Subscribe to Gizbot

ಡೆಲ್ ಅಲೈನ್ ವೇರ್ ಎಂ11 ಎಕ್ಸ್ ಲ್ಯಾಪ್ ಟಾಪ್

Posted By: Staff

ಡೆಲ್ ಅಲೈನ್ ವೇರ್ ಎಂ11 ಎಕ್ಸ್ ಲ್ಯಾಪ್ ಟಾಪ್
ಮೊದಲ ನೋಟಕ್ಕೆ ನಿಮ್ಮನ್ನು ಸೆಳೆಯುವ ಕೆಲವೇ ಗೇಮಿಂಗ್ ಲ್ಯಾಪ್ ಟಾಪ್ ಗಳಲ್ಲಿ ಡೆಲ್ ಅಲೈನ್ ವೇರ್ ಎಂ11ಎಕ್ಸ್ ಗೆ ಸ್ಥಾನ ನೀಡಬಹುದು. ಹೊಸ ಲ್ಯಾಪ್ ಟಾಪ್ ನೋಡಲು ಆಕರ್ಷಕವಾಗಿದೆ ಮಾತ್ರವಲ್ಲ ಬೃಹತ್ ಗಾತ್ರವನ್ನೂ ಹೊಂದಿದೆ. ನೋಡಲು ಇದು ಬ್ರೀಫ್ ಕೇಸ್ ತರಹ ಕಾಣುತ್ತದೆ.

ಥೇಟ್ ಸೂಟ್ ಕೇಸ್ ನಂತಿರುವ ಇದರಲ್ಲಿ ಎರಡು ಬಾಕ್ಸ್ ಗಳಲ್ಲಿವೆ. ಒಂದು ಬಾಕ್ಸ್ ನಲ್ಲಿ ವೈರುಗಳು, ಸಿಸಿ ಇನ್ ಸ್ಟಾಲೆಷನ್, ಅಡಾಪ್ಟರ್ ಇತ್ಯಾದಿಗಳನ್ನು ತುಂಬಿಸಿಕೊಳ್ಳಬಹುದು. ಇದರಲ್ಲಿ ಯಾವುದೇ ಸಿಡಿಡ್ರೈವ್ ಸೌಲಭ್ಯವಿಲ್ಲ. ಆದರೆ ಈ ಲ್ಯಾಪ್ ಟಾಪ್ ಗೆ ಹೊರಗಿನಿಂದ ಅಳವಡಿಸಬಹುದಾದ ಎಕ್ಸಟರ್ನಲ್ ಡ್ರೈವನ್ನು ಕಂಪನಿ ನೀಡುತ್ತದೆ.

ಈ ಗೇಮಿಂಗ್ ಲ್ಯಾಪ್ ಟಾಪ್ ಕುರಿತು ಹಗುರವಾಗಿ ಮಾತನಾಡದಿರಿ. ಯಾಕೆಂದರೆ ಇದರ ತೂಕ ಭರ್ತಿ ಎರಡು ಕೆ.ಜಿ ಇದೆ. ಇದರ ಹಾರ್ಡ್ ಮತ್ತು ಕಾಂಪ್ಯಾಕ್ಟ್ ಬಾಡಿ ವಿನ್ಯಾಸ ಮಾತ್ರ ಸೂಪರ್. ಇದರ ದರ 64 ಸಾವಿರ ರುಪಾಯಿ.

Alienware M11x 11.6 ಇಂಚಿನ ಡಿಸ್ ಪ್ಲೇ ಹೊಂದಿದೆ. ಎಚ್ ಡಿ ವಿಡಿಯೋ ಕೂಡ ವೀಕ್ಷಣೆ ಮಾಡಲು ಅನುವಾಗುವಂತೆ ಈ ಪರದೆ 1366 X 768 ರೆಸಲ್ಯೂಷನ್ ಹೊಂದಿದೆ. ಇದರಲ್ಲಿರುವ ಇನ್ನೊಂದು ಪ್ರಮುಖ ಫೀಚರ್ ಎಂದರೆ ಕ್ಲಿಪಿಷ್ ಸ್ಪೀಕರ್. ಇದು ಅನನ್ಯ ಸೌಂಡ್ ಅನುಭವ ನೀಡುತ್ತದೆ.

ವಿಶೇಷತೆಗಳು ಸಂಕ್ಷಿಪ್ತವಾಗಿ
* ಹೆಸರು: ಅಲೈನ್ ವೇರ್ ಎಂ11 ಎಕ್ಸ್
* ತೂಕ: 2 ಕೇಜಿ.
* ಕ್ಲಿಪಿಷ್ ಸ್ಪೀಕರ್
* ಹೆಡ್ ಸೆಟ್ ಅಳವಡಿಸಬಹುದು.
* ಇದು ಗೇಮಿಂಗ್ ಲ್ಯಾಪ್ ಟಾಪ್
* ಸಿಡಿ ಡ್ರೈವ್ ಇಲ್ಲ(ಉದ್ದೇಶ: ಬಳಕೆದಾರ ಸಿಡಿ ಹಾಕಿ ಗೇಮ್ ಡೌನ್ ಲೋಡ್ ಮಾಡಬಾರದು. ಗೇಮ್ ನ ಡಿಜಿಟಲ್ ಕಾಪಿ ಪಡೆದುಕೊಳ್ಳಬೇಕು)
* ವೈಫೈ ಇಂಡಿಕೇಟರ್
* ಇಂಟೆಲ್ ಕೋರ್ ಐ7 1.50 ಪ್ರೊಸೆಸರ್
* ವಿಂಡೋಸ್ 7, 8 ಜಿಬಿ RAM
* ದರ: 64 ಸಾವಿರ ರುಪಾಯಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot