ಗೂಗಲ್ ಆಂಡ್ರಾಯ್ಡ್ ಒನ್ ಡಿವೈಸ್‌ಗಳಲ್ಲಿ ಹೇಗೆ ಪ್ರಭಾವಕಾರಿ?

By Shwetha
|

ಆಂಡ್ರಾಯ್ಡ್ ಒನ್, ಈ ಪ್ರೊಗ್ರಾಮ್ ಅನ್ನು ಗೂಗಲ್‌ನ I/O 2014 ರ ಈವೆಂಟ್‌ನಲ್ಲಿ ಪ್ರಸ್ತುತಪಡಿಸಲಾಯಿತು ಇಲ್ಲಿ ಸ್ಮಾರ್ಟ್‌ಫೋನ್ ತಯಾರಕರು ಕಡಿಮೆ ಬಜೆಟ್‌ನ ಫೋನ್ ಮೂಲಕ ಮಾರುಕಟ್ಟೆಗೆ ಬಂದರೂ ಓಎಸ್ ನವೀಕರಣಗಳ ಬಗೆಗೆ ಅವರು ತಲೆಕೆಡಿಸಿಕೊಳ್ಳಬೇಕಾದ ಅವಶ್ಯಕತೆಯಿಲ್ಲ, ಏಕೆಂದರೆ ಈ ಓಎಸ್ ಜವಬ್ದಾರಿಯನ್ನು ಗೂಗಲ್ ತೆಗೆದುಕೊಳ್ಳುತ್ತದೆ.

ಕಾನ್ಫರೆನ್ಸ್‌ನಲ್ಲಿ ಮೈಕ್ರೋಮ್ಯಾಕ್ಸ್, ಕಾರ್ಬನ್ ಮತ್ತು ಸ್ಪೈಸ್ ಈ ಸಾಫ್ಟ್‌ವೇರ್ ದಿಗ್ಗಜನಿಂದ ಅನುಮತಿಯನ್ನು ಪಡೆದುಕೊಂಡಿದ್ದು, ಕೆಲವೊಂದು ಸ್ಥಳೀಯ ಉತ್ಪಾದಕರೂ ಈಗ ಈ ಅನುಮತಿಯನ್ನು ಪಡೆಯುವುದಕ್ಕಾಗಿ ಸಾಲಿನಲ್ಲಿ ನಿಂತಿದ್ದಾರೆ.

ಗೂಗಲ್ ಆಂಡ್ರಾಯ್ಡ್ ಒನ್ ಪರಿಣಾಮಕಾರಿಯೇ?

ಸೆಲ್ಕೋನ್ ಮೊಬೈಲ್ ಕೂಡ ಗೂಗಲ್‌ನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದ್ದು, ಇಂಟೆಕ್ಸ್ ಕೂಡ ತನ್ನ ಹ್ಯಾಂಡ್‌ಸೆಟ್‌ಗಳಿಗೆ ಆಂಡ್ರಾಯ್ಡ್ ಒನ್ ಅನ್ನು ಅಳವಡಿಸುವ ನಿಟ್ಟಿನಲ್ಲಿದೆ. ಆದರೆ ಈ ಆಂಡ್ರಾಯ್ಡ್ ಒನ್ ಆಧಾರಿತ ಫೋನ್ ಭಾರತದಲ್ಲಿ ಯಾವಾಗ ಲಾಂಚ್ ಆಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಆದರೆ ಗೂಗಲ್ I/O 2014 ಕಾನ್ಫರೆನ್ಸ್‌ನಲ್ಲಿ ಮೈಕ್ರೋಮ್ಯಾಕ್ಸ್ ಪ್ರೊಟೋಟೈಪ್ ಅನ್ನು ನಾವು ನೋಡಿದ್ದೇವೆ.

ತೈವಾನ್ ಕಂಪೆನಿಯಾದ ಎಚ್‌ಟಿಸಿ ಕೂಡ ಗೂಗಲ್‌ನೊಂದಿಗೆ ಕೈಜೋಡಿಸಲಿದ್ದು ತನ್ನ ಕೆಳಜಾರುತ್ತಿರುವ ಮಾರುಕಟ್ಟೆ ಮೌಲ್ಯವನ್ನು ಮೇಲಕ್ಕೇರಿಸುವ ಸನ್ನಾಹದಲ್ಲಿ ಈ ಪ್ರಯತ್ನಕ್ಕೆ ಕೈ ಹಾಕುತ್ತಿದೆ. ಗೂಗಲ್ ಆಂಡ್ರಾಯ್ಡ್ ಒನ್ ಡಿವೈಸ್‌ಗಳಿಗಾಗಿ ಯಾವ ಹಾರ್ಡ್‌ವೇರ್ ಅನ್ನು ಬಳಸುತ್ತಿದೆ ಎಂಬುದನ್ನು ಕುರಿತು ಮಾಹಿತಿ ದೊರಕಿಲ್ಲ, ಆದರೆ ಇದೊಂದು ಕಡಿಮೆ ಮೌಲ್ಯದ ಫೋನ್ ಆಗಿದ್ದು ಇದರ ದರ ಕೂಡ ಕಡಿಮೆಯಾಗಿರುತ್ತದೆ, ಶಕ್ತಿಯತವಾದ ಸಾಫ್ಟ್‌ವೇರ್ ಬೆಂಬಲದೊಂದಿಗೆ ಒಂದು ಗಂಭೀರವಾದ ಹಾರ್ಡ್‌ವೇರ್ ಅನ್ನು ನಿಮಗೆ ನಿರೀಕ್ಷಿಸಬಹುದಾಗಿದೆ.

Best Mobiles in India

Read more about:
English summary
This article tells that Google introduced Android one in its I/O 2014 conference.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X