ಡೆಲ್ ಲ್ಯಾಟಿಟ್ಯುಡ್ ಸ್ಪೆಷಾಲಿಟಿ ಏನು ಗೊತ್ತಾ?

|
ಡೆಲ್ ಲ್ಯಾಟಿಟ್ಯುಡ್ ಸ್ಪೆಷಾಲಿಟಿ ಏನು ಗೊತ್ತಾ?

ಡೆಲ್ ಲ್ಯಾಟಿಟ್ಯುಡ್ E6220 ಬಗ್ಗೆ ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ಚಿಕ್ಕದಾದ ಮತ್ತು ಬಳಕೆ ಮಾಡಲು ಸುಲಭವಾಗಿರುವಂತಹ ಲ್ಯಾಪ್ ಟಾಪ್. ಇದನ್ನು ಮೊದಲ ಬಾರಿಗೆ ನೋಡಿದಾಗ ಅಷ್ಟಾಗಿ ಆಕರ್ಷಕವಾಗುವುದಿಲ್ಲ, ಆದರೆ ಇದರ ಕಾರ್ಯ ವೈಖರಿ ನೋಡಿದಾಗ ಇದರೆಡಗೆ ಮೆಚ್ಚುಗೆಯಿಂದ ನೋಡುವಿರಿ.

ಅದಕ್ಕೆ ಕಾರಣ ಈ ಕೆಳಗಿನ ಪ್ರಮುಖ ಗುಣಲಕ್ಷಣಗಳು:

* 12.5 ಇಂಚಿನ ಡಿಸ್ ಪ್ಲೇ

* 1366 x 768 ಪಿಕ್ಸಲ್ ಸ್ಕ್ರೀನ್ ರೆಸ್ಯೂಲೇಶನ್

* 128 GB ಅತ್ಯುತ್ತವಾಗಿರುವ ಡ್ರೈವ್

* ಇಂಟಲ್ ಕೋರ್ i5-2540 ಪ್ರೊಸೆಸರ್ ಅಥವಾ i7-2630M ಪ್ರೊಸೆಸರ್

* 4-8GB ಸಿಸ್ಟಮ್ ಮೆಮೊರಿ

* ಇಂಟಿಗ್ರೇಟಡ್ HD 3000 ಗ್ರಾಫಿಕ್ ಪ್ರೊಸೆಸಿಂಗ್ ಯೂನಿಟ್

* 1080p ವೀಡಿಯೊ ಪ್ಲೇ ಬ್ಯಾಕ್

* 7.30 ಗಂಟೆ ಬ್ಯಾಟರಿ ಸಾಮರ್ಥ್ಯ

* 1.7 ಕೆ.ಜಿ

* ವಿಂಡೋಸ್ 7 ಆಪರೇಟಿಂಗ್ ಸಿಸ್ಟಮ್

* eSATA/USB ಕಾಂಬೊ ಪೋರ್ಟ್

* USB 2.0 ಪೋರ್ಟ್

* HDMI ಪೋರ್ಟ್

* ಬ್ಲೂಟೂಥ್

* ವೆಬ್ ಕಾಮ್

* ಹೆಡ್ ಫೋನ್ ಜಾಕ್

ಈ ಲ್ಯಾಪ್ ಟಾಪ್ ನೋಡಿದಾಗ ಅದರ ಗಾತ್ರ ನೋಡುಗರನ್ನು ಒಂದು ಕ್ಷಣ ಗೊಂದಲವನ್ನು ಉಂಟು ಮಾಡುತ್ತದೆ. ಈ ಲ್ಯಾಪ್ ಟಾಪ್ ನೆಟ್ ಬುಕ್ ಗಿಂತ ಚಿಕ್ಕ ಗಾತ್ರವನ್ನು ಹೊಂದಿದೆ. ಇದನ್ನು ನೋಡಿದಾಗ ಕಾರ್ಯ ಸಾಮರ್ಥ್ಯ ಅಷ್ಟೇನು ಇಲ್ಲ ಎಂದು ಭಾವಿಸಿದರೆ ಅದು ತಪ್ಪು ಕಲ್ಪನೆ. ಈ ಲ್ಯಾಪ್ ಟಾಪ್ ದೊಡ್ಡ ಗಾತ್ರದ ಲ್ಯಾಪ್ ಟಾಪ್ ಗೆ ಸರಿ ಹೊಂದುವ ಸಾಮರ್ಥ್ಯವನ್ನು ಹೊಂದಿದೆ. ಇದರ ಕೀ ಬೋರ್ಡ್ ಕೂಡ ಟೈಪ್ ಮಾಡಲು ಸುಲಭವಾಗಿದ್ದು ಬಳಕೆದಾರರ ಮೆಚ್ಚುಗೆಯನ್ನು ಗಳಿಸುವಂತೆ ಇದೆ.

ಈ ಲ್ಯಾಪ್ ಟಪ್ ನಲ್ಲಿ ಹೈ ಡೆಫಿಷಿನ್ ವೀಡಿಯೊಗಳನ್ನು ಕೂಡ ನೋಡಬಹುದು. ಇದರ ಗ್ರಾಫಿಕ್ ಕಾರ್ಡ್ 1080 p ವೀಡಿಯೊವನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಲ್ಯಾಪ್ ಟಾಪ್ E6220 ಮಾರುಕಟ್ಟೆ ಬೆಲೆ ರು. 75,000 ಆಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X