5,990 ರೂ.ಬೆಲೆಯಲ್ಲಿ ಕ್ರೋಮಾ ಟ್ಯಾಬ್ಲೆಟ್ ಬರಲಿದೆ
ಭಾರತೀಯ ಆಂಡ್ರಾಯ್ಡ್ ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ಇಂದು ಹಲವು ತಯಾರಿಕಾ ಸಂಸ್ಥೆಗಳು ಕಡಿಮೆ ಬೆಲೆಯಲ್ಲಿ ಅದರಲ್ಲಿಯೂ 10,000 ಸಾವಿರ ದರದಲ್ಲಿ ಟ್ಯಾಬ್ಲೆಟ್‌ಗಳನ್ನು ಪರಿಚಯಿಸುತ್ತಿರುವುದರಿಂದ ಪರಸ್ಪರ ಪ್ರಬಲ ಪೈಪೋಟಿಯನ್ನು ಎದುರಿಸುತ್ತಿವೆ. ಅಂದಹಾಗೆ ಈ ಸಾಲಿಗೆ ಇದೀಗ ಟಾಟಾ ಸಮೂಹ ಸಂಸ್ಥೆಯ ಕ್ರೋಮಾ ತನ್ನಯ ನೂತನ 7 ಇಂಚಿನ ಟ್ಯಾಬ್ಲೆಟ್ ಬಿಡುಗಡೆ ಮಾಡಿದೆ.
ಅಂದಹಾಗೆ ಮಾರುಕಟ್ಟೆಗೆ ಇದೀಗ ತಾನೆ ಕಾಲಿರಿಸಿರುವ ನೂತನ ಟ್ಯಾಬ್ಲೆಟ್‌ನಲ್ಲಿ ಏನೆಲ್ಲಾ ವಿಶೇಷತೆ ಇದೆ ಎಂದು ತಿಳಿದುಕೊಳ್ಳೋಣ.
ಗಾತ್ರ ಹಾಗೂ ಸುತ್ತಳತೆ: 194 x 120 x 10.8 mm ಸುತ್ತಳತೆ ಹಾಗೂ 295 ಗ್ರಾಂ ತೂಕವಿದೆ.
ದರ್ಶಕ: 7 ಇಂಚಿನ ಟಚ್‌ಸ್ಕ್ರೀನ್ ಹಾಗು 800 x 480 ಪಿಕ್ಸೆಲ್ ರೆಸೆಲ್ಯೂಷನ್ ಹೊಂದಿದೆ.
ಪ್ರೊಸೆಸರ್ ಹಾಗೂ ಸ್ಟೋರೇಜ್: 1GHz ARM ಕಾರ್ಟೆಕ್ಸ್ A8 ಪ್ರೊಸೆಸರ್, 4GB ಆಂತರಿಕ ಮೆಮೊರಿ, 512MB RAM ಹಾಗೂ ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್ ಮೂಲಕ 32GB ವರೆಗೆ ಮೆಮೊರಿ ವಿಸ್ತರಿಸ ಬಹುದಾಗಿದೆ.
ಆಪರೇಟಿಂಗ್ ಸಿಸ್ಟಂ: ಆಂಡ್ರಾಯ್ಡ್ 4.1 ಜೆಲ್ಲಿಬೀನ್ ಆಪರೇಟಿಂಗ್ ಸಿಸ್ಟಂ ಚಾಲಿತ ವಾಗಿದೆ.
ಕ್ಯಾಮೆರಾ: ವಿಡಿಯೋ ಕರೆಗಾಗಿ 2MP ನ ಮುಂಬದಿಯ ಕ್ಯಾಮೆರಾ ಹೊಂದಿದ್ದು ಹಿಂಬದಿಯ ಕ್ಯಾಮೆರಾ ಹಾಘೂ ಪಿಕ್ಸೆಲ್ ರೆಸೆಲ್ಯೂಷನ್ ಹೊಂದಿಲ್ಲಾ.
ಕನೆಕ್ಟಿವಿಟಿ: Wi-Fi 802.11 b/g/n, ಮೈಕ್ರೋ USB 2.0 ಹಾಗು 3G ಹೊಂದಿದೆ.
ಬ್ಯಾಟರಿ: 3,000 mAh Li-Po ಬ್ಯಾಟರಿ ಇದ್ದು 168 ಗಂಟೆಗಳ ಸ್ಟ್ಯಾಂಡ್ ಬೈ ನೀಡುತ್ತದೆ.
ಬೆಲೆ ಹಾಗೂ ಲಭ್ಯತೆ
5,990 ರೂ ದರದಲ್ಲಿ ಲಭ್ಯವಿದ್ದು ಎಲ್ಲಾ ಕ್ರೋಮಾ ರೀಟೇಲ್ ಸ್ಟೋರ್‌ನಲ್ಲಿ ಲಭ್ಯವಿದೆ.


Click it and Unblock the Notifications
