ಗೂಗಲ್ ನಲ್ಲಿ ಯಾರು ನಿಮ್ಮನ್ನು ಹುಡುಕುತ್ತಾರೆ ?

By Varun
|
ಗೂಗಲ್ ನಲ್ಲಿ ಯಾರು ನಿಮ್ಮನ್ನು ಹುಡುಕುತ್ತಾರೆ ?

ನೀವು ಹೋದ ವಾರ ಕೆಲಸದ ಸಂದರ್ಶನಕ್ಕೆ ಹೋಗಿದ್ದಿರಾ ಅಥವಾ ಯಾರಾದರೂ ಹೊಸ ಹುಡುಗಿಯ ಪರಿಚಯ ಮಾಡಿಕೊಂಡಿರಾ? ಹಾಗಿದ್ದರೆ ನಿಮ್ಮ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಗೂಗಲ್ ಸರ್ಚ್ ನಲ್ಲಿ ನಿಮ್ಮ ಹೆಸರನ್ನು ಹುಡುಕೇ ಇರುತ್ತಾರೆ. ಈ ರೀತಿ ಯಾರ್ಯಾರು ನಿಮ್ಮ ಬಗ್ಗೆ ತಿಳಿದುಕೊಳ್ಳಲು ಗೂಗಲ್ ಸರ್ಚ್ ಮಾಡಿದ್ದಾರೆ ಎಂದು ತಿಳಿದುಕೊಳ್ಳುವ ಕುತೂಹಲವಿದ್ದರೆ ಮುಂದೆ ಓದಿ.

ಆನ್ಲೈನ್ ಜಗತ್ತಿನಲ್ಲಿ ನಿಮ್ಮ ಹೆಸರನ್ನು ಗೂಗಲ್ ಮಾಡಿ ಬಹುತೇಕ ಮಾಹಿತಿಯನ್ನು ನಿಮ್ಮ ಫೇಸ್ ಬುಕ್, ಟ್ವಿಟರ್, ಲಿಂಕ್ಡ್ ಇನ್ ನಂತಹ ವೆಬ್ಸೈಟ್ಗಳಲ್ಲಿ ನಿಮ್ಮ ಪ್ರೊಫೈಲ್ ಗಳ ಮೂಲಕ ನಿಮ್ಮ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ. ಹೀಗಾಗಿ ನಿಮ್ಮ ಬಗ್ಗೆ ಯಾರ್ಯಾರು ಆನ್ಲೈನ್ ನಲ್ಲಿ ತಿಳಿದುಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ನೋಡಲು ನೀವು brandyourself ವೆಬ್ಸೈಟ್ ತುಂಬಾ ಸಹಾಯ ಮಾಡುತ್ತದೆ. ಈ ವೆಬ್ಸೈಟ್ ವಿಶೇಷವೇನೆಂದರೆ, ನಿಮ್ಮನ್ನು ನೀವು ಹೇಗೆ ಆನ್ಲೈನ್ ನಲ್ಲಿ ಮಾರುಕಟ್ಟೆ ಮಾಡಿಕೊಳ್ಳಬಹುದು ಎಂದು ಟಿಪ್ಸ್ ಕೂಡಾ ಕೊಡುತ್ತದೆ.

ಈ ವೆಬ್ಸೈಟ್ ನ ಸಾಫ್ಟ್ ವೇರ್ ಟೂಲ್ ಗಳಿಂದ ನೀವು ಯಾವ ರೀತಿ ನಿಮ್ಮ ಪ್ರೊಫೈಲ್, ವೆಬ್ಸೈಟ್ ಹಾಗು ಬ್ಲಾಗ್ ಗಳನ್ನು ಉತ್ತಮಪಡಿಸಿ ಗೂಗಲ್ ಸರ್ಚ್ ನಲ್ಲಿ ಕಾಣಿಸಿಕೊಳ್ಳಬಹುದು ಎಂದೂ ತಿಳಿಸಿಕೊಡುತ್ತದೆ. ಕೆಲಸ ಹುಡುಕುವವರಿಗೆ, ಕಾಂಟ್ಯಾಕ್ಟ್ ಗಳನ್ನು ಹೆಚ್ಚಿಸಿಕೊಳ್ಳುವವರಿಗೆ, ಆನ್ಲೈನ್ ನಲ್ಲಿ ಬಿಸಿನೆಸ್ಸ್ ಮಾಡುವವರಿಗೆ ಅತ್ಯುಪಯುಕ್ತ ವೆಬ್ಸೈಟ್ ಇದಾಗಿದೆ.

ತಡ ಮಾಡದೆ ರೆಜಿಸ್ಟರ್ ಮಾಡಿ ನಿಮ್ಮನು ನೀವೇ ಬ್ರ್ಯಾಂಡ್ ಮಾಡಿಕೊಳ್ಳಿ. ಯಾರಿಗೆ ಗೊತ್ತು, ಬ್ರ್ಯಾಂಡ್ ಮಾಡಿಕೊಂಡು ನಾಳೆ ನೀವೇ ಅಣ್ಣಾ ಬಾಂಡ್ ಆಗಬಹುದು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X