E-Fun ನಿಂದ ಹೊಸ 7S ಆಂಡ್ರಾಯ್ಡ್ 4.0 ಟ್ಯಾಬ್ಲೆಟ್

Posted By: Varun
E-Fun ನಿಂದ ಹೊಸ 7S ಆಂಡ್ರಾಯ್ಡ್ 4.0 ಟ್ಯಾಬ್ಲೆಟ್

ಆಂಡ್ರಾಯ್ಡ್ 4.0 ತಂತ್ರಾಂಶ ಹೊಂದಿರುವ ಕೆಲವೇ ಮಾದರಿಯ ಟ್ಯಾಬ್ಲೆಟ್ಟುಗಳು ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ವಿಧವಿಧವಾದ ಲೈಫ್ ಸ್ಟೈಲ್ ಉತ್ಪನ್ನಗಳನ್ನು ಉತ್ಪಾದಿಸುವ E-Fun ಎಂಬ ಕಂಪನಿಯು ಈಗ ಆಂಡ್ರಾಯ್ಡ್ 4.0 ಟ್ಯಾಬ್ಲೆಟ್ ಒಂದನ್ನು ಹೊರತಂದಿದೆ.

ಈ E-Fun ಟ್ಯಾಬ್ಲೆಟ್ ನ ಫೀಚರುಗಳು ಈ ರೀತಿ ಇವೆ:

  • 7-ಇಂಚಿನ, 800 X 480 ಪಿಕ್ಸೆಲ್ ರೆಸಲ್ಯೂಶನ್ ಡಿಸ್ಪ್ಲೇ

  • 1GHz ಸಿಂಗಲ್ ಕೋರ್ ಪ್ರೊಸೆಸರ್

  • ಹೈ-ಡೆಫಿನಿಶನ್ ವೀಡಿಯೋ ಪ್ಲೇಯರ್

  • 4GB ಆಂತರಿಕ ಮೆಮೊರಿ ಹಾಗು 32GB ವರೆಗೂ ವಿಸ್ತರಿಸಬಹುದಾದ ಮೆಮೊರಿ

  • ಮೈಕ್ರೊ ಕಾರ್ಡ್ ಸ್ಲಾಟ್

  • 3.5 ಲಕ್ಷ ಆಪ್ಸ್ ಡೌನ್ಲೋಡ್ ಮಾಡಬಹುದಾದ GetJar ಆಪ್ ಸ್ಟೋರ್

  • ಜಿ-ಸೆನ್ಸಾರ್

  • 2.0 ಮಿನಿ-USB ಪೋರ್ಟ್

  • ಫ್ಲ್ಯಾಶ್ 11

  • ಆಂತರಿಕ ವೈ-ಫೈ
 

ಮೈಕ್ರೋಮ್ಯಾಕ್ಸ್, ಕಾರ್ಬನ್ ಕಂಪನಿಗಳು ಇತ್ತೀಚಿಗೆ ಬಿಡುಗಡೆಮಾಡಿದ ಟ್ಯಾಬ್ಲೆಟ್ ಗಳಿಗಿಂತಾ ಈ ಟ್ಯಾಬ್ಲೆಟ್ ನಲ್ಲಿ ಹಲವಾರು ವಿಶೇಷಗಳಿದ್ದು 7,000 ರೂಪಾಯಿಗೆ ಈ ಟ್ಯಾಬ್ಲೆಟ್ ಅನ್ನು ಮಾರಾಟ ಮಾಡಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot