Subscribe to Gizbot

ಆಕಾಶ್ ನಂತರದ ಇನ್ನೊಂದು ದೇಶಿ ಟ್ಯಾಬ್ಲೆಟ್

Posted By: Super
ಆಕಾಶ್ ನಂತರದ ಇನ್ನೊಂದು ದೇಶಿ ಟ್ಯಾಬ್ಲೆಟ್
ವಿಶ್ವದ ಅಗ್ಗದ ಟ್ಯಾಬ್ಲೆಟ್ ಕಂಪ್ಯೂಟರ್ ಖ್ಯಾತಿಯ ಆಕಾಶ್ ಟ್ಯಾಬ್ಲೆಟ್ ಸೃಷ್ಟಿಸಿದ ಹವಾ ಇನ್ನೂ ಮರೆಯಾಗಿಲ್ಲ. ಇದೀಗ ಹೈದರಾಬಾದ್ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಹೊಸ ಟ್ಯಾಬ್ಲೆಟ್ ಅಭಿವೃದ್ಧಿಪಡಿಸಿದ್ದಾರೆ. ಇದರ ಹೆಸರು ಎವಿಇ(AVE). ಇದು ಅಂತಾರಾಷ್ಟ್ರೀಯ ಗುಣಮಟ್ಟದ ದೇಶಿ ಟ್ಯಾಬ್ಲೆಟ್ ಕಂಪ್ಯೂಟರ್ ಆಗಿದೆ.

ಚಿಮನ್ ಪ್ರಕಾಶ್ ಮತ್ತು ನಿಖಿಲ್ ಅಭಿವೃದ್ಧಿಪಡಿಸಿರುವ ನೂತನ AVE ಟ್ಯಾಬ್ಲೆಟ್ ಆಂಡ್ರಾಯ್ಡ್ 2.3 ಜಿಂಜರ್ ಬ್ರೀಡ್ ಪ್ಲಾಟ್ ಫಾರ್ಮ್ ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಉತ್ಪನ್ನವನ್ನು ಹೈದರಾಬಾದಿನ ಸಂವಹನ ಮತ್ತು ಮಾಹಿತಿ ಸಚಿವ ಮಾರುಕಟ್ಟೆಗೆ ಅನಾವರಣ ಮಾಡಿದ್ದಾರೆ.

ನೂತನ ಟ್ಯಾಬ್ಲೆಟ್ ಕಂಪ್ಯೂಟರ್ AVE ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿದೆ ಎಂದು ಪ್ರಕಾಶ್ ಮತ್ತು ನಿಖಿಲ್ ಹೇಳುತ್ತಾರೆ. ಈ ಟ್ಯಾಬ್ಲೆಟ್ ಮೊದಲ ತಿಂಗಳಲ್ಲೇ ಸುಮಾರು ಒಂದು ಸಾವಿರ ಯುನಿಟ್ ಮಾರಾಟವಾಗುವ ನಿರೀಕ್ಷೆಯೂ ಇವರಿಗಿದೆ.

ಸಾರೆಡಿ ಟೆಕ್ನಾಲಜಿಸ್ ಲಿಮಿಟೆಡ್ ಮೂಲಕ ಈ ಟ್ಯಾಬ್ಲೆಟ್ ಕಂಪ್ಯೂಟರ್ ಉತ್ಪಾದನೆ ಕೈಗೊಳ್ಳಲಾಗುವುದಂತೆ. ಈ ಕಂಪನಿ ಚಿಮನ್ ಪ್ರಕಾಶ್ ತಂದೆಯ ಮಾಲಿಕತ್ವದ್ದು. ಇದು ಮೊಬೈಲ್ ಗೇಮ್ಸ್ ಅಭಿವೃದ್ಧಿಪಡಿಸುವ ಕಂಪನಿಯಾಗಿದೆ.

ನೂತನ ಟ್ಯಾಬ್ಲೆಟ್ ಆಂಡ್ರಾಯ್ಡ್ ಪ್ಲಾಟ್ ಫಾರ್ಮ್ ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 1.3 ಗಿಗಾಹರ್ಟ್ಸ್ ಪ್ರೊಸೆಸರ್ ಹೊಂದಿದೆ. ಇದರ ಸ್ಕ್ರೀನ್ ಗಾತ್ರ ಕೇವಲ 7 ಇಂಚಿದೆ ಅಷ್ಟೇ. ಇದು 8 ಜಿನಿ ಆಂತರಿಕ ಮೆಮೊರಿ ಹೊಂದಿದ್ದು, ನಮ್ಮ ಅಗತ್ಯಗಳಿಗೆ ಬೇಕಾದಷ್ಟು(ಸುಮಾರು 32 ಜಿಬಿವರೆಗೆ) ಮೆಮೊರಿ ಕಾರ್ಡ್ ಮೂಲಕ ವಿಸ್ತರಿಸಿಕೊಳ್ಳಬಹುದಾಗಿದೆ. ಈ ಟ್ಯಾಬ್ಲೆಟ್ ಕಂಪ್ಯೂಟರ್ ದರ ಸುಮಾರು 12 ಸಾವಿರ ರುಪಾಯಿ. ಇರಲಿದೆಯಂತೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot