ ಇಂಟೆಲ್ ಕೋರ್ i9 ಪ್ರೊಸೆಸರ್

ಹೆಚ್ ಪಿ ಒಮೆನ್ 9ನೇ ಜನರೇಷನ್ನಿನ ಇಂಟೆಲ್ ಕೋರ್ i9 ಪ್ರೊಸೆಸರ್

ಹೆಚ್ ಪಿ ಒಮೆನ್ 9ನೇ ಜನರೇಷನ್ನಿನ ಇಂಟೆಲ್ ಕೋರ್ i9 ಪ್ರೊಸೆಸರ್ ನಲ್ಲಿ 15.6-ಇಂಚಿನ ಡಿಸ್ಪ್ಲೇ ಜೊತೆಗೆ ಪ್ರೀಮಿಯಂ ಫಿನಿಶ್ ಮತ್ತು ಈ ಲ್ಯಾಪ್ ಟಾಪ್ ಇಂಟೆಲ್ ಕೋರ್ i9-9880H CPU ಮತ್ತು RTX 2080 GPU ಆಧಾರಿತವಾಗಿದೆ. ಈ ಮಾಡೆಲ್ ಭಾರತದಲ್ಲಿ 241,320 ರುಪಾಯಿಗಳದ್ದಾಗಿದ್ದು ನಮ್ಮ ಲಿಸ್ಟ್ ನಲ್ಲಿರುವ ಕನಿಷ್ಟ ದುಬಾರಿ ಮಾಡೆಲ್ ಆಗಿದೆ.

Best Mobiles in India

English summary
This list of premium gaming laptops has devices from almost all the OEMs that offer the latest display, CPU, and GPU technology. These are also future-ready machines, which can easily run games for the next few years without any issue. Here are some of the best performing gaming laptops available in the market.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X