ಇನ್ಫಿನಿಟಿ ಡಿಸ್ ಪ್ಲೇ ಲ್ಯಾಪ್ ಟಾಪ್ ಲಾಂಚ್ ಮಾಡಿದ ಡೆಲ್

Written By: Lekhaka

ಇನ್ಫಿನಿಟಿ ಡಿಸ್ ಪ್ಲೇ ಇರುವ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದವು ಆದರೆ ಇದೇ ಮೊದಲ ಬಾರಿಗೆ ಡೆಲ್ ಕಂಪನಿಯೂ ವಿಶ್ವದ ಮೊದಲ ಇನ್ಫಿನಿಟಿ ಡಿಸ್ ಪ್ಲೇ ಹೊಂದಿರುವ ಲ್ಯಾಪ್ ಟಾಪ್ ಅನ್ನು ಬಿಡುಗಡೆ ಮಾಡಿದೆ. ಇದು ಪ್ರಿಮಿಯಮ್ ಸರಣಿಯ ನೋಟ್ ಬುಕ್ ಆಗಿದ್ದು, ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ.

ಇನ್ಫಿನಿಟಿ ಡಿಸ್ ಪ್ಲೇ ಲ್ಯಾಪ್ ಟಾಪ್ ಲಾಂಚ್ ಮಾಡಿದ ಡೆಲ್

ಡೆಲ್ ಬಿಡುಗಡೆ ಮಾಡಿರುವ XPS 15 ನೋಟ್ ಬುಕ್ ಕಂಪನಿಯ ಅಧಿಕೃತ ವೆಬ್ ಸೈಟ್, ಅಧಿಕೃತ ಸ್ಟೋರ್ ಸೇರಿದಂತೆ ಕ್ರೊಮಾ, ರಿಲಯನ್ಸ್ ಡಿಜಿಟಲ್ ಸೇರಿದಂತೆ ಪ್ರಮುಖ ಲ್ಯಾಪ್ ಟಾಪ್ ಮಾರಾಟ ಮಾಡುವ ಅಂಗಡಿಗಳಲ್ಲಿ ದೊರೆಯಲಿದೆ ಎನ್ನಲಾಗಿದೆ. ಇದರ ಬೆಲೆ ರೂ.1,17,990 ಆಗಲಿದೆ.

ಇದು ವಿಶ್ವದ ಅತೀ ಪವರ್ ಫುಲ್ ಹಾಗೂ ಅತೀ ಚಿಕ್ಕ 15 ಇಂಚಿನ ನೋಟ್ ಬುಕ್ ಎಂಬ ಖ್ಯಾತಿಗೆ ಪಾತ್ರವಾಗಿದೆ ಎನ್ನಲಾಗಿದೆ. ಇದರಲ್ಲಿ 7ನೇ ತಲೆಮಾರಿನ ಇಂಟೆಲ್ ಕ್ವಾಡ್ ಕೋರ್ ಪ್ರೊಸೆಸರ್ ಅಳವಡಿಸಲಾಗಿದೆ. ಇದರೊಂದಿಗೆ NVIDIA GTX 1050 4GB ಗ್ರಾಫಿಕ್ ಕಾರ್ಡ್ ಅಳವಡಿಸಲಾಗಿದೆ.

IRCTC ಆಪ್ ನಲ್ಲಿ ಮತ್ತಷ್ಟು ಸುಲಭ ಮತ್ತು ತ್ವರಿತ ಸೇವೆ..!

15.6 ಇಂಚಿನ ಡಿಸ್ ಪ್ಲೇಯನ್ನು ಇದರಲ್ಲಿ ಕಾಣಬಹುದಾಗಿದ್ದು, ಡೆಲ್ ಇದುವರೆಗೂ ನಿರ್ಮಿಸಿರುವ ಅತೀ ವೇಗದ ಮತ್ತು ಕಡಿಮೆ ತೂಕದ ಲ್ಯಾಪ್ ಟಾಪ್ ಇದಾಗಿದೆ. ಕೇವಲ 1.8 ಕೆಜಿ ತೂಕವನ್ನು ಹೊಂದಿದೆ ಎನ್ನಲಾಗಿದ್ದು, ಅಲ್ಯೂಮಿನಿಯಮ್ ನಿಂದ ಮಾಡಲಾಗಿದೆ. ಇದು 19 ಗಂಟೆಗಳ ಬ್ಯಾಕಪ್ ನೀಡಲಿದೆ ಎನ್ನಲಾಗಿದೆ.

ಇದರಲ್ಲಿ ಡ್ಯುಯಲ್ ಮೈಕ್ರೊಫೋನ್ ಅಳವಡಿಸಲಾಗಿದ್ದು, ಸ್ಟೀರಿಯೋ ಸ್ಪೀಕರ್ ಸಪೋರ್ಟ್ ಮಾಡಲಿದೆ. ಇದರಲ್ಲಿರುವ 4K ಗುಣಮಟ್ಟದ ಡಿಸ್ ಪ್ಲೇಯಾಗಿದ್ದು, ವಿಡಿಯೋ ನೋಡಲು ಗೇಮ್ ಆಡಲು ಉತ್ತಮವಾಗಿದೆ. ಅಲ್ಲದೇ ಇದು ಮಲ್ಟಿ ಡಿಸ್ ಪ್ಲೇಗಳನ್ನು ಸಫೋರ್ಟ್ ಸಹ ಮಾಡಲಿದೆ.

Read more about:
English summary
Dell launches XPS 15 notebook with world’s first InfinityEdge display in India at Rs. 1,17,990
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot