ಭದ್ರತೆಗಾಗಿ ಕ್ರೋಮ್‌ನಿಂದ ಹೊಸ ಅಜ್ಞಾತ ಐಕಾನ್

Written By:

ಕ್ರೋಮ್ ವೆಬ್ ಬ್ರೌಸರ್‌ನ ತನ್ನ ಇತ್ತೀಚಿನ ಆವೃತ್ತಿಯನ್ನು ಗೂಗಲ್ ಬಿಡುಗಡೆ ಮಾಡಿದೆ. ಇದು ಕ್ರೋಮ್ 36 ಆಗಿದ್ದು ಇದನ್ನು ಮ್ಯಾಕ್, ವಿಂಡೋಸ್, ಲೀನಕ್ಸ್ ಮತ್ತು ಆಂಡ್ರಾಯ್ಡ್‌ಗೆ ಗೂಗಲ್ ಹೊರತಂದಿದೆ. ಈ ಹೊಸ ನವೀಕರಣಗಳು ಬಗ್ ದೋಷಗಳು ಮತ್ತು ಮುಂದಿನ ಸುಧಾರಣೆಗಳೊಂದಿಗೆ ಬರಲಿದೆ.

ದೈನಂದಿನ ಭದ್ರತಾ ಪರಿಹಾರಗಳಿಗಾಗಿ, ಈ ಡೆಸ್ಕ್‌ಟಾಪ್ ಆವೃತ್ತಿ ಅಜ್ಞಾತ ಐಕಾನ್ ಅನ್ನು ಹೊಂದಿದೆ. ಈ ಐಕಾನ್ ಬ್ರೌಸರ್ ಹುಡುಕಾಟ ಇತಿಹಾಸ (ಬ್ರೌಸರ್ ಹಿಸ್ಟರಿ) ಸೇವ್ ಆಗದೇ ಇರುವ ಭೇಟಿ ನೀಡದ ವೆಬ್‌ಸೈಟ್‌ಗಳಿಲ್ಲದೆಯೇ ಬಳಕೆದಾರರನ್ನು ಇಂಟರ್ನೆಟ್ ಬ್ರೌಸ್ ಮಾಡಲು ಅನುಮತಿಸುತ್ತದೆ.

ಗೂಗಲ್ ಹೊಸ ಬಿಡುಗಡೆ ಅಜ್ಞಾತ ಐಕಾನ್

ಈ ಐಕಾನ್ ಖಾಸಗಿ ಕಣ್ಣಿನ ಅಂಶವಾಗಿ ಕೆಲಸ ಮಾಡುತ್ತದೆ, ಇದೀಗ ಗಾತ್ರದಲ್ಲಿ ದೊಡ್ಡದಾಗಿದ್ದು, ವಿನ್ಯಾಸದಲ್ಲಿ ಸರಳವಾಗಿದೆ. ಐಕಾನ್‌ನ ಬದಿಯಲ್ಲಿ ಗೋಚರಿಸುವ ಸಂದೇಶದ ಪ್ಯಾರಾಗ್ರಾಫ್ ಕೂಡ ಚಿಕ್ಕದಾಗಿರುತ್ತದೆ.

ಈ ಪ್ಲಾಟ್‌ಫಾರ್ಮ್ ಈಗ ಕ್ರೋಮ್‌ಕಾಸ್ಟ್‌ಗೂ ಬೆಂಬಲವನ್ನು ಒದಗಿಸುತ್ತದೆ ಗೂಗಲ್‌ನ ಮೀಡಿಯಾ ಸ್ಟ್ರೀಮಿಂಗ್ ಸಾಧನವಾಗಿರುವ ಇದು ಅಧಿಸೂಚನೆಗಳನ್ನು ಸುಧಾರಿಸಿದೆ ಮತ್ತು ಸಿಸ್ಟಮ್ ಕ್ರ್ಯಾಶ್ ಆದಾಗ ಬಬ್ಬಲ್ ಅನ್ನು ತೋರಿಸುತ್ತದೆ.

ಟ್ಯಾಬ್ ಪೇಜ್‌ಗೆ ಗೂಗಲ್ ಡೂಡಲ್ಸ್‌ನ ಹಿಂತಿರುಗುವಿಕೆಯಾಗಿ ಈ ಆಂಡ್ರಾಯ್ಡ್ ನವೀಕರಣ ವೈಶಿಷ್ಟ್ಯಪೂರ್ಣವಾಗಿದೆ. ಮುಂಚೆ ಈ ಪುಟ ಪ್ರಮಾಣಿತ ಗೂಗಲ್ ಲೋಗೋವನ್ನು ಮಾತ್ರ ತೋರಿಸುತ್ತಿತ್ತು. ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳಲ್ಲಿ ಪಠ್ಯವನ್ನು ಓದುವುದು ಈಗ ಸುಲಭವಾಗಿದ್ದು ಮೊಬೈಲ್ ವೀಕ್ಷಣೆಗೆ ಇದು ಇನ್ನಷ್ಟು ಸುಲಭ ವಿಧಾನವಾಗಿದೆ.

ಈ ನವೀಕೃತ ಕ್ರೋಮ್ ಅನ್ನು ಇಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ ಅದೇ ರೀತಿ ಆಂಡ್ರಾಯ್ಡ್ ಬಳಕೆದಾರರು ಗೂಗಲ್ ಪ್ಲೇ ಇಲ್ಲಿ ಪಡೆದುಕೊಳ್ಳಬಹುದಾಗಿದೆ.

Read more about:
English summary
This article tells that chrome update new incognito icon, security fixes
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot