ಬಜೆಟ್ ಟ್ಯಾಬ್ಲೆಟ್ ಖರೀದಿಸಲು ಗಮನಿಸಬೇಕಾದ ಅಂಶಗಳು

Posted By: Varun
ಬಜೆಟ್ ಟ್ಯಾಬ್ಲೆಟ್ ಖರೀದಿಸಲು ಗಮನಿಸಬೇಕಾದ ಅಂಶಗಳು

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ, ಬಹುತೇಕ ಎಲ್ಲಾ ಕಂಪನಿಗಳೂ ತಮ್ಮ ತಮ್ಮ ಬಜೆಟ್ ಟ್ಯಾಬ್ಲೆಟ್ ಗಳನ್ನು ಬಿಡುಗಡೆ ಮಾಡಿವೆ.15 ಸಾವಿರಕ್ಕೆ ಉತ್ತಮವಾದ ಟ್ಯಾಬ್ಲೆಟ್ ಗಳು ದೊರಕುತ್ತವೆ. ಹಾಗಾಗಿ ನೀವು ಕೊಳ್ಳುವ ಮುನ್ನ ಜ್ಞಾಪಕದಲ್ಲಿ ಇಟ್ಟುಕೊಳ್ಳಬೇಕಾದ ಅಂಶಗಳು ಇಲ್ಲಿವೆ.

1) ಬಹುತೇಕ ಟ್ಯಾಬ್ಲೆಟ್ ಗಳಿಗೆ ಆಂಡ್ರಾಯ್ಡ್ ತಂತ್ರಾಂಶವಿದ್ದು, ನೀವು ಕೊಳ್ಳುವ ಟ್ಯಾಬ್ಲೆಟ್ ನಲ್ಲಿ ಕನಿಷ್ಠ ಪಕ್ಷ ಆಂಡ್ರಾಯ್ಡ್ 2.3 ಒ.ಎಸ್ ಇರಬೇಕು.

2) ಬಹುತೇಕ 7 ಇಂಚ್ ನ ಡಿಸ್ಪ್ಲೇ ಇರುವ ಬಜೆಟ್ ಟ್ಯಾಬ್ಲೆಟ್ ಗಳಲ್ಲಿ ಎರಡು ರೀತಿಯ ಟಚ್ ಸ್ಕ್ರೀನ್ ಇದ್ದು (ರೆಸಿಸ್ಟಿವ್ & ಕೆಪಾಸಿಟಿವ್), ಆಂಡ್ರಾಯ್ಡ್ ತಂತ್ರಾಂಶವು ಕೆಪಾಸಿಟಿವ್ (ಬೆರಳಿನಿಂದ ಸುಲಭವಾಗಿ ಉಪಯೋಗಿಸಬಹುದು) ಡಿಸ್ಪ್ಲೇ ಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಲಿದೆ. 800x480 ಗಿಂತಾ ಕಡಿಮೆ ರೆಸಲ್ಯೂಶನ್ ಇರುವ ಡಿಸ್ಪ್ಲೇ ಕೊಳ್ಳಬೇಡಿ.

3) ಕನಿಷ್ಠ ಪಕ್ಷ ವೈ-ಫೈ ಹಾಗು ಬ್ಲೂಟೂತ್ ಇರಲೇಬೇಕು. 3G ಸೌಲಭ್ಯವಿದ್ದರೆ ಕರೆ ಕೂಡ ಮಾಡಬಹುದಾಗಿದ್ದು, ಯೂ.ಎಸ್.ಬಿ ಸ್ಲಾಟ್ ಇರುವ ಮಾಡೆಲ್ ಅನ್ನೇ ತೆಗೆದುಕೊಳ್ಳಿ.

4) ಆಂಡ್ರಾಯ್ಡ್ 2.3 ಒ.ಎಸ್ ಸರಿಯಾಗಿ ಕೆಲಸ ಮಾಡಲು ಕನಿಷ್ಠ ಪಕ್ಷ 800 MHz ಸಾಮರ್ಥ್ಯದ ಪ್ರಾಸೆಸರ್ ಬೇಕೇ ಬೇಕು.

5) 512 MB ರಾಮ್ ಇರುವ ಟ್ಯಾಬ್ಲೆಟ್ ಇದ್ದರೆ ಆಂಡ್ರಾಯ್ಡ್ 2.3 ಒ.ಎಸ್ ಆರಾಮಾಗಿ ಕೆಲಸಮಾಡುತ್ತದೆ.

6 ) ಡುಯಲ್ ಕ್ಯಾಮರಾ ಇದ್ದು , ಹದ ವೀಡಿಯೊ ಪ್ಲೇ ಮಾಡುವ ಸಾಮರ್ಥ್ಯ ಇರಬೇಕು.

7) ಬಹುತೇಕ ಟ್ಯಾಬ್ಲೆಟ್ ಗಳಲ್ಲಿ ಪ್ರೀ- ಲೋಡ್ ಆಗಿರುವ ಆಪ್ ಗಳು ಇರಲಿದ್ದು, ಬ್ರೌಸರ್, ಫ್ಲಾಶ್, ಆಫೀಸ್ ಸೂಟ್, ಮೀಡಿಯಾ ಪ್ಲೇಯರ್ ಹಾಗು ಆಂಡ್ರಾಯ್ಡ್ ಮಾರ್ಕೆಟ್ ಆಪ್ ಗಳನ್ನು ಹೊಂದಿರಬೇಕು.

8)ಕಡೆಯದಾಗಿ ಬ್ಯಾಟರಿಯಂತೂ ವೈ-ಫೈ ನೊಂದಿಗೆ ಕನಿಷ್ಠ 6 ಗಂಟೆ ಕೆಲಸ ಮಾಡುವಂತೆ ಇರಬೇಕು.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot