Subscribe to Gizbot

ಡೆಲ್ ನಿಂದ 13 ಗಂಟೆಗಳ ಬ್ಯಾಟರಿ ಬ್ಯಾಕಪ್ ಹೊಂದಿರುವ ಲ್ಯಾಪ್ ಟಾಪ್ ಲಾಂಚ್...!

Written By: Precilla Dias

ಲ್ಯಾಪ್ ಟಾಪ್ ಬ್ಯಾಟರಿ ಬಾಳಿಕೆ ಸಾಲುವುದಿಲ್ಲ ಎನ್ನುವರಿಗಾಗಿಯೇ ಡೆಲ್ ಹೊಸ ಮಾದರಿಯ ಕ್ರೋಮ್ ಬುಕ್ ಅನ್ನು ಲಾಂಚ್ ಮಾಡಿದ್ದು, ಅದರಲ್ಲಿಯೂ ಹೆಚ್ಚಾಗಿ ವಿದ್ಯಾರ್ಥಿಗಳು ಗಮನದಲ್ಲಿಟ್ಟುಕೊಂಡು ಹೆಚ್ಚುವತಿ ಬ್ಯಾಟರಿ ಲೈಫ್ ಅನ್ನು ನೀಡಲು ಮುಂದಾಗಿದೆ. ಕ್ರೋಮ್ ಬುಕ್ 5190 ಮಾಡಲ್ 2 ಇನ್ 1 ಆಗಿದ್ದು, 13 ಗಂಟೆಗಳ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದೆ.

ಡೆಲ್ ನಿಂದ 13 ಗಂಟೆಗಳ ಬ್ಯಾಟರಿ ಬ್ಯಾಕಪ್ ಹೊಂದಿರುವ ಲ್ಯಾಪ್ ಟಾಪ್ ಲಾಂಚ್...!

ಸದ್ಯ ಲಂಡನ್ ನಲ್ಲಿ ಬಿಡುಗಡೆಯಾಗಿರುವ ಡೆಲ್ ಕ್ರೋಮ್ ಬುಕ್ 5190 ಒಟ್ಟು ಎರಡು ಆವೃತ್ತಿಯಲ್ಲಿ ಕಾಣಿಸಿಕೊಂಡಿದೆ. ಇದು 11 ಇಂಚಿನದಾಗಿದ್ದು, ಬ್ಯಾಟ್ಲೆಟ್ ಮಾದರಿಯಲ್ಲಿಯೂ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದನ್ನು ವಿದ್ಯಾರ್ಥಿಗಳಿಗಾಗಿಯೇ ರೂಪಿಸಲಾಗಿದ್ದು, ಬಿದ್ದರೂ ಸುಲಭವಾಗಿ ಒಡೆಯದಂತಹ ವಸ್ತುವಿನಿಂದ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದೆ.

ಇದನ್ನು ಟ್ಯಾಬ್ಲೆಟ್ ಮತ್ತು ನೋಟ್ ಬುಕ್ ಮಾದರಿಯಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದ್ದು, ಇದಲ್ಲದೇ ಈ ಲ್ಯಾಪ್ ಟಾಪ್ ನಲ್ಲಿ ನೀಡಿರುವ ಕ್ಯಾಮೆರಾವೂ ಕೇವಲ ವಿಡಿಯೋ ಕಾಲಿಂಗ್ ಮಾತ್ರವಲ್ಲದೇ ಫೋಟೋಗಳನ್ನು ಉತ್ತಮವಾಗಿ ಕ್ಲಿಕ್ ಮಾಡುವ ಆಯ್ಕೆಯನ್ನು ಒಳಗೊಂಡಿದೆ ಎನ್ನಲಾಗಿದೆ. ಅಲ್ಲದೇ ಇದರಲ್ಲಿ ಹ್ಯಾಂಡ್ ರೈಟಿಂಗ್ ಮತ್ತು ಸ್ಕೆಚ್ ಗಳನ್ನು ಸುಲಭವಾಗಿ ಬರೆಯಬಹುದಾಗಿದೆ.

ಪಾನ್‌ಕಾರ್ಡ್ ಬಗ್ಗೆ ಈ 5 ವಿಷಯಗಳನ್ನು ನೀವು ತಿಳಿಯಲೇಬೇಕು!!

ವಿಶ್ವದ ಅತ್ಯಂತ ದುಬಾರಿ ಐಫೋನ್ ಬೆಲೆ ಎಷ್ಟು ಗೊತ್ತಾ?.ವಜ್ರದಲ್ಲಿಯೇ ತಯಾರಾಗಿದೆ!!

ಇದು ಪೆನ್ ಸಪೊರ್ಟ್ ಆಯ್ಕೆಯನ್ನು ಹೊಂದಿದ್ದು, ಅಲ್ಲದೇ ತಿರುಗಿದ ಫ್ರಂಟ್ ಫೇಸಿಂಗ್ ಕ್ಯಾಮೆರಾವನ್ನು ಹೊಂದಿದೆ. ಅಲ್ಲದೇ ವಿಡಿಯೋಗಳನ್ನು ರೆಕಾರ್ಡ್ ಮಾಡಲು ಇದು ಸಹಾಯಕಾರಿಯಾಗಿದೆ. ಅಲ್ಲದೇ ಇದರಲ್ಲಿ ಕ್ವಾಡ್ ಕೋರ್ ಇಂಟೆಲ್ ಪ್ರೋಸೆಸರ್ ಅನ್ನು ನೀಡಲಾಗಿದೆ.

ಡೆಲ್ ಬಿಡುಗಡೆ ಮಾಡಿರುವ ಕ್ರೊಮ್ ಬುಕ್ 5190 ಫೆಬ್ರವರಿಯಿಂದ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ. ಇದರ ಬೆಲೆ ಬಂದು ಸರಿ ಸುಮಾರು ರೂ.18,500ಗಳಾಗಲಿದೆ. ಅಲ್ಲದೇ ಈ ಸರಣಿಯಲ್ಲಿ ಇನ್ನು ಹಲವು ಕ್ರೋಮ್ ಬುಕ್ ಗಳು ಲಾಂಚ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

Read more about:
English summary
Dell Chromebook 5190 has been launched under the company’s Chromebook 5000 series. This is a laptop designed for students and comes in two variants. One is an 11-inch clamshell model and the other a 2-in-1 convertible model. The highlight of this laptop is its 13 hours of battery life and rugged nature.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot