ಸೆಲ್ಕಾನ್‌ನ ಸೆಲ್‌ಟ್ಯಾಬ್ (CT2) ಮಾರುಕಟ್ಟೆಗೆ ಬಂದಿದೆ
ಹೈದ್ರಾಬಾದ್ ಮೂಲದ ತಯಾರಿಕಾ ಸಂಸ್ಥೆಯಾದ ಸೆಲ್ಕಾನ್ ತನ್ನಯ ನೂತನ ಕಡಿಮೆ ಬೆಲೆಯ ಟ್ಯಾಬ್ಲೆಟ್ ಆದಂತಹ ಸೆಲ್‌ಟ್ಯಾಬ್ (CT2) ಬಿಡುಗಡೆ ಮಾಡಿದೆ. ಭಾರತೀಯ ವಿದ್ಯಾರ್ಥಿಗಳಿಗೆಂದೆ ವಿಶೇಷವಾಗಿ ಮಾಡಲಾಗಿರು ಈ ನೂತನ ಟ್ಯಾಬ್‌ನಲ್ಲಿ ವಾಯ್ಸ್ ಕರೆಗಾಗಿ ಸಿಮ್‌ಕಾರ್ಡ್ ಸ್ಲಾಟ್ ನೀಡಲಾಗಿದ್ದು ರೂ.7,499 ರ ದರದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಅಂದಹಾಗೆ ಇದೀಗ ತಾನೆ ಮಾರುಕಟ್ಟೆಗೆ ಕಾಲಿರಿಸಿರುವ ಸೆಲ್ಕಾನ್‌ನ ಸೆಲ್‌ಟ್ಯಾಬ್ CT2 ವಿಶೇಷತೆ ಹೀಗಿದೆ.
ದರ್ಶಕ: 7 ಇಂಚಿನ ಟಚ್-ಸ್ಕ್ರೀನ್ ದರ್ಶಕ ಹಾಗು 5 ಮಲ್ಡಿ ಪಾಯಿಂಟ್ 800 x 480 ಪಿಕ್ಸೆಲ್ ರೆಸೆಲ್ಯೂಷನ್.
ಪ್ರೊಸೆಸರ್: 1GHz ಪ್ರೊಸೆಸರ್.
ಆಪರೇಟಿಂಗ್ ಸಿಸ್ಟಂ: ಭಾರತದಲ್ಲಿನ ಎಲ್ಲಾ ಕಡಿಮೆ ದರದ ಟ್ಯಾಬ್‌ಗಳಂತೆಯೇ ಸೆಲ್‌ಟ್ಯಾಬ್ CT2 ಕೂಡ ಆಂಡ್ರಾಯ್ಡ್ ಐಸ್‌ಕ್ರೀಮ್ ಸ್ಯಾಂಡ್ವಿಚ್ OS ಹೊಂದಿದೆ.
ಮೆಮೊರಿ: ಸೆಲ್‌ಟ್ಯಾಬ್ CT2 ನಲ್ಲಿ 4GB ಆಮತರಿ ಮೆಮೊರಿ, 512MB RAM ಹಾಗೂ ಮೈಕ್ರೋ SD ಕಾರ್ಡ್ ಮೂಲಕ 32GB ವರೆಗೆ ಮೆಮೊರಿ ವಿಸ್ತರಿಸಬಹುದಾಗಿದೆ.
ಕ್ಯಾಮೆರಾ: ಕಡಿಮೆ ಬೆಲೆಯ ಟ್ಯಾಬ್ಲೆಟ್ ಆದ್ದರಿಂದ ಮುಂಬದಿಯ VGA ಕ್ಯಾಮೆರಾ ಹೊಂದಿದ್ದು ಹಿಂಬದಿಯ ಕ್ಯಾಮೆರಾ ಇಲ್ಲಾ.
ಕನೆಕ್ಟಿವಿಟಿ: ಬ್ಲೂಟೂತ್, Wi-Fi 802.11 b/g/n ಹಾಗೂ ಡಾಂಗಲ್ ಮೂಲಕ 3G ಹೊಂದಿದೆ.
ಬ್ಯಾಟರಿ: ಸೆಲ್‌ಟ್ಯಾಬ್ CT2 ನಲ್ಲಿ 3,000 mAh Li-ion ಬ್ಯಾಟರಿ ಹೊಂದಿದೆ.
ಬೆಲೆ ಹಾಗೂ ಲಭ್ಯತೆ
ಸೆಲ್ಕಾನ್‌ನ ಸೆಲ್‌ಟ್ಯಾಬ್ CT2 ಟ್ಯಾಬ್ಲೆಟ್ 7,499 ರೂ. ದರದಲ್ಲಿ ಅಕ್ಟೋಬರ್ ನಿಂದ ದೇಶದೆಲ್ಲೆಡೆಯ ಸೆಲ್ಕಾನ್‌ನ ಎಲ್ಲಾ ಮಳಿಗೆಗಳಲ್ಲಿ ಲಭ್ಯವಾಗಲಿದೆ.


Click it and Unblock the Notifications





