ಎರಡು ಡೆಲ್ ಟ್ಯಾಬ್ಲೆಟ್: ಯಾವುದು ಡಲ್?

Posted By: Staff
ಎರಡು ಡೆಲ್ ಟ್ಯಾಬ್ಲೆಟ್: ಯಾವುದು ಡಲ್?
ಡೆಲ್ ಕಂಪನಿಯು ಎರಡು ಗ್ಯಾಡ್ಜೆಟ್ ಪರಿಚಯಿಸಿದೆ. ಅದರ ಹೆಸರು ಡೆಲ್ ಲ್ಯಾಟಿ ಟ್ಯಾಡ್ ಎಸ್ ಟಿ ಮತ್ತು ಡೆಲ್ ಸ್ಟ್ರೀಕ್ 7.  ಇವೆರಡೂ ತಮ್ಮದೇ ವಿಶೇಷ ಫೀಚರುಗಳಿಂದ ಇಷ್ಟವಾಗುತ್ತದೆ.

* ಲ್ಯಾಟಿಟ್ಯೂಡ್ 10.1 ವಿಶಾಲವಾದ ಡಿಸ್ ಪ್ಲೇ ಹೊಂದಿರುವ 816 ಗ್ರಾಮ್ ಟ್ಯಾಬ್ಲೆಟ್ ಆಗಿದೆ. ಡೆಲ್ ಸ್ಟ್ರೀಕ್ 3ಜಿ ಕನೆಕ್ಟಿವಿಟಿ ಹೊಂದಿದ್ದು, ಇದರ ಡಿಸ್ ಪ್ಲೇ 7 ಇಂಚು ಇದೆ.

* ಇವೆರಡೂ ಟ್ಯಾಬ್ಲೆಟ್ ನಲ್ಲೂ ಸೋಷಿಯಲ್ ನೆಟ್ ವರ್ಕಿಂಗ್, ಮನರಂಜನಾ ಅಪ್ಲಿಕೇಷನ್ ಗಳು ಸಾಕಷ್ಟಿವೆ. ಜೊತೆಗೆ ಹಲವು ವಿಡ್ಜೆಟ್ ಗಳು ಟ್ಯಾಬ್ಲೆಟ್ ಸೌಂದರ್ಯ ಹೆಚ್ಚಿಸಿವೆ.

* ಡೆಲ್ ಲ್ಯಾಟಿ ಟ್ಯಾಡ್ ಎಸ್ ಟಿಯು ವಿಂಡೋಸ್ 7 ಅಪರೇಟಿಂಗ್ ಸಿಸ್ಟಮ್ ಹೊಂದಿದೆ. ಡೆಲ್ ಸ್ಟ್ರೀಕ್ ಆಂಡ್ರಾಯ್ಡ್ 2.2 ಫ್ರೊಯೊ ಅಪರೇಟಿಂಗ್ ಸಿಸ್ಟಮ್ ಹೊಂದಿದೆ.

* ಲ್ಯಾಟಿ ಟ್ಯಾಡ್ 2 ಜಿಬಿ RAM ಹೊಂದಿದ್ದು ಬಾಹ್ಯ ಮೆಮೊರಿ ಕಾರ್ಡ್ ಮೂಲಕ ಮೆಮೊರಿ ಸಂಗ್ರಹ ಸಾಮರ್ಥ್ಯವನ್ನು 32 ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದಾಗಿದೆ. ಇದು ಇಂಟೆಲ್ ಝಡ್670 ಪ್ರೊಸೆಸರ್ ಹೊಂದಿದೆ.

* ಇವೆರಡೂ ಟ್ಯಾಬ್ಲೆಟ್ ಗಳಲ್ಲಿರುವ 3ಜಿ ಕನೆಕ್ಟಿವಿಟಿ ಬಿಸಿನೆಸ್ ಮ್ಯಾನ್ ಮತ್ತು ಅಧಿಕಾರಿಗಳಿಗೆ ಪ್ರಮುಖ ವೆಬ್ ಸೈಟ್ ನೋಡಲು ನೆರವಾಗುತ್ತದೆ. ಉಳಿದಂತೆ ಡಾಕ್ಯುಮೆಂಟ್ಸ್ ಪ್ರಸಂಟೇಷನ್ ಕೂಡ ಇದರಲ್ಲಿ ಮಾಡಬಹುದಾಗಿದೆ.

* ಮನರಂಜನೆ ಪ್ರೀಯರು ಲ್ಯಾಟಿಟ್ಯೂಡ್ ಬೆನ್ನಿನಲ್ಲಿರುವ 5.0 ಮೆಗಾಫಿಕ್ಸೆಲ್ ಕ್ಯಾಮರಾವನ್ನು ಹೆಚ್ಚು ಇಷ್ಟಪಡಬಹುದು. ಸ್ಟ್ರೀಕ್ ಕೂಡ 5 ಮೆಗಾಫಿಕ್ಸೆಲ್ ಕ್ಯಾಮರಾ ಹೊಂದಿದೆ. ಇದರ ಮುಂಭಾಗದಲ್ಲಿ ವಿಡಿಯೋ ಚಾಟಿಂಗ್ ಗೆ ನೆರವಾಗುವ 1.3 ಮೆಗಫಿಕ್ಸೆಲ್ ಕ್ಯಾಮರಾವಿದೆ. ಸ್ಕೈಪೆ, ಕ್ವಿಕ್, ಗೂಗಲ್ ಟಾಕ್ ಇತ್ಯಾದಿ ಚಾಟಿಂಗ್ ಗಳು ಇದರಲ್ಲಿ ಕಾರ್ಯನಿರ್ವಹಿಸುತ್ತದೆ.

* ಇವೆರಡು ಟ್ಯಾಬ್ಲೆಟ್ ಕಂಪ್ಯೂಟರ್ ಗಳು ಸಾಕಷ್ಟು ಸುರಕ್ಷತೆ ಫೀಚರುಗಳನ್ನು ಹೊಂದಿರುವುದರಿಂದ ಹ್ಯಾಕರ್ಸ್ ಗಳಿಗೆ ಭಯಪಡಬೇಕಿಲ್ಲ.

* ಎರಡೂ ಟ್ಯಾಬ್ಲೆಟ್ ಗಳು ವೈಫೈ, ಬ್ಲೂಟೂಥ್, ಲ್ಯಾನ್ ಇತ್ಯಾದಿ ಕನೆಕ್ಟಿವಿಟಿ ಆಯ್ಕೆಗಳನ್ನು ಹೊಂದಿವೆ. ಈ ಟ್ಯಾಬ್ಲೆಟ್ ಗಳು ಮೈಕ್ರೊಸಾಫ್ಟ್ ಆಫೀಸ್ ಟೂಲ್ ಕೂಡ ಹೊಂದಿದೆ. ಹೀಗಾಗಿ ಇದು ಪರ್ಫೆಕ್ಟ್ ಬಿಸಿನೆಸ್ ಟ್ಯಾಬ್ಲೆಟ್.

* ಡೆಲ್ ಲ್ಯಾಟಿಟ್ಯೂಡ್ ಎಸ್ ಟಿ ದರ ಸುಮಾರು 36 ಸಾವಿರ ರುಪಾಯಿ. ಡೆಲ್ ಸ್ಟ್ರೀಕ್ 7 ದರ ಸುಮಾರು 25 ಸಾವಿರ ರುಪಾಯಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot