ಆಪಲ್‌ ಆಪ್‌ ಸ್ಟೋರ್‌ನಲ್ಲಿ ಐನ್ಸ್‌ಟೈನ್‌ನ ಮೆದುಳು ಖರೀದಿಸಿ

Posted By: Staff

ಆಪಲ್‌ ಐಪ್ಯಾಡ್‌ ಆಪನಲ್ಲಿ ಆಲ್ಬರ್ಟ್‌ ಐನ್ಸ್‌ಸ್ಟೈನ್‌ರ ಮೆದುಳಿನ ವಿವರ ಹೊಂದಿದೆ ಎಂಬುದು ಸಿನಿಮಾ ಕಥೆಯೇನಲ್ಲ, ನಿಜವಾಗಿಯೂ ಕೂಡ ಐಪ್ಯಾಡ್‌ನಲ್ಲಿನ ಆಪ್‌ ಸ್ಟೋರ್‌ ಮೂಲಕ ಸುಮಾರು 600 ರೂ, ಬೆಲೆಗೆ ಐನ್ಸ್‌ಸ್ಟೈನ್‌ರ ಮೆದುಳನ್ನು ಖರೀದಿಸ ಬಹುದಾಗಿದೆ.

ಇತ್ತೀಚೆಗೆ ಬಿಡುಗಡೆ ಮಾಡಲಾದ ಆಪ್‌ ಸ್ಟೋರ್‌ನಲ್ಲಿ ಐನ್ಸ್‌ಸ್ಟೈನ್‌ರ ಮೆದುಳಿನ ಹಲವು ಚಿತ್ರಣಗಳು ಲಭ್ಯವಿದ್ದು, ವಿಶೇಷವಾಗಿ ವಿಜ್ಞಾನಿಗಳಿಗೆ ಹಾಗು ವಿದ್ಯಾರ್ಥಿಗಳಿಗಾಗಿ ಅಭಿವೃಧಿ ಪಡಿಸ ಲಾಗಿದೆ. ವರದಿಗಳ ಪ್ರಕಾರ 1955 ರಲ್ಲಿ ಐನ್ಸ್‌ಸ್ಟೈನ್‌ರ ಸಾವಿನ ಬಳಿಕ ಚಿಕಾಗೋ ಮೂಲದ ವಸ್ತುಸಂಗ್ರಹಾಲಯ ತೆಗೆದಿದ್ದಂತಹ ಮೆದುಳಿನ ಚಿತ್ರಗಳ 350 ಸ್ಲೈಡ್ಸ್‌ಗಳನ್ನು ಹೊಂದಿದೆ.

ಈ ಆಪ್‌ನ ಮೂಲಕ ವಿಜ್ಞಾನಿಗಳು 1921 ರಲ್ಲಿ ಭೌತಶಾಸ್ತ್ರದಲ್ಲಿ ನೊಬೆಲ್‌ ಪ್ರಶಸ್ತಿ ಪಡೆದಂತಹ ಐನ್ಸ್‌ಸ್ಟೈನ್‌ರ ಮೆದುಳನ್ನು ಆಳವಾಗಿ ಅಧ್ಯಯನ ಮಾಡಲು ನೆರವಾಗುತ್ತದೆ. ಈ ಆಪ್‌ ಹೇಗೆ ವಿನ್ಯಾಸ ಗೊಳಿಸಲಾಗಿದೆ ಎಂದರೆ ಬಳಕೆದಾರರು ಮೈಕ್ರೋ ಸ್ಕೋಪ್‌ನ ಮೂಲಕ ಮೆದುಳನ್ನು ವೀಕ್ಷಿಸುತ್ತಿರುವ ಅನುಭವ ನೀಡುತ್ತದೆ.

ಐನ್ಸ್‌ಸ್ಟೈನ್‌ರ ಸಾವಿನ ಬಳಿಕ ಅವರ ಮೆದುಳಿನ ಕ್ಷಮತೆ ಕುರಿತಾಗಿ ಮುಂದಿನ ಪೀಳಿಗೆಯ ವಿಜ್ಞಾನಿಗಳಿಗೆ ಅಧ್ಯಯನಕ್ಕೆ ನೆರವಾಗಲು ಸಲುವಾಗಿ ಥಾಮಸ್‌ ಹಾರ್ವೆ ಎಂಬ ಪ್ಯಾಥಾಲಜಿಸ್ಟ್‌ ಓರ್ವರು ಐನ್ಸ್‌ಸ್ಟೈನ್‌ ಮೆದುಳನ್ನು ಹೊರತೆಗೆದಿದ್ದರು.

Read In English...

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot