ಕಾಂಪ್ಯಾಕ್ ಕಂಪ್ಯೂಟರ್ ತಂದಿದೆ ಚಂದದ ಲ್ಯಾಪ್ ಟಾಪ್

ಎಂಟ್ರಿ ಲೆವೆಲ್ ಲ್ಯಾಪ್ ಟಾಪ್ ಖರೀದಿಸುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು Compaq Presario CQ57-319WM ಮಾರುಕಟ್ಟೆಗೆ ತರಲಾಗಿದೆ. ಕೈಗೆಟುಕುವ ದರದಲ್ಲಿ ಬಂದ ಈ ಸುಂದರ ಲ್ಯಾಪ್ ಟಾಪ್ ನಲ್ಲಿ ಸಾಕಷ್ಟು ಫೀಚರುಗಳಿವೆ. ಇದರ ವಿನ್ಯಾಸವೂ ಸೂಪರ್.
ನೂತನ ಲ್ಯಾಪ್ ಟಾಪ್ 15.6 ಇಂಚಿನ ಡಿಸ್ ಪ್ಲೇ ಹೊಂದಿದೆ. ಎಲ್ ಇಡಿ ಬ್ಯಾಕ್ ಲಿಟ್ ಮಾದರಿಯ ಇದರ ವಿನ್ಯಾಸ ಹೈಡೆಫಿನೆಷನ್ ಬ್ರೈಟ್ ನೆಸ್ ಹೊಂದಿದೆ. ಇದರ ಬೃಹತ್ ಪರದೆಯು ನಿಮಗೆ ಹೋಮ್ ಥಿಯೇಟರ್ ಅನುಭವ ನೀಡಲಿದೆ. ಅಂದರೆ ನೀವು ಇದರ ಬೃಹತ್ ಪರದೆಯಲ್ಲಿ ಸಿನಿಮಾ ನೋಡುವುದು ಹೆಚ್ಚು ಅನನ್ಯ ಅನುಭವವಾಗಲಿದೆ.
Compaq Presario CQ57-319WM ಲ್ಯಾಪ್ ಟಾಪ್ ಎಎಂಡಿ ಡ್ಯೂಯಲ್ ಕೋರ್ ಸಿ50 ಪ್ರೊಸೆಸರ್ ಹೊಂದಿದೆ. ಇದು ಒಂದು ಎಂಬಿ ಕಾಚ್ ಮೆಮೊರಿ ಮತ್ತು 2 ಜಿಬಿಯ ಡಿಡಿಆರ್3 RAM ಹೊಂದಿದೆ. ಈ ಲ್ಯಾಪ್ ಟಾಪ್ ನ ಒಟ್ಟು ಸಂಗ್ರಹ ಸಾಮರ್ಥ್ಯ 250ಜಿಬಿಯಾಗಿದೆ.
ಈ ಲ್ಯಾಪ್ ಟಾಪ್ ನಲ್ಲಿ ಸಾಕಷ್ಟು ಕನೆಕ್ಷನ್ ಪೋರ್ಟ್ಸ್ ಗಳಿವೆ. ಯುಎಸ್ ಬಿ 2.0 ಆವೃತ್ತಿಯ 3 ಯುಎಸ್ ಬಿ ಪೋರ್ಟ್, ಒಂದು ಎಥರ್ನೆಟ್ ಮತ್ತು ವಿಜಿಎ ಪೋರ್ಟ್ ನೀಡಲಾಗಿದೆ. ಹೀಗೆ ಹತ್ತು ಹಲವು ಫೀಚರುಗಳ ಕಾಂಪ್ಯಾಕ್ ಪ್ರಿಸರಿಯೊ ಲ್ಯಾಪ್ ಟಾಪ್ ದರ ಸುಮಾರು 15 ಸಾವಿರ ರು.ನಿಂದ 20 ಸಾವಿರ ರು.ವರೆಗಿದೆ.


Click it and Unblock the Notifications








