Home
ಕಂಪ್ಯೂಟರ್‌‌

ಹುವೈ ಸ್ಮಾರ್ಟ್ ಫೋನ್ ನಿಂದ ಭಾರತದಲ್ಲಿ ಕ್ಲೌಡ್ ಸರ್ವೀಸ್

ಹುವೈ ಸ್ಮಾರ್ಟ್ ಫೋನ್ ನಿಂದ ಭಾರತದಲ್ಲಿ ಕ್ಲೌಡ್ ಸರ್ವೀಸ್

ಹುವೈ ಕಂಪನಿಯು ಭಾರತದಲ್ಲಿ ಪ್ರಸಿದ್ಧವಾದ ಕ್ಲೌಡ್ ಸರ್ವೀಸ್ ಅನ್ನು ಈ ಸೇವೆಯನ್ನು ಪಡೆದುಕೊಳ್ಳುವ ಸಾಮರ್ಥ್ಯದ ಟ್ಯಾಬ್ಲೆಟ್ ಮತ್ತು 2 ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳನ್ನು ನವಂಬರ್ 16 ರಂದು ಬಿಡುಗಡೆ ಮಾಡುವುದರ ಮುಖಾಂತರ ಭಾರತಕ್ಕೆ ತರುತ್ತಿದೆ.

ಇದು ಆನ್ ಲೈನ್ ಸ್ಟೋರ್ ಮತ್ತು ಇತರ ಅಂಗಡಿಗಳಲ್ಲಿ ಅಂದರೆ ಭಾರತದ್ಯಾಂತ ಸೌಲಭ್ಯವನ್ನು ಒದಗಿಸಲಿದೆ. ಮತ್ತು 3 ಸಾಧನಗಳು 3 ತಿಂಗಳಿನಿಂದ ತರಲು ಪ್ರಯತ್ನಿಸುತ್ತಿದ್ದು ಈಗ ಅದು ಸಾಧ್ಯವಾಗಿದೆ. ಈಗ 3GB ಡೌನ್ ಲೋಡ್ ಅನ್ನು ಏರ್ ಸೆಲ್ ನೊಂದಿಗೆ ಮಾಡಬಹುದಾಗಿದೆ.ಈ ಕ್ಲೌಡ್ + ಸೇವೆಯುಇತರ ಸ್ಮಾರ್ಟ್ ಫೋನ್ ಗಳ ಸೇವೆಗಿಂತ ಎಲ್ಲಾ ರೀತಿಯಲ್ಲಿ ಉತ್ತಮವಾದ ಸೇವೆಯನ್ನು ಒದಗಿಸಲಿದೆ ಎಂದು ಹೇಳಲಾಗುತ್ತಿದೆ.

ಈ ಕ್ಲೌಡ್ ಸವೆಯಲ್ಲಿ ಬಳಸಲಾಗಿರುವ 2 ಸ್ಮಾರ್ಟ್ ಫೋನ್ ಗಳೆಂದರೆ ಸೋನಿಕ್ ಮತ್ತು ಐಡೋಸ್ X3. ಅದರಲ್ಲಿ ಸೋನಿಕ್ 3.5 ಇಂಚಿನ ಮಲ್ಟಿ ಟಚ್ ಸೌಲಭ್ಯದ ಡಿಸ್ ಪ್ಲೇ ಜೊತೆಗೆ ಆನ್ ಬೋರ್ಡ್ ಸ್ಟೋರೇಜ್ 512 MB ಮತ್ತು ವಿಸ್ತರಿಸಬಹುದಾದ ಸ್ಟೋರೇಜ್ 20 GB ಹೊಂದಿದೆ. ಇದು ಆಂಡ್ರಾಯ್ಡ್ ಜಿಂಜರ್ ಬರ್ಡ್ ಆಪರೇಟಿಂಗ್ ಬಳಸಿ ಕಾರ್ಯನಿರ್ವಹಿಸುತ್ತಿದ್ದು ಅಲ್ಲದೆ ಕಂಪಾಸ್ ಸೆನ್ಸಾರ್,ಪ್ರಾಕ್ಷಿಮಿಟಿ ಸೆನ್ಸಾರ್, ಆಕ್ಸೀಲರೊಮೀಟರ್ ಮತ್ತು ಆಂಬೈಂಟ್ ಲೈಟ್ ಹೊಂದಿದೆ.

ಇದಷ್ಟೆ ಅಲ್ಲದೆ ಸೋನಿಕ್ 4GB ಕಾರ್ಡ್ ಮತ್ತು ಪ್ರೀ ಲೋಡೆಡ್ ಅಪ್ಲಿಕೇಶನ್ ಹೊಂದಿದೆ. ಈ ಅಪ್ಲಿಕೇಶನ್ ನಲ್ಲಿ ಬಾಲಿಹುಡ್ ಜಿ ಮತ್ತು ಅಸ್ತುತೆ ಆನ್ ಲೈನ್ ಟಿವಿ ಯನ್ನು ಸಹ ಒಳಗೊಂಡಿದೆ.ಈ ಸ್ಮಾರ್ಟ್ ಫೋನ್ ನಲ್ಲಿ 1400 mAhಬ್ಯಾಟರಿ ಬಳಸಲಾಗಿದ್ದು ಇದರ ಬೆಲೆ ರು. 9,500 ಆಗಿದೆ.

ಹುವೈ ಐಡೋಸ್ X3ಯನ್ನು 3D ಬಳಕೆದಾರರಿಗಾಗಿ ಇತ್ತೀಚಿಗೆ ತಯಾರಿಸಲಾದ ಸ್ಮಾರ್ಟ್ ಫೋನ್. ಇದರಲ್ಲಿ ಕೂಡ ಆಂಡ್ರಾಯ್ಡ್ v2.3 ಜಿಂಜರ್ ಬರ್ಡ್ ಆಪರೇಟಿಂಗ್ ಸಿಸ್ಟಮ್ ಹೊಂದಿದೆ. ಇದರ ಆನ್ ಬೋರ್ಡ್ ಸ್ಟೋರೇಜ್ 512 MB ಮತ್ತು ವಿಸ್ತರಿಸಬಹುದಾದ ಸ್ಟೋರೇಜ್ 20 GB ಹೊಂದಿದೆ. ಇದರಲ್ಲಿ 3.2 ಮೆಗಾ ಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾ,VGA ಫ್ರೆಂಟ್ ಕ್ಯಾಮೆರಾದ ಸೌಲಭ್ಯ ಕೂಡ ದೊರೆಯುವುದು.

ಇದರಲ್ಲಿ ವೈಫೈ 11 ಸಂಪರ್ಕ ಮತ್ತು 3.2-ಇಂಚಿನ HVGA ಸ್ಕ್ರೀನ್ ಸೌಲಭ್ಯವನ್ನು ಸಹ ಹೊಂದಿದೆ. ಇದರಲ್ಲಿ ಆನ್ ಬೋರ್ಡ್, ಗೂಗಲ್ ಟಾಕ್, ಜಿ-ಮೇಲ್, ಯೂ ಟ್ಯೂಬ್, ಗೂಗಲ್ ನಕ್ಷೆಯ ಸೌಲಭ್ಯ ಕೂಡ ಪಡೆಯಬಹುದಾಗಿದೆ. ಈ ಸ್ಮಾರ್ಟ್ ಫೋನ್ ಬೆಲೆ ರು. 10,500 ಆಗಿದೆ.

ಈ ಎರಡು ಹುವೈ ಸ್ಮಾರ್ಟ್ ಫೋನ್ ಗಳಲ್ಲಿ ಕ್ಲೌಡ್ ಸೇವೆ ಮೋಡದಂತೆ ವೇಗವಾಗಿ ಜನರ ಮೆಚ್ಚುಗೆಯನ್ನು ಗಳಿಸುವುದೆ ಎಂದು ಕಾದು ನೋಡಬೇಕಾಗಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+