ಆನ್ಲೈನಿನಲ್ಲಿ ಟ್ರೈನ್ ಟಿಕೆಟ್ ಬುಕ್ ಮಾಡಲು ಟ್ರಿಕ್

Posted By: Varun
ಆನ್ಲೈನಿನಲ್ಲಿ ಟ್ರೈನ್ ಟಿಕೆಟ್ ಬುಕ್ ಮಾಡಲು ಟ್ರಿಕ್

ದೂರದ ಊರುಗಳಿಗೆ ಹೋಗಬೇಕಾದರೆ ನಾವು ಸಾಮಾನ್ಯವಾಗಿ ಬಸ್ ಪ್ರಯಾಣದ ಬದಲು ಟ್ರೈನಿನಲ್ಲಿ ಹೋಗಲು ಇಷ್ಟಪಡುತ್ತೇವೆ. ಇದಕ್ಕೆ ಕಾರಣ, ಬಸ್ಸಿಗೆ ಹೋಲಿಸಿದರೆ ಕಡಿಮೆ ಇರುವ ಪ್ರಯಾಣದ ವೆಚ್ಚ ಹಾಗು ಆಯಾಸವಿಲ್ಲದ ಪ್ರಯಾಣ.

ಹೀಗಾಗಿ ಮೊದಲೇ ಪ್ಲಾನ್ ಮಾಡಿ ಆನ್ಲೈನಿನಲ್ಲಿ ಟ್ರೈನ್ಟಿಕೆಟಿಗೆ ಬುಕ್ ಮಾಡುತ್ತೇವೆ. ಕೆಲವೊಮ್ಮೆ ಎಷ್ಟೇ ಬೇಗ ಬುಕ್ ಮಾಡಿದರೂ ಸೀಟುಗಳು ಕನ್ಫರ್ಮ್ ಆಗಿರುವುದಿಲ್ಲ. ವೈಟಿಂಗ್ ಲಿಸ್ಟಿನಲ್ಲಿ ಕಾಯಬೇಕಾಗುತ್ತದೆ. ಪ್ರಯಾಣದ ದಿನ ಹತ್ತಿರ ಬರುತ್ತಿದ್ದಂತೆ ಕನ್ಫರ್ಮ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗೆ ಕಾದೂ ಕನ್ಫರ್ಮ್ ಆಗದಿದ್ದರೆ ಇರುವ ಮತ್ತೊಂದು ದಾರಿ ಎಂದರೆ ಅದು "ತತ್ಕಾಲ್" ಸೌಲಭ್ಯ.

ಈ ತತ್ಕಾಲ್ ಸೌಲಭ್ಯದಲ್ಲೂ ಕೂಡ ಪ್ರತಿಯೊಂದು ಸೆಕೆಂಡ್ ಕೂಡಾ ಮುಖ್ಯವಾಗಿರುತ್ತದೆ. ಟ್ರೈನ್ ಹೊರಡುವ ಹಿಂದಿನ ದಿನ ಬೆಳಗ್ಗೆ 8 ಗಂಟೆಗೆ ಶುರುವಾಗುವ ಈ ತತ್ಕಾಲ್ ಬುಕಿಂಗ್ ಮಾಡಲು ನಿಮ್ಮ ಟೈಪಿಂಗ್ ಸ್ಪೀಡ್ ಜಾಸ್ತಿ ಇರಬೇಕಾಗುತ್ತದೆ. ಇಲ್ಲದಿದ್ದರೆ ನಿಮಗೆ ಇದರಲ್ಲೂ ಸೀಟ್ ಸಿಗುವುದು ಭಾರೀ ಕಷ್ಟ.ಹಾಗಾಗಿ ತತ್ಕಾಲ್ ನಲ್ಲಿ ಟಿಕೆಟ್ ಸಿಗುವಂತೆ ಮಾಡಲು ಇಲ್ಲೊಂದು ಸುಲಭವಾದ ಟ್ರಿಕ್ ಇದೆ. ಅದೇನೆಂದರೆ ಮ್ಯಾಜಿಕ್ ಆಟೋಫಿಲ್ ಎಂಬ ಆಪ್ಬಳಸುವುದು.

ನೀವು "ಮ್ಯಾಜಿಕ್ ಆಟೋಫಿಲ್ "ಬಳಸಲು ಕೆಳಗೆ ಕೊಟ್ಟಿರುವ ಸುಲಭವಾದ ಹಂತಗಳನ್ನು ಪಾಲಿಸಿ:

1) ನೀವು ಮ್ಯಾಜಿಕ್ ಆಟೋಫಿಲ್ ಉಪಯೋಗಿಸಿ, ತತ್ಕಾಲ್ ಸೇವೆ ಶುರುವಾಗುವುದಕ್ಕೆ 10 ನಿಮಿಷ ಇರುವಾಗ, ಈ ಆನ್ಲೈನ್ ಫಾರಂ ತುಂಬಿ ರೆಡಿ ಮಾಡಿಟ್ಟುಕೊಳ್ಳಿ (ಹೇಗೆ ನೀವು ಆನ್ಲೈನಿನಲ್ಲಿ ಫಾರಂ ತುಂಬುತ್ತೀರೋ ಹಾಗೆ).

2) ಈ ಮ್ಯಾಜಿಕ್ ಫೈಲ್ ಫಾರಂ ಅನ್ನು ತುಂಬಿದ ಮೇಲೆ, I’m Feeling Lucky ಅನ್ನು ಕ್ಲಿಕ್ ಮಾಡಿ.

3) ಕ್ಲಿಕ್ ಮಾಡಿದೊಡನೆ ಮ್ಯಾಜಿಕ್ ಆಟೋ ಫಿಲ್ ಬಟನ್ ಒಂದನ್ನು ಸೃಷ್ಟಿಸುತ್ತದೆ. ಅದನ್ನು bookmark ಮಾಡಿಟ್ಟುಕೊಳ್ಳಿ.

4) Bookmark ಮಾಡಿದ ನಂತರ ರೈಲ್ವೆಯ ವೆಬ್ಸೈಟ್ ತೆರೆದಿಟ್ಟುಕೊಳ್ಳಿ.

5) ತತ್ಕಾಲ್ಬುಕಿಂಗ್ ಬೆಳಗ್ಗೆ 8 ಗಂಟೆಗೆ ಚಾಲೂ ಆದೊಡನೆ, ಈ bookmarkಗೆ ಹೋಗಿ ಮ್ಯಾಜಿಕ್ ಆಟೋ ಫಿಲ್ ಬಟ್ಟನ್ ಒತ್ತಿದರೆ ಸಾಕು! ಆಟೋಮ್ಯಾಟಿಕ್ ಆಗಿ ಅದೇ ಆನ್ಲೈನ್ ಫಾರಂ ಅನ್ನು ತುಂಬಿಕೊಳ್ಳುತ್ತದೆ.

6) ನಂತರ ನೀವು ಹಣ ಪಾವತಿ ಮಾಡುವ ಪೇಜಿಗೆ ಹೋಗಬಹುದು.

ಈ ಮೇಲಿನ ಹಂತಗಳನ್ನು ಪಾಲಿಸಿ ಆರಾಮಾಗಿ ತತ್ಕಾಲ್ ಟಿಕೆಟ್ ಬುಕಿಂಗ್ ಮಾಡಿಕೊಳ್ಳಬಹುದು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot