Home
ಕಂಪ್ಯೂಟರ್‌‌

ಇನ್ಸಿಪಿರೇಷನ್ ಎನ್5050: ಚೇತನ್ ಭಗತ್ ಮುಂದಿನ ಕಾದಂಬರಿಯೇ?

By Super

ಇನ್ಸಿಪಿರೇಷನ್ ಎನ್5050: ಚೇತನ್ ಭಗತ್ ಮುಂದಿನ ಕಾದಂಬರಿಯೇ?
ಚೇತನ್ ಭಗತ್ ನೂತನ ಕಾದಂಬರಿ ರೆವಲ್ಯೂಷನ್ 2020 ಹೆಸರಿಗೂ ಇನ್ಸ್ ಪಿರೇಷನ್ ಎನ್5050 ಹೆಸರಿಗೂ ಕೊಂಚ ಸಾಮ್ಯತೆ ಕಾಣಬಹುದು. ಆದರೆ ಇದು ಚೇತನ್ ಭಗತ್ ಮುಂದಿನ ಕಾದಂಬರಿಯ ಹೆಸರಲ್ಲ. ಇದು ಡೆಲ್ ಕಂಪನಿ ಇತ್ತೀಚೆಗೆ ಪರಿಚಯಿಸಿದ ಲ್ಯಾಪ್ ಟಾಪ್ ಹೆಸರು.

Dell Inspiron n5050 ಲ್ಯಾಪ್ ಟಾಪ್ ಸಾಕಷ್ಟು ಫೀಚರು ಮತ್ತು ವಿಶೇಷತೆಗಳಿಂದ ಇಷ್ಟವಾಗುತ್ತದೆ. ಇದರ ದರ ಸುಮಾರು 32 ಸಾವಿರ ರುಪಾಯಿ ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ.

ಪ್ರಮುಖ ಫೀಚರುಗಳು

* ವಿಂಡೋಸ್ 7 ಹೋಮ್ ಬೇಸಿಕ್ ಎಸ್ ಪಿ1 64 ಬಿಟ್ ಅಪರೇಟಿಂಗ್ ಸಿಸ್ಟಮ್

* ಎರಡನೇ ತಲೆಮಾರಿನ ಇಂಟೆಲ್ ಕೋರ್ ಐ3-2350ಎಂ/ಐ5-2450ಎಂ ಪ್ರೊಸೆಸರ್

* 2ಜಿಬಿ, 3ಜಿಬಿ, 4ಜಿಬಿ ಡಿಐಎಂಎಂ ಸ್ಲಾಟ್, 1,333 ಮೆಗಾಹರ್ಟ್ಸ್ ವೇಗದ RAM

* ಇಂಟೆಲ್ ಎಚ್ಎಂ67 ಎಕ್ಸ್ ಪ್ರೆಸ್ ಚಿಪ್ ಸೆಟ್

* ಸ್ಕ್ರೀನ್ ಡಿಸ್ ಪ್ಲೇ ಗಾತ್ರ 15.6 ಇಂಚು. ಹೈಡೆಫಿನೆಷನ್ ಡಬ್ಲ್ಯುಎಲ್ಇಡಿ ಟ್ರೂಲೈಫ್ ಡಿಸ್ ಪ್ಲೇ

* ಸ್ಕ್ರೀನ್ ಡಿಸ್ ಪ್ಲೇ ರೆಸಲ್ಯೂಷನ್ 1366 x 768 ಪಿಕ್ಸೆಲ್

* ಇಂಟೆಲ್ ಎಚ್ ಡಿ ಗ್ರಾಫಿಕ್ಸ್ 3000 ವಿಡಿಯೋ ಕಾರ್ಡ್

* ಡೆಲ್ ಆಡಿಯೋ, ಎರಡು ಸ್ಪೀಕರ್

* 500ಜಿಬಿ ಹಾರ್ಡ್ ಡ್ರೈವ್ ಸಂಗ್ರಹ ಸಾಮರ್ಥ್ಯ

* 6 ಸೆಲ್ 2.2 ಲಿಯಾನ್ ಬ್ಯಾಟರಿ

* 0.3 ಮೆಗಾಫಿಕ್ಸೆಲ್ ವೆಬ್ ಕ್ಯಾಮ್

* ಇನ್ ಬುಲ್ಟ್ ಅನಲಾಗ್ ಮೈಕ್ರೋಫೋನ್

* 802.11 b/ g/n ವೈಫೈ ಕನೆಕ್ಟಿವಿಟಿ

* ಬ್ಲೂಟೂಥ್ ಕನೆಕ್ಟಿವಿಟಿ/ವಿಜಿಎ ಪೋರ್ಟ್ ಕನೆಕ್ಟಿವಿಟಿ

* ಯುಎಸ್ ಬಿ 2.0 ಕನೆಕ್ಟಿವಿಟಿ

* ಆರ್ ಜೆ-45 ಎಥರ್ನೆಟ್ ಜಾಕ್

* ಮೈಕ್ರೋಫೋನ್ ಜಾಕ್ ಕನೆಕ್ಟರ್

* ಕೆನ್ಸಿಂಗ್ಟನ್ ಲಾಕ್ ಸ್ಲಾಟ್

* 3-ಇನ್-1 ಮೆಮೊರಿ ಕಾರ್ಡ್ ರೀಡರ್

* ತೂಕ: 2.37 ಕೆಜಿ

* ಟ್ರೇ-ಲೋಡ್ ಡಿವಿಡಿ ಆಪ್ಟಿಕಲ್ ಡ್ರೈವ್

ಆಕರ್ಷಕ ವಿನ್ಯಾಸದಿಂದ ಬಂದಿರುವ Dell Inspiron N5050 ಲ್ಯಾಪ್ ಟಾಪ್ ಸಾಕಷ್ಟು ಫೀಚರುಗಳನ್ನು ಕೂಡ ಹೊಂದಿದೆ. ಇಂಟೆಲ್ ಎರಡನೇ ತಲೆಮಾರಿನ ಪ್ರೊಸೆಸರ್ ಇರುವುದು ಕಾರ್ಯಕ್ಷಮತೆ ಹೆಚ್ಚಿಸಿದೆ. 6 ಸೆಲ್ ಬ್ಯಾಟರಿಯಿಂದ ಬ್ಯಾಟರಿ ಬಾಳಿಕೆ ಕೂಡ ಇಷ್ಟವಾಗುತ್ತದೆ. ಇದರ ತೂಕ 2.37 ಕೆ.ಜಿ. ಇದ್ದು, ಸಾಗಾಟವೂ ಸುಲಭ.

15.6 ಇಂಚಿನ ಬೃಹತ್ ಡಿಸ್ ಪ್ಲೇ ತೃಪ್ತಿದಾಯಕ. ಇದರಲ್ಲಿ ಆನ್ ಲೈನ್ ವಿಡಿಯೋ, ಗೇಮಿಂಗ್ ಗೆ ಡಿಸ್ ಪ್ಲೇ ಪೂರಕ. 500 ಜಿಬಿ ಹಾರ್ಡ್ ಡ್ರೈವ್ ಸಾಮರ್ಥ್ಯವಿದ್ದು ಸುಮಾರು 75 ಗಂಟೆಯಷ್ಟು ಸುದೀರ್ಘ ವಿಡಿಯೋ ಸಂಗ್ರಹಿಸಬಹುದಾಗಿದೆ. ಸದ್ಯ ಜಾಗತಿಕ ಮಾರುಕಟ್ಟೆಯಲ್ಲಿ ಲಭ್ಯವಿರುವ ಈ ಲ್ಯಾಪ್ ಟಾಪ್ ದರ ದೇಶದಲ್ಲಿ ಸುಮಾರು 32 ಸಾವಿರ ರು. ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+