ಕೊಬಿ ಹೊರತರಲಿದೆ ಆಂಡ್ರಾಯ್ಡ್ ಐಸಿಎಸ್ ಟ್ಯಾಬ್ಲೆಟ್

ಕೊಬಿ ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ವಿನೂತನ ಟ್ಯಾಬ್ಲೆಟುಗಳನ್ನು ಮುಂದಿನ ವರ್ಷದ ಆರಂಭದಲ್ಲಿ ಹೊರತರಲಿದೆಯಂತೆ. ವಿಶೇಷವೆಂದರೆ ಈ ಟ್ಯಾಬ್ಲೆಟುಗಳು ಆಂಡ್ರಾಯ್ಡ್ ಐಸ್ ಕ್ರೀಮ್ ಸ್ಯಾಂಡ್ ವಿಚ್ ಸಿಸ್ಟಮ್ ಹೊಂದಿರಲಿದೆಯಂತೆ. ಕೊಬಿ ಆಂಡ್ರಾಯ್ಡ್ ಐಸಿಎಸ್ ಟ್ಯಾಬ್ಲೆಟುಗಳು 7, 8, 9, 9.7 ಮತ್ತು 10 ಇಂಚಿನ ಗಾತ್ರದಲ್ಲಿ ಮಾರುಕಟ್ಟೆಗೆ ಆಗಮಿಸಲಿದೆ.
ಈ ಎಲ್ಲಾ ಟ್ಯಾಬ್ಲೆಟುಗಳು ಎಆರ್ಎಂ ಕೊರ್ಟೆಕ್ದ್ ಎ8 ಸಿಪಿಯು ಪ್ರೊಸೆಸರ್ ಹೊಂದಿರಲಿದ್ದು, 1 ಗಿಗಾ ಹರ್ಟ್ಸ್ ವೇಗದಲ್ಲಿ ಆಕ್ಸೆಸ್ ಮಾಡಬಹುದಾಗಿದೆ. ಈ ಎಲ್ಲಾ ಟ್ಯಾಬ್ಲೆಟುಗಳು ಸ್ಪೋರ್ಟಿ ಮಲ್ಟಿ ಟಚ್ ಸ್ಕ್ರೀನ್ ಹೊಂದಿರಲಿವೆ. ಜೊತೆಗೆ ಎಲ್ಲಾ ಟ್ಯಾಬ್ಲೆಟುಗಳು 1 ಜಿಬಿ RAM ಹೊಂದಿರಲಿವೆ. ದರ ಮಾಹಿತಿ ಇನ್ನೂ ಬಹಿರಂಗಗೊಂಡಿಲ್ಲ.
ಟೆಕ್ ಮಾಹಿತಿ
* ಆಂಡ್ರಾಯ್ಡ್ ವಿ4.0 ಐಸ್ ಕ್ರೀಮ್ ಸ್ಯಾಂಡ್ ವಿಚ್ ಅಪರೇಟಿಂಗ್ ಸಿಸ್ಟಮ್
* ಮಲ್ಟಿ ಟಚ್ ಸಾಮರ್ಥ್ಯದ ಡಿಸ್ ಪ್ಲೇ ಸ್ಕ್ರೀನ್
* ಒಂದು ಗಿಗಾಹರ್ಟ್ಸ್ ಎಆರ್ಎಂ ಕೊರ್ಟೆಕ್ಸ್ ಎ8 ಪ್ರೊಸೆಸರ್
* ಒಂದು ಜಿಬಿ RAM
* 32 ಜಿಬಿವರೆಗೆ ಮೆಮೊರಿ ಸಂಗ್ರಹ ಸಾಮರ್ಥ್ಯ ವಿಸ್ತರಿಸಬಹುದು.
* ಸಣ್ಣ ಮತ್ತು ಸ್ಟೈಲಿಷ್ ವಿನ್ಯಾಸ
* 802.11 b/g/n ವೇಗದ ವೈಫೈ
* ಹಲವು ಡಿಸ್ ಪ್ಲೇ ಗಾತ್ರದಲ್ಲಿ ಆಯ್ಕೆಮಾಡಿಕೊಳ್ಳಬಹುದು


Click it and Unblock the Notifications








