ಡೆಲ್ ನ ವಿಂಡೋಸ್ 8 ಟ್ಯಾಬ್ಲೆಟ್ ನಲ್ಲಿ ಏನಿದೆ

Posted By: Varun
ಡೆಲ್ ನ ವಿಂಡೋಸ್ 8 ಟ್ಯಾಬ್ಲೆಟ್ ನಲ್ಲಿ ಏನಿದೆ

ವಿಶ್ವದ ಅಗ್ರಗಣ್ಯ ಪಿ.ಸಿ ಹಾಗು ಲ್ಯಾಪ್ಟಾಪ್ ಉತ್ಪಾದಕ ಡೆಲ್, ವಿಂಡೋಸ್ ನ 8 ತಂತ್ರಾಂಶ ವಿರುವ ಟ್ಯಾಬ್ಲೆಟ್ ಅನ್ನು ಹೊರತರಲಿದೆ ಎಂಬ ಸುದ್ದಿ ನಿಮಗೆ ಗೊತ್ತೇ ಇದೆ. ಹೆಚ್ಚುತ್ತಿರುವ ಆಂಡ್ರಾಯ್ಡ್ ಆಧಾರಿತ ಟ್ಯಾಬ್ಲೆಟ್ ಗಳು ವಿಶ್ವದೆಲ್ಲೆಡೆ ಖ್ಯಾತವಾಗಿರುವ ಸಂಧರ್ಭದಲ್ಲಿ ಡೆಲ್, ಬಹುನಿರೀಕ್ಷಿತ ವಿಂಡೋಸ್ 8 ತಂತ್ರಾಂಶ ಆಧಾರಿತ ಟ್ಯಾಬ್ಲೆಟ್ ಅನ್ನು ಹೊರತರಲಿರುವುದು ಹಲವರ ಹುಬ್ಬೇರಿಸಿದೆ.

ಅದರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೈಕೆಲ್ ಡೆಲ್ ರ ಪ್ರಕಾರ, ತಮ್ಮ ವಿಂಡೋಸ್ 8 ಟ್ಯಾಬ್ಲೆಟ್ ನಿಂದಾಗಿ ಕಾರ್ಪೋರೆಟ್ ಗ್ರಾಹಕರರಿಗೆ ಮೈಕ್ರೋಸಾಫ್ಟ್ ನ ಆಫಿಸ್ ಅಪ್ಲಿಕೇಶನ್ ಗಳನ್ನು ಉಪಯೋಗಿಸಲು ಸಾಧ್ಯವಾಗುವುದಲ್ಲದೆ ಕಾರ್ಪೋರೆಟ್ ನೆಟ್ವರ್ಕ್ ಗಳಿಗೆ ಹೊಂದಾಣಿಕೆಯಾಗುವಂತೆ ಸಿದ್ದಪಡಿಸಲಾಗುವುದು ಎಂದಿದ್ದಾರೆ.

Latitude 10 ಎಂದು ಈ ಟ್ಯಾಬ್ಲೆಟ್ ಗೆ ಹೆಸರಿಡಲಾಗಿದ್ದು, ಅಕ್ಟೋಬರ್ ನಲ್ಲಿ ವಿಂಡೋಸ್ 8 ಆವೃತ್ತಿ ಬಿಡುಗಡೆಯಾಗುವ ದಿನದಂದೇ ಈ ಟ್ಯಾಬ್ಲೆಟ್ ಮಾರುಕಟ್ಟೆಗೆ ಬರಲಿದೆ ಎಂದು ಪ್ರಕಟಿಸಿದೆ.

ಈ ಟ್ಯಾಬ್ಲೆಟ್ ನ ಸ್ಪೆಸಿಫಿಕೇಶನ್ ಗಳು ಈ ರೀತಿ ಇರಲಿವೆ ಎನ್ನಲಾಗಿದೆ:

 • 10 ಇಂಚಿನ ಟಚ್ ಸ್ಕ್ರೀನ್

 • ವಿಂಡೋಸ್ 8 ತಂತ್ರಾಂಶ

 • ಡ್ಯುಯಲ್ ಕೋರ್ ಇಂಟೆಲ್ ಆಟಮ್ ಕ್ಲೋವರ್ ಪ್ರೋಸೆಸರ್

 • 720 p HD ಡಿಸ್ಪ್ಲೇ

 • ಇಂಟಿಗ್ರೇಟೆಡ್ 2 GB ರಾಮ್

 • ಇಂಟೆಲ್ ಗ್ರಾಫಿಕ್ಸ್

 • 128 GB ಐಚ್ಛಿಕ ಮೆಮೊರಿ

 • 8 ಮೆಗಾಪಿಕ್ಸೆಲ್ ಕ್ಯಾಮೆರಾ

 • 3G ಮತ್ತು ವೈಫೈ

 • ಸ್ಪೀಕರ್, ಸ್ಟೀರಿಯೋ ಹೆಡ್ ಫೋನ್

 • 10 ಗಂಟೆಗಳವರೆಗೆ ಕಾರ್ಯ ನಿರ್ವಹಿಸುವ ಸಾಮರ್ಥ್ಯವಿರುವ 6 ಸೆಲ್ ಬ್ಯಾಟರಿ
 

ಡೆಲ್, ಈ ರೀತಿಯ ಹೈ ಎಂಡ್ ಫೀಚರುಗಳು ಇರುವ ಟ್ಯಾಬ್ಲೆಟ್ ಅನ್ನು ಹೊರತರುತ್ತಿರುವುದು ಖಂಡಿತವಾಗಿಯೂ ವಿಂಡೋಸ್ ಬಳಕೆದಾರರಿಗೆ ಸಂತಸದ ವಿಷಯವಾಗಿದೆ.

 

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot