ರೂ.13,500ಕ್ಕೆ ಇಂಟೆಲ್ ಪ್ರೋಸೆಸರ್ ಇರುವ ವಿಂಡೋಸ್ 10 ಮಿನಿ ಕಂಪ್ಯೂಟರ್..!
ದಿನ ಕಳೆದಂತೆ ಎಲ್ಲಾ ವಸ್ತುಗಳ ಗಾತ್ರವೂ ಚಿಕ್ಕದಾಗುವುದರೊಂದಿಗೆ ಸ್ಮಾರ್ಟ್ ಆಗುತ್ತಿವೆ. ಇದೇ ಮಾದರಿಯಲ್ಲಿ ಆಲ್ಟ್ರಾ ಕಾಂಪ್ಯಾಕ್ಟ್ ಪಿಸಿ ಮಾರುಕಟ್ಟೆಯನ್ನು ಪ್ರವೇಶಿಸಿದೆ ಎನ್ನಲಾಗಿದೆ. LIVA Q ಹೆಸರಿನ ಪಾಕೆಟ್ ಪಿಸಿ, ಕಂಪ್ಯೂಟರ್ ಬಳಕೆಯ ವಿಧಾವನ್ನು ಬದಲಾಯಿಸಲಿದೆ. ಅಲ್ಲದೇ ಕಂಪ್ಯೂಟರ್ ಗಾತ್ರವನ್ನು ತೀರಾ ಚಿಕ್ಕದು ಮಾಡಿದೆ.
ಸಾಮಾನ್ಯ ಕಂಪ್ಯೂಟರ್ ನಲ್ಲಿ ಇರುವಂತಹ ಎಲ್ಲಾ ಆಯ್ಕೆಗಳನ್ನು LIVA Q ಮಿನಿ ಕಂಪ್ಯೂಟರ್ ನಲ್ಲಿ ನೋಡಬಹುದಾಗಿದ್ದು, ಬೇರೆ ಊರಿನಲ್ಲಿ ಕೆಲಸದಲ್ಲಿ ಇದ್ದು ಮತ್ತೇ ಮನೆಗೆ ಹಿಂದಿರುಗುವವರು ಸಾಮಾನ್ಯ ಕಂಪ್ಯೂಟರ್ ಅನ್ನು ಸಾಗಿಸಲು ಕಷ್ಟ ಪಡಬಹುದು. ಅಂತವರಿಗಾಗಿಯೇ ಈ ಮಿನಿ ಕಂಪ್ಯೂಟರ್ ಅನ್ನು ವಿನ್ಯಾಸ ಮಾಡಲಾಗಿದೆ.

ಎಲ್ಲಾ ಆಯ್ಕೆಗಳು ಇದೆ:
LIVA Q ಮಿನಿ ಕಂಪ್ಯೂಟರ್ ವಿಂಡೋಸ್ 10 ಸಪೋರ್ಟ್ ಮಾಡುವುದಲ್ಲದೇ ಲಿನೆಕ್ಸ್ ಆಪರೇಟಿಂಗ್ ಸಿಸ್ಟಮ್ ಅನ್ನು ಬಳಕೆ ಮಾಡಿಕೊಳ್ಳುವಂತೆ ವಿನ್ಯಾಸ ಮಾಡಲಾಗಿದೆ. ಗಾತ್ರ ಚಿಕ್ಕದಾದ ಕಾರಣಕ್ಕೆ ಯಾವುದೇ ರಾಜಿಯನ್ನು ಮಾಡಿಕೊಂಡಿಲ್ಲ.

ವಿಶೇಷತೆಗಳ:
LIVA Q ಮಿನಿ ಕಂಪ್ಯೂಟರ್‌ನಲ್ಲಿ 4GB RAM ಕಾಣಬಹುದಾಗಿದ್ದು, ಇದರೊಂದಿಗೆ 64GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ. ಅಲ್ಲದೇ HDMI 2.0 ಪೋರ್ಟ್ ಅನ್ನು ಕಾಣಬಹುದಾಗಿದೆ. ಅಲ್ಲದೇ 4K ವಿಡಿಯೋಗಳನ್ನು ಪ್ರೋಸೆಸ್ ಮಾಡಲಿದೆ.

ಇಂಟೆಲ್ ಪ್ರೋಸೆಸರ್:
ಇದಲ್ಲದೇ LIVA Q ಮಿನಿ ಕಂಪ್ಯೂಟರ್ ನಲ್ಲಿ ಇಂಟೆಲ್ ಆಪೊಲೋ ಲಾಕೆ ಪ್ರೋಸೆಸರ್ ಅನ್ನು ಒಳಗೊಂಡಿದ್ದು, ಎಲ್ಲಾ ಮಾದರಿಯ ಕೆಲಸ ಕಾರ್ಯಗಳಿಗೆ ಸರಿ ಹೊಂದುವಂತಿದೆ.


250 ಗ್ರಾಂ ತೂಕ
ಗಾತ್ರ ಮಾತ್ರವಲ್ಲದೇ ತೂಕದಲ್ಲಿಯೂ ಲೈಟ್ ವೆಯ್ಟ್ ಆಗಿರುವ LIVA Q ಕೇವಲ ಕಾಲು ಕೆಜಿ ತೂಕವನ್ನು ಹೊಂದಿದೆ. ಅಲ್ಲದೇ ಮಾನಿಟರ್ ಹಿಂಭಾಗದಲ್ಲಿ ಅಡಗಿಸಿ ಇಡುವಷ್ಟು ಸಣ್ಣ ಗಾತ್ರದಲ್ಲಿದೆ.

ಬೆಲೆ:
ರೂ.13,500ಕ್ಕೆ LIVA Q ಮಾರಾಟವಾಗಲಿದ್ದು, ವಿಂಡೋಸ್ 10 ನೊಂದಿಗೆ ಖರೀದಿಸಬೇಕಾದರೆ ರೂ.15,500 ಪಾವತಿ ಮಾಡಬೇಕಾಗಿದೆ. ವಿಂಡೋಸ್ ಬೇಡವಾದವರಿಗೆ ಕಡಿಮೆ ಬೆಲೆಗೆ ದೊರೆಯಲಿದೆ. ಸಾಮಾನ್ಯ ಮಾರುಕಟ್ಟೆ ಮತ್ತು ಆನ್‌ಲೈನಿನಲ್ಲಿ ಮಾರಾಟಕ್ಕೆ ಲಭ್ಯವಿದೆ.


Click it and Unblock the Notifications



